ಕಾಸರಗೋಡು ಪಟಾಕಿ ದುರಂತ: ಮಂಗಳೂರಿನಲ್ಲಿ 26 ಮಂದಿಗೆ ಚಿಕಿತ್ಸೆ

ಎಲ್ಲಾ 26 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರಲ್ಲಿ ಮೂವರು ಬರ್ನ್ ಇಂಟೆನ್ಸಿವ್ ಕೇರ್ ಯುನಿಟ್‌ಗಳಲ್ಲಿ(ಬಿಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ.
It is suspected that the accident occurred when the fireworks storage facility near Veerarkavu Temple caught fire.
ಕಾಸರಗೋಡಿನಲ್ಲಿ ಪಟಾಕಿ ಅವಘಡ(Videograb)
Updated on

ಮಂಗಳೂರು: ಕೇರಳದ ನೀಲೇಶ್ವರಂನಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ ಪಟಾಕಿ ಅವಘಡದಲ್ಲಿ 150ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಆ ಪೈಕಿ 26 ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಲ್ಲಾ 26 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರಲ್ಲಿ ಮೂವರು ಬರ್ನ್ ಇಂಟೆನ್ಸಿವ್ ಕೇರ್ ಯುನಿಟ್‌ಗಳಲ್ಲಿ(ಬಿಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇವರೆಲ್ಲರೂ ಕೇರಳ ರಾಜ್ಯದ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯವರಾಗಿದ್ದು, ಮೂವರು ಏಳು ವರ್ಷದೊಳಗಿನ ಮಕ್ಕಳಾಗಿದ್ದು, ಅವರನ್ನು ಪೀಡಿಯಾಟ್ರಿಕ್ ಐಸಿಯುಗೆ ದಾಖಲಿಸಲಾಗಿದೆ ಮತ್ತು ಮೂವರಿಗೆ ಗಂಭೀರವಾದ ಸುಟ್ಟ ಗಾಯಗಳಾಗಿವೆ ಎಂದು ಅವರು ಹೇಳಿದ್ದಾರೆ.

It is suspected that the accident occurred when the fireworks storage facility near Veerarkavu Temple caught fire.
ಭಾರತ 125ನೇ ಸ್ಥಾನದಲ್ಲಿದೆ.. ಒಂದು ದಿನದಲ್ಲಿ ಯಾವ ಮಾಲಿನ್ಯವೂ ಆಗಲ್ಲ.. ಪಟಾಕಿ ಹೊಡೆಯಿರಿ: K Annamalai

ಎಂಟು ರೋಗಿಗಳು 40 ರಿಂದ 70 ವರ್ಷ ವಯಸ್ಸಿನವರಾಗಿದ್ದಾರೆ ಮತ್ತು ಕಣ್ಣೂರು ಜಿಲ್ಲೆಯ 76 ವರ್ಷದ ಭರತನ್ ಅವರು ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯಲ್ಲಿರುವ ಅವರ ಕುಟುಂಬ ಸದಸ್ಯರು ಪಿಟಿಐಗೆ ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲೆಯ ನೀಲೇಶ್ವರಂ ಎಂಬಲ್ಲಿ ಸೋಮವಾರ ಮಧ್ಯರಾತ್ರಿ ವೀರನಾರ್ಕವ್ ದೇವಸ್ಥಾನದಲ್ಲಿ ತೆಯ್ಯಂಕೆಟ್ಟು ಮಹೋತ್ಸವ ನಡೆಯುತ್ತಿತ್ತು. ಈ ಉತ್ಸವದ ವೇಳೆ ಪಟಾಕಿ ಸಿಡಿಸುವಾಗ, ಅಲ್ಲೇ ಇದ್ದ ಪಟಾಕಿ ಗೋದಾಮಿಗೆ ಬೆಂಕಿ ತಗುಲಿದೆ. ಪಟಾಕಿಗಳು ಬಾಂಬ್​ ರೀತಿ ಸಿಡಿದಿವೆ. ಉತ್ಸವದಲ್ಲಿ ಸೇರಿದ್ದ ಜನರ ಮೇಲೆ ಪಟಾಕಿ ಕಿಡಿ ಸಿಡಿದಿದೆ. ಕೆಲವರ ಮೈಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ 150ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, 8ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com