ಬೆಂಗಳೂರು: ನೆಲಮಹಡಿಯಲ್ಲಿ ಪಾರ್ಕಿಂಗ್ ಮಾಡಿದ್ದ 12 ಬೈಕ್ ಗಳು ಬೆಂಕಿಗೆ ಆಹುತಿ!

ನಗರದ ಉಲ್ಲಾಳು ಬಳಿ ಭಾನುವಾರ ಮುಂಜಾನೆ ಈ ಅವಘಡ ನಡೆದಿದ್ದು, ಡಾಮಿನೋಸ್ ಪಿಜ್ಜಾ ಡೆಲಿವರಿ ಮಾಡಲು ಬಳಸುತ್ತಿದ್ದ ಬೈಕ್ ಗಳು ಬೆಂಕಿಗಾಹುತಿಯಾಗಿವೆ.
Fire on Bike
ಬೆಂಕಿಯಿಂದ ಸುಟ್ಟು ಕರಕಲಾದ ಬೈಕ್
Updated on

ಬೆಂಗಳೂರು: ನೆಲಮಹಡಿಯಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ಎರಡು ವಿದ್ಯುತ್ ಚಾಲಿತ ವಾಹನಗಳು ಸೇರಿದಂತೆ 12 ಬೈಕ್ ಗಳು ಬೆಂಕಿಯಿಂದ ಸುಟ್ಟು ಭಸ್ಮವಾಗಿರುವ ಘಟನೆ ಭಾನುವಾರ ನಡೆದಿದೆ.

ನಗರದ ಉಲ್ಲಾಳು ಬಳಿ ಭಾನುವಾರ ಮುಂಜಾನೆ ಈ ಅವಘಡ ನಡೆದಿದ್ದು, ಡಾಮಿನೋಸ್ ಪಿಜ್ಜಾ ಡೆಲಿವರಿ ಮಾಡಲು ಬಳಸುತ್ತಿದ್ದ ಬೈಕ್ ಗಳು ಬೆಂಕಿಗಾಹುತಿಯಾಗಿವೆ.

ಪಿಜ್ಜಾವನ್ನು ಮನೆ ಮನೆಗೆ ತಲುಪಿಸಲು ಡೆಲಿವರಿ ಬಾಯ್ ಗಳು ಈ ಬೈಕ್ ಗಳನ್ನು ಬಳಸುತ್ತಿದ್ದರು. ಕೆಲಸ ಮುಗಿಸಿದ ಬಳಿಕ ನೆಲಮಹಡಿಯಲ್ಲಿ ನಿಲ್ಲಿಸಲಾಗಿತ್ತು. ರಾತ್ರಿ ವೇಳೆ ಅವುಗಳಿಗೆ ಬೆಂಕಿ ಬಿದ್ದಿದ್ದು, ಅಪಾರ ಪ್ರಮಾಣದ ನಷ್ಟವಾಗಿದೆ. ಅಲ್ಲದೆ, ಘಟನೆಯಲ್ಲಿ ಜನರೇಟರ್‌ಗೆ ಹಾನಿಯಾಗಿದೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಈ ಅವಘಡಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Fire on Bike
ಪೀಣ್ಯ ಪೇಪರ್ ಗೋಡೌನ್‌ನಲ್ಲಿ ಬೆಂಕಿ ಅವಘಡ; ಬೆಂಗಳೂರು ನಗರದ ಕೆಲವೆಡೆ ವಿದ್ಯುತ್ ಕಡಿತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com