ಬೆಂಗಳೂರು: ಮೂರು ವಾರಗಳ ಹಿಂದೆ ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್‌ಡಿಎ ರುದ್ರೇಶ್ ಯಾದವಣ್ಣನವರ್ ಆತ್ಮಹತ್ಯೆ ಮಾಡಿಕೊಂಡ ನಂತರ ಪೊಲೀಸರು ಪ್ರಥಮ ಬಾರಿಗೆ ಆರೋಪಿಗಳಾದ ತಹಶೀಲ್ದಾರ್ ಬಸವರಾಜ ನಾಗರಾಳ್, ಸಚಿವ ಪಿಎ ಸೋಮು ದೊಡವಾಡಿ ಮತ್ತು ಎಫ್‌ಡಿಎ ಅಶೋಕ್ ಕಬ್ಬಲಿಗೇರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ವಿಚಾರಣೆ ವೇಳೆ ಆತ್ಮಹತ್ಯೆಯ ಘಟನೆಯ ಬಗ್ಗೆ ಪ್ರಶ್ನೆಗಳ ಸರಮಾಲೆಯನ್ನೇ ಕೇಳಿದ್ದಾರೆ. ಜೊತೆಗೆ, ಯಾದವಣ್ಣನವರ್ ಅವರು ಅಧಿಕೃತ ಗುಂಪಿನಲ್ಲಿ ಹಂಚಿಕೊಂಡ ಸಂದೇಶಗಳನ್ನು ಅವರು ಸಾಯುವ ಗಂಟೆಗಳ ಮೊದಲು ಅವರು ಏಕೆ ಅಳಿಸಿದ್ದಾರೆ ಎಂಬುದನ್ನು ಪೊಲೀಸರು ಮುಖ್ಯವಾಗಿ ತಹಶೀಲ್ದಾರ್‌ರಿಂದ ತಿಳಿದುಕೊಳ್ಳಬೇಕಾಗಿತ್ತು. ಹೀಗಾಗಿ ಯಾದವಣ್ಣನವರ್ ಅವರ ಸಂದೇಶವನ್ನು ಏಕೆ ಅಳಿಸಿದ್ದಾರೆ, ಅವರು ಸಾಯುವ ಗಂಟೆಗಳ ಮೊದಲು ಏನು ಕಳುಹಿಸಿದ್ದರು ಎಂದು ಪ್ರಸ್ನಿಸಿದ್ದಾರೆ. ಯಾದಣ್ಣನವರ್ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ಯಾರೋಬ್ಬರು ಏಕೆ ಪ್ರಯತ್ನ ಪಡಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಯಾದವಣ್ಣನವರ್ ಅವರು ಸಾವಿಗೂ ಮುನ್ನ ಹಂಚಿಕೊಂಡ ಕೆಲವು ಸಂದೇಶಗಳಲ್ಲಿ, ತಮ್ಮ ಆತ್ಮಹತ್ಯೆಗೆ ತಹಶೀಲ್ದಾರ್, ಸೋಮು ಮತ್ತು ಕಬ್ಬಲಿಗೇರ್ ಕಾರಣ ಎಂದು ಅವರು ತಮ್ಮ ಸಹೋದ್ಯೋಗಿಗಳಿಗೆ ತಿಳಿಸಿದ್ದರು. ಕಚೇರಿಯಲ್ಲಿ ನ್ಯಾಯಕ್ಕಾಗಿ ಒಗ್ಗಟ್ಟಿನಿಂದ ಹೋರಾಡುವಂತೆ ಕರೆ ನೀಡಿದರು. ಮೆಸೇಜ್ ನೋಡಿದ ಬಳಿಕವೂ ಯಾದಣ್ಣನವರ್ ಗೆ ಏಕೆ ನೀವು ಕರೆ ಮಾಡಲಿಲ್ಲ, ಅವರನ್ನು ಏಕೆ ಮನವೊಲಿಸುವ ಪ್ರಯತ್ನ ಮಾಡಲಿಲ್ಲ ಎಂದು ತಹಶೀಲ್ದಾರ್ ಅವರಿಗೆ ಪ್ರಶ್ನಿಸಿದ್ದಾರೆ.
ಇತ್ತೀಚೆಗಷ್ಟೇ ಯಾದವಣ್ಣವರ್ ಅವರನ್ನು ಯಾರೋ ಕೊಲೆ ಮಾಡಿದ್ದಾರೆ, ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರದ ಹಲವು ಉನ್ನತ ಅಧಿಕಾರಿಗಳಿಗೆ ಅನಾಮಧೇಯ ಪತ್ರ ಬಂದಿದ್ದು, ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿತ್ತು. ತಹಶೀಲ್ದಾರ್ ಚಾಲಕ ಯಾದವಣ್ಣನವರನ್ನು ಕೊಂದಿದ್ದಾನೆ ಎಂದು ಪತ್ರದಲ್ಲಿ ಹೇಳಲಾಗಿದೆ. ಚಾಲಕ ಬಾದಲ್ ಅಂಕಗಿ ಗ್ರಾಮದಲ್ಲಿ ಗ್ರಾಮಸೇವಕನಾಗಿದ್ದು, ತಹಶೀಲ್ದಾರ್ ಅವರಿಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ. ಗ್ರಾಮಸೇವಕ ವೇತನ ಪಡೆಯುತ್ತಿದ್ದರೂ ಕಳೆದ 15 ವರ್ಷಗಳಿಂದ ತಹಶೀಲ್ದಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಈತ ಚಾಲಕನಾಗಿ ಕೆಲಸ ಮಾಡುವುದು ಹೇಗೆ ಎಂದು ಬಾದಲ್ ಅಂಕಲಗಿ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಆತ್ಮಹತ್ಯೆ ಪ್ರಕರಣದಲ್ಲಿ ತಹಶೀಲ್ದಾರ್ ಸೇರಿದಂತೆ ಮೂವರು ಆರೋಪಿಗಳನ್ನು ಹಲವು ದಿನಗಳಿಂದ ಪೊಲೀಸರು ಬಂಧಿಸಿರಲಿಲ್ಲ. ಸ್ಥಳೀಯ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ನೀಡಿತ್ತು. ನಿರೀಕ್ಷಣಾ ಜಾಮೀನು ಪಡೆದ ಒಂದು ದಿನದ ನಂತರ ತಹಶೀಲ್ದಾರ್ ಮತ್ತೆ ಕರ್ತವ್ಯಕ್ಕೆ ಸೇರ್ಪಡೆಗೊಂಡಿದ್ದರು.
Advertisement