Cyclone: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ, ಮಳೆ ಸಾಧ್ಯತೆ

ತಮಿಳುನಾಡಿನ ಮೈಲಾಡುತುರೈ, ನಾಗಪಟ್ಟಣಂ, ತಿರುವಾರುರ್​​ ಮತ್ತು ಕರೈಕಲ್​ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ಪ್ರಾದೇಶಿಕ ಹವಾಮಾನ ಕೇಂದ್ರ ರೆಡ್​ ಅಲರ್ಟ್​ ನೀಡಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ಇದರ ಪರಿಣಾಮ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಭಾರೀ ಮಳೆ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದ್ದು, ಬೆಂಗಳೂರಿನಲ್ಲೂ ನಿನ್ನೆ ಮಂಗಳವಾರದಿಂದ ಮೋಡ ಕವಿದ ವಾತಾವರಣವಿದೆ.ಇಂದು ಬೆಳಗ್ಗೆ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಚಳಿಯ ಜೊತೆ ಮಳೆಯ ಮುನ್ಸೂಚನೆಯಿದೆ.

ತಮಿಳುನಾಡಿನ ಮೈಲಾಡುತುರೈ, ನಾಗಪಟ್ಟಣಂ, ತಿರುವಾರುರ್​​ ಮತ್ತು ಕರೈಕಲ್​ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ಪ್ರಾದೇಶಿಕ ಹವಾಮಾನ ಕೇಂದ್ರ ರೆಡ್​ ಅಲರ್ಟ್​ ನೀಡಿದೆ. ಜೊತೆಗೆ ಕಡಲೂರು, ಮಯಿಲದುತ್ತುರೈ ಮತ್ತು ಕರೈಕಲ್​ ಜಿಲ್ಲೆಗಳಲ್ಲಿ ಬುಧವಾರದವರೆಗೂ ರೆಡ್​ ಅಲರ್ಟ್​ ಘೋಷಿಸಲಾಗಿದೆ.

ಮುಂದಿನ 24 ಗಂಟೆಗಳಲ್ಲಿ ವಾಯುವ್ಯ ದಿಕ್ಕಿಗೆ ಗಾಳಿ ಬಲಗೊಳ್ಳುವ ಸಾಧ್ಯತೆ ಇದೆ. ಚಂಡಮಾರುತ ಶ್ರೀಲಂಕಾ ಮತ್ತು ತಮಿಳುನಾಡು ಕರಾವಳಿಯ ಉತ್ತರ ಮತ್ತು ವಾಯುವ್ಯ ದಿಕ್ಕಿನೆಡೆಗೆ ಸಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬೆಂಗಳೂರಿನಲ್ಲಿ ವಾಡಿಕೆಯಂತೆ ಡಿಸೆಂಬರ್​ ​ಎರಡನೇ ವಾರ ಚಳಿ ತೀವ್ರವಾಗುತ್ತಿತ್ತು. ಆದರೆ, ಈ ಬಾರಿ ನವೆಂಬರ್​ ನಲ್ಲಿ ಚಳಿ‌ಯ ಪ್ರಮಾಣ ಹೆಚ್ಚಳವಾಗಿದೆ. ಮುಂದಿನ 48 ಗಂಟೆಗಳ ಕಾಲ ಮೋಡ ಕವಿದ ವಾತಾವರಣ ಇರಲಿದೆ. ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2-5 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ.

ಮಳೆ ಎಚ್ಚರಿಕೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮತ್ತು ಚಳಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿಗೂ ಮಳೆ ಮುನ್ಸೂಚನೆ ನೀಡಲಾಗಿದೆ. ಆದರೆ ಹವಾಮಾನ ವೈಪರೀತ್ಯ ಕಾರಣ ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಮೈಕೊರೆಯುವಂತಹ ಚಳಿ ಇರಲಿದೆ.

ಮುಂಬರುವ ವಾರಗಳಲ್ಲಿ ತಾಪಮಾನ ಇನ್ನಷ್ಟು ಕಡಿಮೆಯಾಗಲಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಐಎಂಡಿ ಬೆಂಗಳೂರಿನ ವಿಜ್ಞಾನಿ ಸಿಎಸ್ ಪಾಟೀಲ್, ನಗರದ ಕನಿಷ್ಠ ತಾಪಮಾನವು 12-14 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು ಎಂದು ಹೇಳಿದ್ದಾರೆ. ಬೀದರ್‌ನಂತಹ ಉತ್ತರದ ಜಿಲ್ಲೆಗಳಲ್ಲಿ ತಾಪಮಾನವು 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಬಹುದು. ಇಂತಹ ಮುನ್ಸೂಚನೆಗಳು ಕರ್ನಾಟಕವು ಈ ವರ್ಷ ಅಸಾಮಾನ್ಯವಾದ ಚಳಿಯನ್ನು ಅನುಭವಿಸಬಹುದು ಎಂದು ಸೂಚಿಸುತ್ತದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಭಾರಿ ಮಳೆಯಾಗುತ್ತಿದೆ. ಜೊತೆಗೆ ದಟ್ಟವಾದ ಮಂಜು ಅವರಿಸಿದ್ದು ರಸ್ತೆಗಳು ಕಾಣದಂತಾಗಿದೆ. ರಾಮನಾಥಪುರಂ, ತಿರುಚಿರಾಪಳ್ಳಿ, ಪೆರಂಬಲೂರು, ಕಲ್ಲಕುರಿಚಿ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ವಿಪರೀತ ಚಳಿಯಿಂದ ಜ್ವರ, ಕೆಮ್ಮು, ಶೀತದಂತಹ ಕಾಯಿಲೆಗಳು ಭಾದಿಸಲಿದ್ದು, ಆರೋಗ್ಯದ ಮೇಲೆ ನಿಗಾ ಇಡುವಂತೆ ವೈದ್ಯರು ಸೂಚಿಸಿದ್ದಾರೆ.

ವಿಲ್ಲುಪುರಂ, ಕಡಲೂರು, ಅರಿಯಲೂರ್​​, ತಂಜಾವೂರ್​, ಪುಡುಕೊಟ್ಟೈ, ಶಿವಗಂಗಾ ಜಿಲ್ಲೆಗಳೂ ಸೇರಿದಂತೆ ಪುದುಚೇರಿಯಲ್ಲಿ 11.56 ಸೆಂ.ಮೀನಿಂದ 20.44 ಸೆಂ.ಮೀವರೆಗೆ ಸಾಧಾರಣದಿಂದ ಅತಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

Representational image
Fengal ಚಂಡಮಾರುತ: ತಮಿಳುನಾಡಿನಲ್ಲಿ ಭಾರಿ ಮಳೆ, ಕರಾವಳಿಯಲ್ಲಿ ರೆಡ್ ಅಲರ್ಟ್; ಕರ್ನಾಟಕದಲ್ಲೂ ವರ್ಷಧಾರೆ ಸಾಧ್ಯತೆ!

ರಾಮನಾಥಪುರಂ, ತತಿರುಚಿರಪಳ್ಳಿ, ಪೆರಂಬಲೂರ್​, ಕಲಕುರಿಚಿ, ಚೆಂಗಲ್​ಪಟ್ಟು ಜಿಲ್ಲೆಗಳಲ್ಲೂ ಕೂಡ ಮಂಗಳವಾರ ಜೋರು ಮಳೆಯಾಗುವ ಸಾಧ್ಯತೆ ಇದೆ. ಅರಿಯಲೂರ್​​, ತಿರುವರೂರ್​, ನಗಪತ್ತಿನಂ, ತಾಂಜಾವೂರ್​, ಪುದುಕೊಟ್ಟೈ, ವಿಲ್ಲುಪುರಂ ಮತ್ತು ತಿರುಚ್ಚಿ, ಕಾಂಚೀಪುರಂ, ಚೆನ್ನೈ, ಚೆಂಗಲ್​ಪೆಟ್ಟು ಜಿಲ್ಲೆ ಹಾಗೂ ಪುದುಚೇರಿಯಲ್ಲಿ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ನವೆಂಬರ್​ 28ರವರೆಗೆ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ತಮಿಳುನಾಡಿನ ಸುಮಾರು 90 ಅಣೆಕಟ್ಟುಗಳು ಶೇ 60ರಷ್ಟು ಭರ್ತಿಯಾಗಿದೆ.(ಐಎಎನ್​ಎಸ್​)ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಸೇರಿದಂತೆ ಇಂದು ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಐಎಂಡಿ ಮಾಹಿತಿ ಹಂಚಿಕೊಂಡಿದೆ.

ಇನ್ನೇನು ಕೆಲವೇ ದಿನಗಳಲ್ಲಿ ನವೆಂಬರ್‌ ತಿಂಗಳು ಕಳೆದು ಡಿಸೆಂಬರ್‌ ಆಗಮಿಸಲಿದೆ. ರಾಜ್ಯದೆಲ್ಲೆಡೆ ಕ್ರಮೇಣ ಚಳಿ ಹೆಚ್ಚಾಗುತ್ತಿದೆ. ಈ ನಡುವೆ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಬಿಸಿಲಿನೊಂದಿಗೆ ಮೋಡ ಕವಿದ ವಾತಾವರಣ ಇದ್ದು ಬೆಳಗ್ಗೆ ಹಾಗೂ ಸಂಜೆ ದಟ್ಟ ಮಂಜು, ತಂಪು ಗಾಳಿಯೊಂದಿಗೆ ಚಳಿ ಹೆಚ್ಚಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com