
ಬೆಂಗಳೂರು: ಹೊರಮಾವು ನೂರಾರು ನಿವಾಸಿಗಳು ಗುಂಡಿ ಬಿದ್ದ ರಸ್ತೆಗಳು ಹಾಗೂ ದುರ್ವಾಸನೆ ವಿರುದ್ಧ ಪ್ರತಿಭಟನೆ ನಡೆಸಿದರು. ಬಾಬುಸಾಬ್ ಪಾಳ್ಯ ಮುಖ್ಯರಸ್ತೆಗೆ ಸಂಪರ್ಕಿಸುವ ಅಗರ ಬಳಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವಿರುದ್ಧ ಘೋಷಣೆಗಳನ್ನು ಕೂಗಿ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿದರು. ನಿವಾಸಿಗಳ ಪ್ರತಿಭಟನೆ ಕುರಿತಂತೆ ಬಿಬಿಎಂಪಿ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದು ಇದೊಂದು 'ಪ್ರಚಾರದ ಗೀಳು' ಎಂದು ಕರೆದಿದ್ದಾರೆ.
ವಾರ್ಡ್‌ನ ಹಿರಿಯ ನಿವಾಸಿಯೂ ಆಗಿರುವ ವರ್ಕಿ ಥಾಮಸ್ ಮಾತನಾಡಿ, ಹೊರಮಾವು ಪ್ರಕೃತಿ ಟೌನ್‌ಶಿಪ್‌ನಲ್ಲಿ 500ಕ್ಕೂ ಹೆಚ್ಚು ಮನೆಗಳಿವೆ. ಆರು ಶಾಲೆಗಳು ಮತ್ತು ಅನೇಕ ಅಪಾರ್ಟ್‌ಮೆಂಟ್‌ಗಳಿವೆ. ಬಿಬಿಎಂಪಿಯು ಚರಂಡಿಗಳನ್ನು ನಿರ್ವಿುಸದೇ ಇರುವುದರಿಂದ ಕೊಳಚೆ ನೀರು ರಸ್ತೆಗಳ ಮೇಲೆ ನಿಂತು ದುರ್ವಾಸನೆ ಬೀರುತ್ತಿದ್ದು ಜನ ಸಂಚಾರಕ್ಕೂ ತೊಂದರೆಯಾಗಿದೆ.
ಒಂದೂವರೆ ವರ್ಷದಿಂದ ಸಮಸ್ಯೆ ಬಗೆಹರಿದಿಲ್ಲ. ಕಳೆದ ವಾರ ಯಲಹಂಕ, ಹೆಬ್ಬಾಳದಲ್ಲಿ ಮಳೆ ಸುರಿದು ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ರಸ್ತೆಗಳು ಹಾಳಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಇನ್ನು ಬಿಬಿಎಂಪಿ ಪ್ರಮುಖ ರಸ್ತೆಗಳು ಕಾರ್ಯಪಾಲಕ ಇಂಜಿನಿಯರ್ ಭಾಗ್ಯಮ್ಮ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್ ಸ್ಥಳಕ್ಕಾಗಮಿಸಿದ್ದು, ಸಮಸ್ಯೆ ಬಗೆಹರಿಸುವ ಬದಲು ಪ್ರತಿಭಟನೆ ನಡೆಸುತ್ತಿರುವವರಿಗೆ ಪ್ರಚಾರದ ಗೀಳು ಎಂದು ಕರೆದರು ಎಂದು ಥಾಮಸ್ ಹೇಳಿದ್ದಾರೆ.
ಪಾಲಿಕೆಯವರಿಗೆ ನಾಚಿಕೆ ಆಗಲೆಂದು ನಿವಾಸಿಗಳು ರಸ್ತೆಯಲ್ಲಿ ನಿಂತಿರುವ ನೀರಿನಲ್ಲಿ ಪೇಪರ್ ಬೋಟ್ ಗಳನ್ನು ಹಾಕಿದ್ದರು. ದುರ್ವಾಸನೆ ಎಂದು ಘೋಷಣೆಗಳನ್ನು ಕೂಗಿದರು. ಸಾರ್ವಜನಿಕ ಬೋರ್‌ವೆಲ್‌ನಿಂದ ನೀರನ್ನು ಅಕ್ರಮವಾಗಿ ಬಳಸುವುದು ಸೇರಿದಂತೆ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಮಾನತುಗೊಂಡ ಎಇ ರಮೇಶ್‌ಗೆ ಅರಿವಿದ್ದರೂ ಅವರು ಎಲ್ಲ ಸಮಸ್ಯೆಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
Advertisement