ಬೆಂಗಳೂರಿನಲ್ಲಿ ಏರ್ ಇಂಡಿಯಾದಿಂದ ವಿಮಾನ ನಿರ್ವಹಣೆ ತರಬೇತಿ ಸಂಸ್ಥೆ ಸ್ಥಾಪನೆ!

ವಿಮಾನ ನಿರ್ವಹಣಾ ಎಂಜಿನಿಯರಿಂಗ್ ತರಬೇತಿ ಕಾರ್ಯಕ್ರಮಕ್ಕಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (BIAL) ನೊಂದಿಗೆ ಒಪ್ಪಂದಕ್ಕೆ ಸಹಿ
Casual Images
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಐಟಿ ರಾಜಧಾನಿ ಬೆಂಗಳೂರಿನಲ್ಲಿ ಮೂಲಭೂತ ನಿರ್ವಹಣೆ ತರಬೇತಿ ಸಂಸ್ಥೆ(BMTO) ಸ್ಥಾಪಿಸಲಾಗುತ್ತಿದೆ ಎಂದು ಏರ್ ಇಂಡಿಯಾ ಶುಕ್ರವಾರ ಹೇಳಿದೆ. ಇದು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಪ್ರಮಾಣೀಕರಿಸಿದ ಸಂಯೋಜಿತ 2 + 2 ವರ್ಷಗಳ ವಿಮಾನ ನಿರ್ವಹಣೆ ಎಂಜಿನಿಯರಿಂಗ್ ತರಬೇತಿ( AME) ನೀಡಲಿದೆ. BMTO ಭಾರತದಲ್ಲಿ ದೃಢವಾದ, ಭವಿಷ್ಯಕ್ಕೆ ಸಿದ್ಧವಾದ ವಾಯುಯಾನ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವತ್ತ ಒಂದು ಹೆಜ್ಜೆಯಾಗಿದೆ ಎಂದು ಏರ್ ಇಂಡಿಯಾ ಕಂಪನಿ ಹೇಳಿದೆ.

ಇದು ಏರ್ ಇಂಡಿಯಾ ವಿಮಾನ ನಿರ್ವಹಣಾ ಎಂಜಿನಿಯರ್‌ಗಳ ಲಭ್ಯತೆಯನ್ನು ಬಲಪಡಿಸುವುದರೊಂದಿಗೆ ಸ್ವಾವಲಂಬಿಯನ್ನಾಗಿ ಮಾಡುತ್ತದೆ ಪ್ರಕಟಣೆಯಲ್ಲಿ ತಿಳಿಸಿದೆ. ವಿಮಾನ ನಿರ್ವಹಣಾ ಎಂಜಿನಿಯರಿಂಗ್ ತರಬೇತಿ ಕಾರ್ಯಕ್ರಮಕ್ಕಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (BIAL) ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಪ್ರಾಯೋಗಿಕ ತರಬೇತಿ ಮತ್ತು ಅರ್ಹ ತರಬೇತಿದಾರರಿಗಾಗಿ ಆಧುನಿಕ ತರಗತಿ ಕೊಠಡಿಗಳು, ಸುಸಜ್ಜಿತ ಪ್ರಯೋಗಾಲಯವನ್ನು ಒಳಗೊಂಡಿರುತ್ತದೆ.

ಬೆಂಗಳೂರು ಏರ್‌ಪೋರ್ಟ್ ಸಿಟಿಯಲ್ಲಿ ಸುಮಾರು 86,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗುವ ಕ್ಯಾಂಪಸ್ 2026 ರ ಮಧ್ಯಭಾಗದಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ವಿಮಾನ ನಿರ್ವಹಣೆ ಮತ್ತು ಎಂಜಿನಿಯರಿಂಗ್ ಕಾರ್ಯಾಚರಣೆಗಳಿಗಾಗಿ ನುರಿತ ವೃತ್ತಿಪರರ ಕಾರ್ಯಪಡೆಯನ್ನು ಬೆಳೆಸುವುದು BMTO ಯ ಗುರಿಯಾಗಿದೆ. ಅಲ್ಲಿ ವಿದ್ಯಾರ್ಥಿಗಳು ಅನುಭವ ಮತ್ತು ತರಬೇತಿಯನ್ನು ಪಡೆಯುತ್ತಾರೆ, ಉದ್ಯಮದ ಮಾನದಂಡಗಳು ಮತ್ತು ಏರ್ ಇಂಡಿಯಾದ ನಿರ್ದಿಷ್ಟ ಅವಶ್ಯಕತೆಗಳಿಗೆ ಬದ್ಧರಾಗುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ನೂತನ BMTO ಕಾರ್ಯಾರಂಭಿಸುವವರೆಗೂ ಏರ್ ಇಂಡಿಯಾ ತನ್ನ ಬದ್ಧತೆಯ ಖಾತ್ರಿಗಾಗಿ ಬೆಂಗಳೂರು ಮತ್ತು ಹೈದರಾಬಾದ್‌ನ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಕೆಡೆಟ್ AME ಕಾರ್ಯಕ್ರಮವನ್ನು ಜಾರಿಗೊಳಿಸುತ್ತದೆ. BMTO ಪ್ರಾರಂಭದಿಂದಲೇ ಏರ್ ಇಂಡಿಯಾ ಗುಣಮಟ್ಟಕ್ಕೆ ತಕ್ಕತೆ ತರಬೇತಿ ಪಡೆದ ನುರಿತ ಎಂಜಿನಿಯರ್‌ಗಳನ್ನು ಹೊಂದಲಿದೆ ಎಂದು ಏರ್ ಇಂಡಿಯಾ ಏವಿಯೇಷನ್ ​​ಅಕಾಡೆಮಿ ನಿರ್ದೇಶಕ ಸುನಿಲ್ ಭಾಸ್ಕರನ್ ಹೇಳಿದ್ದಾರೆ.

Casual Images
ಬೆಂಗಳೂರು 2ನೇ ವಿಮಾನ ನಿಲ್ದಾಣ: ಅಂತಿಮ ಸುತ್ತಿನಲ್ಲಿ 5 ಸ್ಥಳ, ವಾರದಲ್ಲಿ ತೀರ್ಮಾನ ಎಂದ ಸರ್ಕಾರ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸನ್ನಿಹದಲ್ಲಿ BMTO ಸ್ಥಾಪನೆಯಿಂದ AME ಕೆಡೆಟ್‌ಗಳು ನೈಜ-ಪ್ರಪಂಚದ ಅನುಭವವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಅಗತ್ಯಗಳಿಗೆ ಅನುಗುಣವಾಗಿ ವೃತ್ತಿಪರರಾಗಿ ಅವರ ಭವಿಷ್ಯವನ್ನು ಬೆಂಬಲಿಸುತ್ತದೆ. AME ಪದವೀಧರರಿಗೆ ವಿಶೇಷ ವೃತ್ತಿ ಮಾರ್ಗಗಳನ್ನು ಒದಗಿಸುತ್ತದೆ.ವಿಶ್ವವಿದ್ಯಾನಿಲಯದ ಸಹಭಾಗಿತ್ವದೊಂದಿಗೆ ಏಕಕಾಲದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಂದುವರಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತದೆ, ಇದು ಅವರ ಶೈಕ್ಷಣಿಕ ಮತ್ತು ವೃತ್ತಿ ಅವಕಾಶಗಳನ್ನು ಹೆಚ್ಚಿಸುತ್ತದೆ ಎಂದು ಕಂಪನಿ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com