ಮಂಗಳೂರು: ದಿವ್ಯಾಂಗ ಮಕ್ಕಳಿಗೆ ವಿಶೇಷ ದೀಪಾವಳಿ; ಮಣ್ಣಿನ ಹಣತೆ ತಯಾರಿಕೆ!

ಆಗಸ್ಟ್ ನಲ್ಲಿ ಹಣತೆ ತಯಾರಿಕೆ ಆರಂಭಿಸಿದ್ದ ಮಕ್ಕಳು, ಈಗ ಅವರ ಆಯ್ಕೆಗೆ ತಕ್ಕಂತೆ ಬಣ್ಣ ಹಚ್ಚುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ವಿನ್ಯಾಸ ಮತ್ತು ಗಾತ್ರಕ್ಕೆ ತಕ್ಕಂತೆ ಸುಮಾರು 21 ವಿಧದ ದೀಪಗಳನ್ನು ರೂ. 10 ರಿಂದ ರೂ. 60 ವರೆಗೆ ಈ ಕೇಂದ್ರದಲ್ಲಿ ಪ್ರತಿವರ್ಷವೂ ಮಾರಾಟ ಮಾಡಲಾಗುತ್ತದೆ.
Differently abled children
ಮಣ್ಣಿನ ಹಣತೆ ತಯಾರಿಕೆಯಲ್ಲಿ ದಿವ್ಯಾಂಗ ಮಕ್ಕಳು
Updated on

ಮಂಗಳೂರು: ಸೇವಾ ಭಾರತಿ ಟ್ರಸ್ಟ್ ನಡೆಸುವ ಚೇತನ ಮಕ್ಕಳ ಅಭಿವೃದ್ಧಿ ಕೇಂದ್ರದ 30ಕ್ಕೂ ಹೆಚ್ಚು ದಿವ್ಯಾಂಗ ಮಕ್ಕಳು ಈ ಬಾರಿಯ ದೀಪಾವಳಿಗೆ 17,000ಕ್ಕೂ ಹೆಚ್ಚು ಮಣ್ಣಿನ ಹಣತೆ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವಿಶೇಷ ಚೇತನ ಮಕ್ಕಳು ತಯಾರಿಸುವ ಹಣತೆಗೆ ದೇಶಾದ್ಯಂತ ಬೇಡಿಕೆಯಿರುವುದಾಗಿ ಸ್ವಯಂ ಸೇವಕ ವೈ. ಗಂಗರಾಜು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಆಗಸ್ಟ್ ನಲ್ಲಿ ಹಣತೆ ತಯಾರಿಕೆ ಆರಂಭಿಸಿದ್ದ ಮಕ್ಕಳು, ಈಗ ಅವರ ಆಯ್ಕೆಗೆ ತಕ್ಕಂತೆ ಬಣ್ಣ ಹಚ್ಚುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ವಿನ್ಯಾಸ ಮತ್ತು ಗಾತ್ರಕ್ಕೆ ತಕ್ಕಂತೆ ಸುಮಾರು 21 ವಿಧದ ದೀಪಗಳನ್ನು ರೂ. 10 ರಿಂದ ರೂ. 60 ವರೆಗೆ ಈ ಕೇಂದ್ರದಲ್ಲಿ ಪ್ರತಿವರ್ಷವೂ ಮಾರಾಟ ಮಾಡಲಾಗುತ್ತದೆ.

ಈ ಬಾರಿ 17,000 ಹಣತೆ ತಯಾರಿಸುವ ಗುರಿ ಹೊಂದಲಾಗಿದೆ. ಕಳೆದ ವರ್ಷ 15,000 ಹಣತೆ ಮಾರಾಟ ಮಾಡಿದ್ದು, ಕೇಂದ್ರಕ್ಕೆ ರೂ. 4 ಲಕ್ಷ ಆದಾಯ ಬಂದಿತ್ತು. ಈ ಬಾರಿ ಬೇಡಿಕೆ ಹೆಚ್ಚಿದೆ. ಮಕ್ಕಳು ಕೂಡಾ ತಾವು ಮಾಡಿದ ಕೆಲಸಕ್ಕೆ ಡಿಸೆಂಬರ್ ಅಂತ್ಯದಲ್ಲಿ ಹಣ ಪಡೆಯಲಿದ್ದಾರೆ ಎಂದು ಅವರು ಹೇಳಿದರು.

ಕೇಂದ್ರದಲ್ಲಿ ಮಕ್ಕಳಿಗೆ ಹಣತೆ ತಯಾರಿಕೆ ಕುರಿತು ಹಂತ-ಹಂತವಾಗಿ ತರಬೇತಿ ನೀಡುತ್ತೇವೆ ಎಂದು 22 ವರ್ಷಗಳಿಂದ ಕೇಂದ್ರದ ವಿಶೇಷ ಮಾರ್ಗದರ್ಶಕಿ ಮೀನಾಕ್ಷಿ ಹೇಳಿದರು. ಮೊದಲನೆಯದಾಗಿ, ಕೆಲವು ವಿದ್ಯಾರ್ಥಿಗಳಿಗೆ ವಿವಿಧ ಬಣ್ಣಗಳಿಂದ ಹಣತೆ ಸಿದ್ಧಪಡಿಸಲು ತರಬೇತಿ ನೀಡಲಾಗುತ್ತದೆ ಮತ್ತು ನಂತರ ಚಿತ್ರಕಲೆ ಮಾಡಲಾಗುತ್ತದೆ. ಮಕ್ಕಳು ತುಂಬಾ ಸೃಜನಶೀಲರಾಗಿದ್ದು, ಅವರ ಚಟುವಟಿಕೆಗಳು ಪೋಷಕರನ್ನೂ ಪ್ರೇರೇಪಿಸುತ್ತವೆ.

ದೀಪ ತಯಾರಿಕೆ ವಿಶೇಷ ಚೇತನ ಮಕ್ಕಳಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಅವರು ಪರಸ್ಪರ ಬಾಂಧವ್ಯದಿಂದ ಇರುತ್ತಾರೆ. ಹಣತೆಗಳ ಹೊರತಾಗಿ, ಕಾಗದದ ಕವರ್‌ಗಳು, ವೈದ್ಯಕೀಯ ಕವರ್‌ಗಳು, ಬಟ್ಟೆಯ ಕೈಚೀಲಗಳು, ಗಿಫ್ಟ್ ಕವರ್‌ಗಳನ್ನು ತಯಾರಿಸುತ್ತಾರೆ ಮತ್ತು ಸ್ಕ್ರೀನ್ ಪ್ರಿಂಟಿಂಗ್‌ನಲ್ಲಿಯೂ ತೊಡಗುತ್ತಾರೆ ಎಂದು ಅವರು ತಿಳಿಸಿದರು.

ಹಣತೆ ತಯಾರಿಕೆ ಕೆಲಸ ನನಗೆ ಸಂತೋಷವನ್ನುಂಟು ಮಾಡುತ್ತದೆ. ತನ್ನ ಕೌಶಲ್ಯ ಪ್ರದೇಶಿಸಲು ನೆರವಾಗುವ ದೀಪಾವಳಿ ಹಬ್ಬವನ್ನುಎದುರು ನೋಡುತ್ತಿದ್ದೇನೆ. ನಾವು ತಯಾರಿಸಿದ ಹಣತೆಗಳನ್ನು ಮಾರಾಟ ಮಾಡುತ್ತೇವೆ ಎಂದು ವಿದ್ಯಾರ್ಥಿನಿ ಸ್ಮೀತಾ ಹೇಳಿದರು. ವಿಶೇಷ ವಿದ್ಯಾರ್ಥಿಗಳ ವಿಶಿಷ್ಟ ವಿನ್ಯಾಸದ ಹಣತೆ ಕಂಡು ನಿಜಕ್ಕೂ ಆಶ್ಚರ್ಯವಾಯಿತು ಎಂದು ಕೇಂದ್ರಕ್ಕೆ ಭೇಟಿ ನೀಡಿದ ವೀಕ್ಷಕರೊಬ್ಬರು ತಿಳಿಸಿದರು.

Differently abled children
ಪರ ಭಾಷಿಕರಿಗೆ ಕನ್ನಡ ಕಲಿಸಲು ಮುಂದಾದ 'ಆಟೋ ಕನ್ನಡಿಗ': ಚಾಲಕನ ವಿನೂತನ ಪ್ರಯತ್ನಕ್ಕೆ ಶ್ಲಾಘನೆ

ಕೇಂದ್ರದಿಂದ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಮಾಡಲಾಗುತ್ತದೆ. ಅವರನ್ನು ಬೆಳಗ್ಗೆ 10 ಗಂಟೆಯೊಳಗೆ ಶಾಲೆಗೆ ಕರೆದೊಯ್ಯಲಾಗುತ್ತದೆ. ಪ್ರಾರ್ಥನೆ ಮುಗಿದ ನಂತರ ವಿದ್ಯಾರ್ಥಿಗಳು ಯೋಗ ತರಬೇತಿ ಮತ್ತು ವ್ಯಾಯಾಮದಲ್ಲಿ ತೊಡಗಿಕೊಳ್ಳುತ್ತಾರೆ. ನಂತರ ಅವರಿಗೆ ರಾಗಿ ಮಾಲ್ಟ್, ಬ್ರೇಕ್ ಪಾಸ್ಟ್, ಲಂಚ್ ಮತ್ತು ಸ್ಯಾಕ್ಸ್ ನೀಡಲಾಗುತ್ತದೆ. 30 ವಿದ್ಯಾರ್ಥಿಗಳು ಕಲೆ ಮತ್ತಿತರ ಕೌಶಲ್ಯಯುಕ್ತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಉಳಿದವರು ಅಕಾಡೆಮಿಕ್ ತರಗತಿಯಲ್ಲಿ ಪಾಲ್ಗೊಳ್ಳುತ್ತಾರೆ.

ಕೇಂದ್ರದಲ್ಲಿ ಸೆರೆಬ್ರಲ್ ಪಾಲ್ಸಿ, ಆಟಿಸಂ, ಬುದ್ಧಿಮಾಂದ್ಯತೆ, ಅಕ್ಷರದ ಗುರುತನ್ನು ಹಿಡಿಯಲು ಕಷ್ಟವಾಗುವವರು, ಮಾನಸಿಕ ವೈಕಲ್ಯ ಇರುವ106 ವಿದ್ಯಾರ್ಥಿಗಳು ಮತ್ತು 18 ಶಿಕ್ಷಕರು ಇದ್ದಾರೆ. ಮಕ್ಕಳು ತಯಾರಿಸಿದ ಕಾಗದದ ಚೀಲಗಳು, ಮೇಣದಬತ್ತಿಗಳು, ಉಣ್ಣೆಯ ಮ್ಯಾಟ್‌ಗಳು, ಸ್ಕ್ರಿಬ್ಲಿಂಗ್ ಪ್ಯಾಡ್‌ಗಳು, ಫೈಲ್‌ಗಳು, ಬಟ್ಟೆಯ ಕೈ ಚೀಲಗಳು ಮತ್ತು ಇತರ ವಸ್ತುಗಳನ್ನು ನವೆಂಬರ್ 1 ರವರೆಗೆ ಕೇಂದ್ರದಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 6 ರವರೆಗೆ ಪ್ರದರ್ಶಿಸಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತದೆ. ಕೇಂದ್ರವನ್ನು 9449004899 ಸಂಪರ್ಕಿಸಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com