ಭಯೋತ್ಪಾದನೆ ಚಟುವಟಿಕೆ ಆರೋಪ: ಪಾಕ್ ಪ್ರಜೆ ಸೇರಿದಂತೆ ಮೂವರ ಖುಲಾಸೆ

ಬೆಂಗಳೂರಿನ ನಿವಾಸಿಗಳಾದ ಸೈಯದ್ ಅಬ್ದುಲ್ ರೆಹಮಾನ್ , ಅಫ್ಸರ್ ಪಾಷಾ ಅಲಿಯಾಸ್ ಖುಶಿರುದ್ದೀನ್ ಮತ್ತು ಪಾಕಿಸ್ತಾನದ ಪ್ರಜೆ ಮೊಹಮ್ಮದ್ ಫಹಾದ್ ಹಿ ಅಲಿಯಾಸ್ ಮೊಹಮ್ಮದ್ ಕೋಯಾ ಖುಲಾಸೆಗೊಂಡವರು.
ಹೈಕೋರ್ಟ್
ಹೈಕೋರ್ಟ್
Updated on

ಬೆಂಗಳೂರು: ಆಗಿನ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೀಡಿದ ಸಾಕ್ಷ್ಯದ ಆಧಾರದ ಮೇಲೆ ಹೈಕೋರ್ಟ್ ಪಾಕಿಸ್ತಾನದ ಪ್ರಜೆ ಸೇರಿದಂತೆ ಮೂವರು ಆರೋಪಿಗಳನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಭಯೋತ್ಪಾದನಾ ಚಟುವಟಿಕೆಗಳ ಆರೋಪಗಳಿಂದ ಖುಲಾಸೆಗೊಳಿಸಿದೆ.

ಆರೋಪಿಗಳ ವಿರುದ್ಧದ ಅಪರಾಧ ಕುರಿತು ಎನ್ಐಎ ಪ್ರಕರಣಗಳ ವಿಶೇಷ ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ದೂರು ತೆಗೆದುಕೊಳ್ಳಲು ಅನುವು ಮಾಡಿಕೊಡಲು ಮಂಜೂರಾತಿ ಆದೇಶವನ್ನು ಜಾರಿಗೊಳಿಸಿದಾಗ ಪರಿಶೀಲನಾ ಸಮಿತಿ ಇದೆಯೋ ಇಲ್ಲವೋ ಎಂದು ನನಗೆ ನೆನಪಿಲ್ಲ ಎಂದು ಅಂದಿನ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಔರಾದ್ಕರ್ ಹೇಳಿದ್ದಾರೆ.

ಮರು ಪರಿಶೀಲನಾ ಸಂದರ್ಭದಲ್ಲಿ ವಿಶೇಷ ನ್ಯಾಯಾಲಯದ ಮುಂದೆ ಔರಾದ್ಕರ್ ನೀಡಿದ್ದ ಸಾಕ್ಷ್ಯವನ್ನು ಉಲ್ಲೇಖಿಸಿದ ಹೈಕೋರ್ಟ್, ಮಂಜೂರಾತಿ ಆದೇಶ ತನ್ನ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತದೆ. ವಿಶೇಷ ನ್ಯಾಯಾಲಯ ಈ ಅಂಶವನ್ನು ಪರಿಗಣಿಸಿಲ್ಲ ಆದ್ದರಿಂದ, ಯುಎಪಿಎಯ ಸೆಕ್ಷನ್ 13, 17, 18 ಮತ್ತು 18 ಬಿ ಅಡಿಯಲ್ಲಿ ಎಲ್ಲಾ ಆರೋಪಿಗಳಿಗೆ ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿತು. ಗುಲ್ಬರ್ಗಾ ಜೈಲಿನಿಂದ ಬಿಡುಗಡೆಯಾದ ನಂತರ ಪಾಕಿಸ್ತಾನ ಪ್ರಜೆಯನ್ನು ಗಡಿಪಾರು ಮಾಡಲು ಆದೇಶವನ್ನು ಹೊರಡಿಸಿತು.

ಬೆಂಗಳೂರಿನ ನಿವಾಸಿಗಳಾದ ಸೈಯದ್ ಅಬ್ದುಲ್ ರೆಹಮಾನ್ , ಅಫ್ಸರ್ ಪಾಷಾ ಅಲಿಯಾಸ್ ಖುಶಿರುದ್ದೀನ್ ಮತ್ತು ಪಾಕಿಸ್ತಾನದ ಪ್ರಜೆ ಮೊಹಮ್ಮದ್ ಫಹಾದ್ ಹಿ ಅಲಿಯಾಸ್ ಮೊಹಮ್ಮದ್ ಕೋಯಾ ಖುಲಾಸೆಗೊಂಡವರು.

ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ಜೆ ಎಂ ಖಾಜಿ ಅವರಿದ್ದ ವಿಭಾಗೀಯ ಪೀಠ ಫೆಬ್ರುವರಿ 23, 2023 ಮತ್ತು ಮಾರ್ಚ್ 3, 2023 ರಂದು ನೀಡಿದ್ದ ಶಿಕ್ಷೆಯ ಆದೇಶಗಳನ್ನು ಮಾರ್ಪಡಿಸುವ ಮೂಲಕ ಖುಲಾಸೆ ಆದೇಶವನ್ನು ನೀಡಿತು.

ಹೈಕೋರ್ಟ್
ಬೆಂಗಳೂರು: ಮತ್ತೆ ಮೂವರು ಪಾಕಿಸ್ತಾನಿ ಪ್ರಜೆಗಳ ಬಂಧನ

ರಿವಾಲ್ವರ್ ಹೊಂದಿದ್ದಕ್ಕಾಗಿ ಸಿಸಿಬಿ ಪೊಲೀಸರು 2012ರ ಮೇ 7ರಂದು ರೆಹಮಾನ್ ಅವರನ್ನು ಬಂಧಿಸಿದ್ದರು. ಅವರು ಜೈಲಿನಲ್ಲಿದ್ದಾಗ ಫಹಾದ್ ಮತ್ತು ಅಫ್ಸರ್ ಅವರನ್ನು ಭೇಟಿಯಾಗಿದ್ದರು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com