ಬೆಳಗಾವಿಯ ಕಿತ್ತೂರಿನ ಢಾಬಾದಲ್ಲಿ ಜೀತದಾಳಿನಂತೆ ದುಡಿಯುತ್ತಿರುವ ಯುವಕ: ಪೊಲೀಸರಿಂದ ಎಫ್ಐಆರ್

ಕಿತ್ತೂರು ಸಮೀಪದ ಹಳೆ ಢಾಬಾವೊಂದರಿಂದ ಹೃದಯ ವಿದ್ರಾವಕ ಘಟನೆಯೊಂದರಲ್ಲಿ 26 ವರ್ಷದ ಯುವಕನೊಬ್ಬ ಜೀತದಾಳಿನಂತೆ ಕಾಲುಗಳನ್ನು ಸರಪಳಿಯಲ್ಲಿ ಕಟ್ಟಿಕೊಂಡು ದುಡಿಯುತ್ತಿದ್ದ. ಈ ಯುವಕ ಢಾಬಾದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದು, ಕಾಲಿಗೆ ಸರಪಳಿ ಕಟ್ಟಿಕೊಂಡು ಗ್ರಾಹಕರಿಗೆ ಬಡಿಸುವ ದುಸ್ಥಿತಿ.
ಬೆಳಗಾವಿಯ ಕಿತ್ತೂರಿನ ಢಾಬಾದಲ್ಲಿ ಜೀತದಾಳಿನಂತೆ ದುಡಿಯುತ್ತಿರುವ ಯುವಕ: ಪೊಲೀಸರಿಂದ ಎಫ್ಐಆರ್
Updated on

ಬೆಳಗಾವಿ: ಕಟ್ಟುನಿಟ್ಟಿನ ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸಿದ್ದರೂ, ವಿವಿಧ ಉದ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಹಲವಾರು ಕಾರ್ಮಿಕರು ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಹೆದ್ದಾರಿಗಳಲ್ಲಿನ ಹೋಟೆಲ್‌, ಧಾಬಾಗಳಲ್ಲಿ ಕೆಲಸ ಮಾಡುವ ಹಲವು ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದ್ದು, ಈ ಕೂಲಿಕಾರರು ಬೇರೆ ದಾರಿಯಿಲ್ಲದೆ ಜೀವನ ಸಾಗಿಸಲು ಹೀನಾಯ ಜೀವನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಕಿತ್ತೂರು ಸಮೀಪದ ಹಳೆ ಢಾಬಾವೊಂದರಿಂದ ಹೃದಯ ವಿದ್ರಾವಕ ಘಟನೆಯೊಂದರಲ್ಲಿ 26 ವರ್ಷದ ಯುವಕನೊಬ್ಬ ಜೀತದಾಳಿನಂತೆ ಕಾಲುಗಳನ್ನು ಸರಪಳಿಯಲ್ಲಿ ಕಟ್ಟಿಕೊಂಡು ದುಡಿಯುತ್ತಿದ್ದ. ಈ ಯುವಕ ಢಾಬಾದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದು, ಕಾಲಿಗೆ ಸರಪಳಿ ಕಟ್ಟಿಕೊಂಡು ಗ್ರಾಹಕರಿಗೆ ಬಡಿಸುವ ದುಸ್ಥಿತಿ.

ಯುವಕ ಉತ್ತರ ಪ್ರದೇಶ ಮೂಲದವನಾಗಿದ್ದು, ಹಲವು ಸಮಯಗಳ ಹಿಂದೆ ಅನೇಕರೊಂದಿಗೆ ಕೆಲಸ ಹುಡುಕಿಕೊಂಡು ಇಲ್ಲಿನ ಧಾಬಾಕ್ಕೆ ಬಂದಿದ್ದನು. ಧಾಬಾದ ಮಾಲೀಕರು ಆತನನ್ನು ಸರಪಳಿಯಿಂದ ಬಂಧಿಸಿ, ಬಂಧಿತ ಕಾರ್ಮಿಕನಾಗಿ ಕೆಲಸಕ್ಕೆ ದೂಡಿದ್ದಾರೆ.

ಕೂಲಿ ಕಾರ್ಮಿಕ ಉತ್ತರ ಪ್ರದೇಶ ಮೂಲದವನಾಗಿದ್ದು, ಕಳೆದ ಹಲವು ವರ್ಷಗಳಿಂದ ಧಾಬಾದಲ್ಲಿ ಕೆಲಸ ಮಾಡುತ್ತಿದ್ದಾನೆ. ನಾವು ಹಲವಾರು ಬಾರಿ ಧಾಬಾಕ್ಕೆ ಭೇಟಿ ನೀಡಿದ್ದರೂ ಮಾಲೀಕರು ಶೋಷಣೆ ನೀಡುತ್ತಿದ್ದುದು ಗೊತ್ತಾಗುತ್ತಿರಲಿಲ್ಲ. ಕೂಲಿ ಕೆಲಸ ಮಾಡುತ್ತಿದ್ದು ಅಡುಗೆ ಮನೆಯಲ್ಲಿ ರೊಟ್ಟಿ ಮಾಡುತ್ತಿದ್ದ. ಇಂದು ಆತನನ್ನು ಸರಪಳಿಯಲ್ಲಿ ಬಂಧಿಸಿರುವುದು ಕಂಡು ಬಂದ ನಂತರ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಸಮೀರ್ ಮುಲ್ಲಾ ತಿಳಿಸಿದ್ದಾರೆ.

ಕಾರ್ಮಿಕನನ್ನು ಬಿಡುಗಡೆ ಮಾಡಿ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ಪೊಲೀಸರು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದರು, ಕಾರ್ಮಿಕರನ್ನು ಮಾಲೀಕ ಏಕೆ ಸರಪಳಿಯಿಂದ ಬಂಧಿಸಿದ್ದಾರೆ ಹಾಗೂ ಅದೇ ಢಾಬಾದಲ್ಲಿ ಕೆಲಸ ಮಾಡುತ್ತಿದ್ದ ಇತರ 70 ಜನರನ್ನು ಇದೇ ರೀತಿಯಲ್ಲಿ ಶೋಷಣೆ ಮಾಡಲಾಗುತ್ತಿದೆಯೇ ಎಂದು ಕಂಡುಹಿಡಿಯಲು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದರು.

ಇಲ್ಲಿನ ಢಾಬಾಕ್ಕೆ ಅನೇಕ ಕಾರ್ಮಿಕರು ಉತ್ತರ ಭಾರತದಿಂದ, ವಿಶೇಷವಾಗಿ ಉತ್ತರ ಪ್ರದೇಶದಿಂದ, ಉದ್ಯೋಗವನ್ನು ಹುಡುಕಿಕೊಂಡು ವಲಸೆ ಬಂದಿದ್ದು, ಬೇರೆ ಯಾವುದೇ ಆದಾಯ ಮೂಲವಿಲ್ಲದೆ, ಸಣ್ಣ ಕೂಲಿಗಾಗಿ ಧಾಬಾದಲ್ಲಿ ಕೆಲಸ ಮಾಡುತ್ತಿದ್ದು, ಮಾಲೀಕರ ಕೈಯಲ್ಲಿ ಶೋಷಣೆಯನ್ನು ಅನುಭವಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com