ಮಾಣಿಪ್ಪಾಡಿ ಸಮಿತಿ ವರದಿ ಆಧರಿಸಿ ನೋಟಿಸ್ ಜಾರಿ ನೀಡಿದ್ದೆವು, ತಪ್ಪಾಗಿದ್ದರೆ ಕ್ರಮವಾಗಲಿ: BJP

ನಮ್ಮ ಸರ್ಕಾರದ ಅವಧಿಯಲ್ಲಿ ಅನ್ವರ್‌ ಮಾಣಿಪ್ಪಾಡಿ ವರದಿಯನ್ನು ಆಧರಿಸಿ ನಾವು ನೋಟಿಸ್ ಕೊಟ್ಟಿದ್ದೆವು. ಈ ವರದಿಯಲ್ಲಿ ಬಹಳಷ್ಟು ಕಾಂಗ್ರೆಸ್‌ನ ದೊಡ್ಡ ದೊಡ್ಡ ನಾಯಕರು, ಕೇಂದ್ರ, ರಾಜ್ಯಗಳ ನಾಯಕರು ವಕ್ಫ್ ಭೂಮಿ ಒತ್ತುವರಿ ಮಾಡಿಕೊಂಡು ಮಾರಾಟ ಮಾಡಿಕೊಂಡಿದ್ದರು.
R.Ashok
ವಿಪಕ್ಷ ನಾಯಕ ಆರ್.ಅಶೋಕ್
Updated on

ಬೆಂಗಳೂರು: ಮಾಣಿಪ್ಪಾಡಿ ಸಮಿತಿ ವರದಿ ಆಧರಿಸಿ ನೋಟಿಸ್ ಜಾರಿ ನೀಡಿದ್ದೆವು. ನಮ್ಮ ಅವಧಿಯಲ್ಲt ತಪ್ಪಾಗಿದ್ದರೆ ಕ್ರಮವಾಗಲಿ ಎಂದು ಬಿಜೆಪಿ ಸೋಮವಾರ ಹೇಳಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ಹೆಚ್ಚಿನ ನೋಟಿಸ್‌ಗಳನ್ನು ನೀಡಲಾಗಿತ್ತು ಎಂಬ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಹೇಳಿಕೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಪ್ರತಿಕ್ರಿಯೆ ನೀಡಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಅನ್ವರ್‌ ಮಾಣಿಪ್ಪಾಡಿ ವರದಿಯನ್ನು ಆಧರಿಸಿ ನಾವು ನೋಟಿಸ್ ಕೊಟ್ಟಿದ್ದೆವು. ಈ ವರದಿಯಲ್ಲಿ ಬಹಳಷ್ಟು ಕಾಂಗ್ರೆಸ್‌ನ ದೊಡ್ಡ ದೊಡ್ಡ ನಾಯಕರು, ಕೇಂದ್ರ, ರಾಜ್ಯಗಳ ನಾಯಕರು ವಕ್ಫ್ ಭೂಮಿ ಒತ್ತುವರಿ ಮಾಡಿಕೊಂಡು ಮಾರಾಟ ಮಾಡಿಕೊಂಡಿದ್ದರು. ಇಂತಹವರಿಗೆ ನಾವು ನೋಟಿಸ್ ಕೊಟ್ಟಿರಬಹುದು. ಕಾಂಗ್ರೆಸ್‌ನವರು ವಕ್ಫ್ ಬೋರ್ಡ್‌ನಲ್ಲಿ ಅಕ್ರಮವಾಗಿದೆ ಎಂದು ಒಪ್ಪಿಕೊಳ್ಳಲು ತಯಾರಿಲ್ಲ.

ನಮ್ಮ ಅವಧಿಯಲ್ಲಿ ತಪ್ಪಾಗಿದ್ದರೂ ಕ್ರಮವಾಗಲಿ. ಕಾಂಗ್ರೆಸ್ ಅವಧಿಯಲ್ಲಿ ತಪ್ಪಾಗಿದ್ದರೂ ಕ್ರಮವಾಗಲಿ. ನಾವೇನು ಅಧಿಕಾರಿಗಳ ರಕ್ಷಣೆ ಮಾಡುತ್ತಿಲ್ಲ. ನಮ್ಮ ಅವಧಿಯಲ್ಲಿ ಅಥವಾ ಕಾಂಗ್ರೆಸ್ ಅವಧಿಯಲ್ಲಿ ಅಧಿಕಾರಿಗಳು ತಪ್ಪಾಗಿ ವಕ್ಫ್ ನೋಟಿಸ್ ಕೊಟ್ಟಿದ್ದರೆ ಕ್ರಮವಾಗಲಿ. ಕಾಂಗ್ರೆಸ್ ಅವಧಿಯಲ್ಲಿ ರೈತರಿಗೆ ನೋಟಿಸ್ ಕೊಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಮಾಣಿಪ್ಪಾಡಿ ವರದಿಯಲ್ಲಿ ಕಾಂಗ್ರೆಸ್ ನಾಯಕರು ಒತ್ತುವರಿ ಮಾಡಿಕೊಂಡಿದ್ದರು. ಅದಕ್ಕೆ ನೋಟಿಸ್ ಕೊಟ್ಟಿದ್ದೇವೆ. ನಮ್ಮ ಕಾಲದಲ್ಲಿ ರೈತರಿಗೆ ನೋಟಿಸ್ ಕೊಟ್ಟಿದ್ದರೆ ಅದೂ ತಪ್ಪು ಎಂದು ಹೇಳಿದರು

R.Ashok
ವಕ್ಫ್ ವಿರುದ್ದ ಒಂದು ತಿಂಗಳ ಕಾಲ ಜನಜಾಗೃತಿ ಅಭಿಯಾನ ಆರಂಭಿಸಿದ ಬಿಜೆಪಿ ಶಾಸಕ ಯತ್ನಾಳ್

ಬಳಿಕ ಮುಡಾ ಕಚೇರಿಯಿಂದ ಐಎಎಸ್ ಅಧಿಕಾರಿ 144 ಫೈಲುಗಳನ್ನು ತೆಗೆದುಕೊಂಡು ಹೋಗಿರುವ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರ ನಮಗೆ ದಿಗ್ಭ್ರಮೆ ಮೂಡಿಸಿದೆ. ಭೈರತಿ ಸುರೇಶ್ ಅವರು ಎಷ್ಟು ಫೈಲ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಗೊತ್ತಿಲ್ಲ. ಅದಕ್ಕೂ ಮುಂಚೆ ಐಎಎಸ್ ಅಧಿಕಾರಿಯೊಬ್ಬರು ಮುಡಾ ಫೈಲ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆಂದರೆ ರಾಜ್ಯದಲ್ಲಿ ಆಡಳಿತ ಯಾವ ಮಟ್ಟಕ್ಕೆ ಬಂದಿದೆ? ಅಧಿಕಾರಿಗಳೇ ಮುಡಾ ಅಕ್ರಮದಲ್ಲಿ ರಕ್ಷಣೆಗೆ ಮುಂದಾಗಿರುವುದು ಸರಿಯಲ್ಲ. ಈ ಪ್ರಕರಣ ಸಿಬಿಐಗೆ ತನಿಖೆಗೆ ಕೊಡಬೇಕು ಎಂದು ಆಗ್ರಹಿಸುತ್ತೇನೆ ಎಂದು ತಿಳಿಸಿದರು.

ಮುಡಾ ಅಕ್ರಮ ಈ ರಾಜ್ಯ ಕಂಡ ದೊಡ್ಡ ಹಗರಣ. ಸಿಎಂ, ಮತ್ತವರ ಕುಟುಂಬ ಶಾಮೀಲಾಗಿದ್ದಾರೆ. 14 ಸೈಟುಗಳಷ್ಟೇ ಅಲ್ಲ, ಬಡವರ ಸೈಟುಗಳನ್ನೂ ಲೂಟಿ ಮಾಡಲಾಗಿದೆ. ಮುಡಾದಲ್ಲಿ 3-4 ಸಾವಿರ ಕೋಟಿ ರೂ. ಅಕ್ರಮವಾಗಿದೆ. ಐಎಎಸ್ ಅಧಿಕಾರಿಗಳು ಮಾಡಿರುವ ತಪ್ಪನ್ನು ಸರಿಪಡಿಸಲು ದಾಖಲೆ ತಿದ್ದಿರುತ್ತಾರೆ. ವೈಟ್ನರ್ ಹಾಕಿ, ದಾಖಲೆಗಳನ್ನು ಮಾಯ ಮಾಡಿರುತ್ತಾರೆ. ಇದನ್ನು ಸಿಬಿಐ ತನಿಖೆಗೆ ಒಳಪಡಿಸಿದರೆ ಇನ್ನಷ್ಟು ಹಗರಣಗಳು ಹೊರಗೆ ಬರುತ್ತದೆ ಎಂದರು.

ನಿಖಿಲ್ ಹೇಳಿಕೆ ಕುರಿತು ಮಾತನಾಡಿ, ನಿಖಿಲ್ ಸತ್ಯವನ್ನೇ ಹೇಳಿದ್ದಾರೆ. ಬೂತ್‌ಗಳಲ್ಲಿ ಬೆರಳೆಣಿಕೆಯಷ್ಟು ಮುಸ್ಲಿಂ ಮತಗಳು ಜೆಡಿಎಸ್‌ಗೆ ಬಂದಿದೆ. ಆ ಸಮುದಾಯ ನಿಖಿಲ್‌ನನ್ನು ಸೋಲಿಸಲು ಮತ ಹಾಕಿಲ್ಲ. ಉಳಿದ ಸಮುದಾಯಗಳೂ ಒಟ್ಟಾಗಿ ಮತ ಚಲಾಯಿಸಿಲ್ಲ. ಮಹಾರಾಷ್ಟ್ರದಲ್ಲಿ ಆದಂತೆ ಒಟ್ಟಾಗಿ ಆಗಲಿಲ್ಲ. ಇಲ್ಲಿ ಮುಸ್ಲಿಂ ಸಮುದಾಯ ಒಟ್ಟಾದಂತೆ ಉಳಿದ ಸಮುದಾಯ ಒಟ್ಟಾಗಲಿಲ್ಲ. ಮುಸ್ಲಿಂ ಸಮುದಾಯದ ತರ ಉಳಿದ ಸಮುದಾಯಗಳು ಕೂಡ ನಿಖಿಲ್ ಪರ ಒಟ್ಟಾಗಿ ನಿಲ್ಲಬೇಕಿತ್ತು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com