ಬೆಂಗಳೂರಿನಲ್ಲಿ ಮಳೆ: ಅಕ್ಟೋಬರ್ 20ರವರೆಗೆ ಆರೆಂಜ್ ಅಲರ್ಟ್

ಬೆಂಗಳೂರು ಸೇರಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಅಕ್ಟೋಬರ್ 20ರವರೆಗೆ ಮಳೆಯಾಗಲಿದ್ದು, ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನತೆಗೆ ದಸರಾ ಹಬ್ಬದ ಸಂಭ್ರಮ ಮುಗಿದು ಇಂದು ವಾರದ ಆರಂಭ ಕಚೇರಿ ಕೆಲಸಕ್ಕೆ ಹೊರಟವರಿಗೆ ವರುಣನ ದರ್ಶನವಾಗಿದೆ. ಬೆಳ್ಳಂಬೆಳಗ್ಗೆಯೇ ಮಳೆ ಸುರಿದಿದ್ದು, ಮಧ್ಯಾಹ್ನವಾದರೂ ಮೋಡ ಕವಿದ ವಾತಾವರಣ ಮುಂದುವರಿದಿದೆ.

ಆರೆಂಜ್ ಅಲರ್ಟ್: ಬೆಂಗಳೂರು ಸೇರಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಅಕ್ಟೋಬರ್ 20ರವರೆಗೆ ಮಳೆಯಾಗಲಿದ್ದು, ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಮೈಸೂರು, ಮಂಡ್ಯ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಕೊಪ್ಪಳ, ಹಾವೇರಿ, ಗದಗ, ಧಾರವಾಡ, ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಬಾಳೆಹೊನ್ನೂರು, ಕಾರ್ಕಳ, ನಂಜನಗೂಡು, ಜಯಪುರ, ಬೆಳ್ಳೂರು, ಸೋಮವಾರಪೇಟೆ, ಸರಗೂರು, ಉಪ್ಪಿನಂಗಡಿ, ಕದ್ರಾ, ಶಿರಾಲಿ, ಹಳಿಯಾಳ, ಹಾವೇರಿ, ಚಾಮರಾಜನಗರ, ಕುಶಾಲನಗರ, ನಾಪೊಕ್ಲು, ಕಮ್ಮರಡಿ, ಹುಣಸೂರಿನಲ್ಲಿ ಮಳೆಯಾಗಿದೆ. ಹಾರಂಗಿ, ಸಿದ್ದಾಪುರ, ಉಡುಪಿ, ಯಲ್ಲಾಪುರ, ಸಂಕೇಶ್ವರ, ಹಿಡಕಲ್, ಚಿಕ್ಕೋಡಿ, ಯಡವಾಡ, ಮಹಾಲಿಂಗಪುರ, ಭಾಗಮಂಡಲ, ಪೊನ್ನಂಪೇಟೆ, ಎಚ್​ಡಿಕೋಟೆ, ಮದ್ದೂರು, ದಾವಣಗೆರೆ, ಗುಂಡ್ಲುಪೇಟೆ, ನಾಗಮಂಗಲದಲ್ಲಿ ಮಳೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com