
ಗದಗ: ಕಪ್ಪತಗುಡ್ಡ ಮತ್ತೊಂದು ಬಳ್ಳಾರಿ ಅಥವಾ ಸಂಡೂರು ಆಗಬಹುದು ಎಂಬ ಆತಂಕವಿದ್ದು, ಗಣಿಗಾರಿಕೆ ಪ್ರಸ್ತಾಪಕ್ಕೆ ಅನುಮತಿ ನೀಡುವ ಕುರಿತು ಸಭೆಗಳ ಕರೆಯುವುದು, ಮುಂದೂಡುವುದನ್ನು ಬಿಟ್ಟು ನೇರವಾಗಿ ಪ್ರಸ್ತಾವನೆಯನ್ನೇ ತಿರಸ್ಕರಿಸಬೇಕೆಂದು ಪರಿಸರವಾದಿಗಳು ಹಾಗೂ ಶ್ರೀಗಳು ಆಗ್ರಹಿಸಿದ್ದಾರೆ.
ಕಪ್ಪತಗುಡ್ಡಕ್ಕಾಗಿ ಹೋರಾಟಕ್ಕೆ ಸಿದ್ಧವಿದ್ದು, ಯಾವುದೇ ಗಣಿಗಾರಿಕೆ ಅಥವಾ ಇತರೆ ಕಂಪನಿಗಳಿಗೆ ಗುಡ್ಡ ಹಾನಿ ಮಾಡಲು ಬಿಡುವುದಿಲ್ಲ ಎಂದು ಗದಗ ತೋಂಟದಾರ್ಯ ಮಠದ ಶ್ರೀ ಸಿದ್ದರಾಮ, ಮಠದ ಶ್ರೀ ಶಿವಕುಮಾರ್ ಮತ್ತಿತರರು ಹೇಳಿದ್ದಾರೆ.
ಕಪ್ಪತ್ತಗುಡ್ಡವು ಜೀವವೈವಿಧ್ಯ ಹಾಗೂ ಸಸ್ಯವೈವಿಧ್ಯಗಳ ಪ್ರದೇಶವಾಗಿದ್ದು, ಮಧ್ಯ ಕರ್ನಾಟಕದ ಸಹ್ಯಾದ್ರಿ ಎನಿಸಿದೆ. ಸಾವಿರಾರು ವನಸ್ಪತಿ ಸಸ್ಯಗಳ ಆಗರವಾಗಿರುವ ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದು ಜೀವಸಂಕುಲಕ್ಕೆ ಮಾರಕ. ಯಾವಕಾಲಕ್ಕೂ ಈ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಕಲ್ಪಿಸಿಕೊಡಬಾರದು ಎಂದು ತಿಳಿಸಿದ್ದಾರೆ.
ಕಪ್ಪತ್ತಗುಡ್ಡದ ಶುದ್ಧಗಾಳಿ ಹೆಚ್ಚೆಚ್ಚು ಜನರು ಇಲ್ಲಿಗೆ ಆಗಮಿಸುವಂತೆ ಮಾಡುತ್ತಿದೆ. 2 ದಶಕಗಳ ಹಿಂದೆ ಕೆಲವು ಕಂಪಸನಿಗಳು ಮರಳುಗಾರಿಕೆಗೆ ಗುಡ್ಡವನ್ನು ಅಗೆದ್ದರಿಂದ ಬೃಹ್ ಕಂದಕ ಕಾಣಿಸಿಕೊಂಡಿದೆ. ಇದರಿಂದ ಪ್ರತಿಭಟನೆ ಶುರುವಾಗಿತ್ತು. ಗುಡ್ಡಗಾಡಿನ 10 ಕಿ.ಮೀ ವ್ಯಾಪ್ತಿಯಲ್ಲಿ 28 ಗಣಿಗಾರಿಕೆ ಪ್ರಸ್ತಾವನೆಗಳ ಸಭೆಯನ್ನು ಸರ್ಕಾರ ಸದ್ಯಕ್ಕೆ ಮುಂದೂಡಿದೆ, ಆದರೆ, ನಂತರ ಅನುಮತಿ ನೀಡಿದರೆ ಇಡೀ ಕಪ್ಪತಗುಡ್ಡಕ್ಕೆ ಹಾನಿಯಾಗಲಿದೆ. ಹೀಗಾಗಿ ಸಭೆಗಳ, ನಿರ್ಧಾರಗಳ ಮುಂದೂಡುವುದು ಬಿಟ್ಟು ಪ್ರಸ್ತಾವನೆಯನ್ನೇ ತಿರಸ್ಕರಿಸಬೇಕೆಂದು ಹೇಳಿದ್ದಾರೆ.
ರಾಜ್ಯ ಸರಕಾರ ಕೇವಲ ಸಭೆಯನ್ನು ಮುಂದೂಡುವ ಬದಲು 28 ಪ್ರಸ್ತಾವನೆಗಳನ್ನು ತಿರಸ್ಕರಿಸಬೇಕಿತ್ತು. ಕಪ್ಪತಗುಡ್ಡವು ಶ್ರೀಮಂತ ಜೀವವೈವಿಧ್ಯತೆಯನ್ನು ಹೊಂದಿದೆ ಮತ್ತು ಈ ಪ್ರದೇಶದ ಸಹ್ಯಾದ್ರಿ ಎಂದು ಕರೆಯಲಾಗುತ್ತದೆ. ಗದಗ ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಈ ಭಾಗದ ಪರಿಸರ ಕಾರ್ಯಕರ್ತರು ಮುಖ್ಯ ಸಮಿತಿಯಲ್ಲಿರಬೇಕು, ಇದರಿಂದ ಈ ವಿಷಯದ ಸಂಪೂರ್ಣ ಮಾಹಿತಿ ಪಡೆಯಲು ಸಹಾಯವಾಗುತ್ತದೆ ಎಂದು ತೋಂಟದಾರ್ಯ ಮಠದ ಶ್ರೀಗಳು ಹೇಳಿದ್ದಾರೆ.
ಗುಡ್ಡವು ಎಲ್ಲರಿಗೂ ಸೇರಿದ್ದು, ಪ್ರಕೃತಿಯನ್ನು ಉಳಿಸುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿದೆ. ಕಪ್ಪತಗುಡ್ಡದಲ್ಲಿ ದೇವರನ್ನು ಕಾಣುತ್ತೇವೆ. ವೈವಿಧ್ಯಮಯ ಪಕ್ಷಿಗಳು ಮತ್ತು ಔಷಧೀಯ ಸಸ್ಯಗಳು ಈ ಸ್ಥಳಕ್ಕೆ ಅನೇಕರನ್ನು ಆಕರ್ಷಿಸುತ್ತವೆ. ಗುಡ್ಡದ 10 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಸರಕಾರ ಅನುಮತಿ ನೀಡಬಾರದು. ಗಣಿಗಾರರು ಸೈನೈಡ್ ಮತ್ತು ಇತರ ವಿಷಗಳೊಂದಿಗೆ ಬಂದು ಇಲ್ಲಿ ಸಸ್ಯ ಮತ್ತು ಪ್ರಾಣಿಗಳಿಗೆ ಹಾನಿ ಮಾಡುತ್ತಾರೆಂದು ನಂದಿವೇರಿ ಶ್ರೀಗಳು ತಿಳಿಸಿದ್ದಾರೆ.
Advertisement