ಆಹಾರ ವ್ಯರ್ಥ ತಡೆಗೆ ಶೀಘ್ರದಲ್ಲೇ ಕಾನೂನು!

ದೇಶದಲ್ಲಿ ವಾರ್ಷಿಕವಾಗಿ ಸುಮಾರು 90 ಸಾವಿರ ಕೋಟಿ ರೂ.ಗಳಷ್ಟು ಆಹಾರ ಪದಾರ್ಥಗಳು ವ್ಯರ್ಥವಾಗುತ್ತಿದೆ. ಅನ್ನಂ ಪರಬ್ರಹ್ಮ ಸ್ವರೂಪಂ’ ಎಂಬ ವಾಕ್ಯದಂತೆ ದೇಶದಲ್ಲಿ ಅನ್ನಕ್ಕಿರುವ ಬೆಲೆ ಬೇರೆ ಯಾವುದಕ್ಕೂ ಇಲ್ಲ. ಆಹಾರದ ಮಹತ್ವ, ಜನರ ಭಕ್ಷ್ಯಮಾನದ ಹಕ್ಕು, ಹಸಿವು ನಿರ್ಮೂಲನೆಗೆ ಜಾಗೃತಿ ಮೂಡಿಸುವುದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಹೋಟೆಲ್, ಕಲ್ಯಾಣ ಮಂಟಪಗಳಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಬುಧವಾರ ಹೇಳಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ವತಿಯಿಂದ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ವಿಶ್ವ ಆಹಾರ ದಿನಾಚರಣೆ-2024ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ವಾರ್ಷಿಕವಾಗಿ ಸುಮಾರು 90 ಸಾವಿರ ಕೋಟಿ ರೂ.ಗಳಷ್ಟು ಆಹಾರ ಪದಾರ್ಥಗಳು ವ್ಯರ್ಥವಾಗುತ್ತಿದೆ. ಅನ್ನಂ ಪರಬ್ರಹ್ಮ ಸ್ವರೂಪಂ’ ಎಂಬ ವಾಕ್ಯದಂತೆ ದೇಶದಲ್ಲಿ ಅನ್ನಕ್ಕಿರುವ ಬೆಲೆ ಬೇರೆ ಯಾವುದಕ್ಕೂ ಇಲ್ಲ. ಆಹಾರದ ಮಹತ್ವ, ಜನರ ಭಕ್ಷ್ಯಮಾನದ ಹಕ್ಕು, ಹಸಿವು ನಿರ್ಮೂಲನೆಗೆ ಜಾಗೃತಿ ಮೂಡಿಸುವುದಾಗಿದೆ ಎಂದು ಹೇಳಿದರು.

ನಮ್ಮ ಅಹಾರ ವ್ಯವಸ್ಥೆಯನ್ನು ಪರಿವರ್ತಿಸಲು ಮತ್ತು ಹಸಿವು ನಿವಾರಿಸುವುದು ಎಂಬ ಚಿಂತನೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರ ನೇತೃತ್ವದಲ್ಲಿ ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದು, ರಾಜ್ಯದ ಕಟ್ಟ ಕಡೆಯ ಪ್ರಜೆಯೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ.

ಭಾರತ ದೇಶದಲ್ಲಿ ಸುಮಾರು ಶೇಕಡಾ 70 ರಷ್ಟು ಜನರು ಕೃಷಿಯನ್ನು ಅವಲಂಭಿಸಿದ್ದಾರೆ. ಈ ಜಗತ್ತಿನಲ್ಲಿ ಸಿರಿದಾನ್ಯಗಳ ಬಳಕೆ ಹೆಚ್ಚಾಗಬೇಕು ಮತ್ತು ಇಂದಿನ ಮಕ್ಕಳು ಅವುಗಳನ್ನು ಉಪಯೋಗಿಸಿದಾಗ ಆರೋಗ್ಯದ ಸಮಸ್ಯೆಗಳನ್ನು ಸುಧಾರಿಸಲು ಸಹಕಾರಿಯಾಗುತ್ತದೆ. 1960 ರಿಂದ 1965 ರ ಅವಧಿಯಲ್ಲಿ ನಾನು ಪ್ರೌಢಶಾಲಾ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ 4 ನಾಲ್ಕು ವರ್ಷಗಳ ಕಾಲ ಮಳೆ ಅಭಾವವಾಗಿತ್ತು ಅಂದು ನಾನು ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದೆ. ಅಂದಿನ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ರವರು ದೇಶದಲ್ಲಿ ಆಹಾರದ ಕೊರತೆ ಇದ್ದಾಗ ಜನರು ಒಂದು ಒತ್ತಿನ ಊಟವನ್ನು ಬಿಡಬೇಕು ಎಂಬ ಆದೇಶವನ್ನು ಮಾಡಿದರು.

ಸಾಂದರ್ಭಿಕ ಚಿತ್ರ
ಹಾಸ್ಟೆಲ್, ಶಾಲೆಗಳಿಗೆ ಗುಣಮಟ್ಟದ ಅಕ್ಕಿ ಪೂರೈಕೆ: ಕೆ.ಎಚ್ ಮುನಿಯಪ್ಪ

ನಂತರ ಎಲ್ಲರೂ ಅದನ್ನು ಅನುಸರಿಸಿ ಆಹಾರದ ಅಭಾವವನ್ನು ಕಡಿಮೆ ಮಾಡಲು ಈ ನಿರ್ಧಾರವನ್ನು ಮಾಡಿದ್ದರು. ಪ್ರಸ್ತುತದ ನಮ್ಮ ಭಾರತ ದೇಶದಲ್ಲಿ 3 ವರ್ಷಗಳಿಗೆ ಆಗುವಷ್ಟು ಆಹಾರ ದವಸದಾನ್ಯಗಳನ್ನು ನಾವು ಶೇಕರಣೆಮಾಡಿದ್ದೇವೆ. ಮತ್ತು ಇತರೆ ದೇಶಗಳಿಗೆ ರಫ್ತು ಮಾಡುವಷ್ಟು ಬಲಿಷ್ಠವಾಗಿದ್ದೇವೆ. ಸಿರಿದಾನ್ಯಗಳ ಬೆಳೆಯುವ ಪ್ರಮಾಣ ಕಡಿಮೆಯಾಗಿದ್ದು, ಇವನ್ನು ರೈತರು ತಮ್ಮ ಜಮೀನಿನಲ್ಲಿ ನವಣೆ, ಆರ್ಕಾ,ರಾಗಿ ಭತ್ತ, ಸಜ್ಜೆ ಮುಂತಾದ ಧಾನ್ಯಗಳನ್ನು ಬೆಳೆಯುವ ಕಡೆ ಗಮನಹರಿಸಬೇಕು.

ನಮ್ಮ ಕುಟುಂಬ ಕೃಷಿ ಅವಲಂಭಿಸಿ ಇಲ್ಲಿವರೆಗೂ ಬೆಳೆದಿದ್ದು, ನಾನು 1968ರಲ್ಲಿ ಎತ್ತು ಕಟ್ಟುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಅಂದಿನ ಕೃಷಿ ಸಚಿವ ರಾಚಯ್ಯರವರಿಂದ ಬಹುಮಾನ ಪಡೆದಿದ್ದೆ ಎಂದು ಸ್ಮರಿಸಿದರು.

ಇದೇ ವೇಳೆ ಸಚಿವರು ಸರ್ಕಾರದ ವತಿಯಿಂದ ಎಲ್ಲ ರೀತಿಯ ಸಹಕಾರ ಕೃಷಿ ವಿಶ್ವ ವಿದ್ಯಾಲಯಕ್ಕೆ ಇರುತ್ತದ ಎಂದು ತಿಳಿಸಿದರು.

ವಿಶ್ವ ಆಹಾರ ದಿನ ವಿಶ್ವಾದ್ಯಂತ ಅಕ್ಟೋಬರ್ 16ರಂದು ಆಚರಿಸಲಾಗುತ್ತದೆ. 1945ರಲ್ಲಿ ಸಂಯುಕ್ತ ರಾಷ್ಟ್ರಗಳ ಆಹಾರ ಮತ್ತು ಕೃಷಿ ಸಂಘಟನೆಯ ಸ್ಥಾಪನೆಯನ್ನು ಗೌರವಿಸುವುದಾಗಿ ಈ ದಿನವನ್ನು ನಿಶ್ಚಿತಗೊಳಿಸಲಾಗಿದೆ. ಆಹಾರದ ಪ್ರಾಮುಖ್ಯತೆ, ಹಸಿವು ಮತ್ತು ಬಡತನದ ನಿರ್ಮೂಲನೆ. ಪೋಷಣೆಯ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಈ ದಿನ ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com