ಚಿಕ್ಕಮಗಳೂರು: ಗಿರಿಜನ ಸಮುದಾಯಕ್ಕೆ ಸಿಗದ ಮೂಲ ಸೌಕರ್ಯ; ಬಟ್ಟೆ ಸ್ಟ್ರೆಚರ್ ನಲ್ಲಿ ಯುವಕನ ಶವ ಸಾಗಣೆ

ಬಟ್ಟೆ ಸ್ಟ್ರೆಚರ್‌ನಲ್ಲಿ ಶವ ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಮೃತಪಟ್ಟ ಪರಿಶಿಷ್ಟ ಜಾತಿಗೆ ಸೇರಿದ ಅವಿನಾಶ್ ತೀವ್ರ ಅಸ್ವಸ್ಥರಾಗಿದ್ದರು.
ಬಟ್ಟೆ ಸ್ಟ್ರೆಚರ್ ನಲ್ಲಿ ಯುವಕನ ಶವ ಸಾಗಣೆ
ಬಟ್ಟೆ ಸ್ಟ್ರೆಚರ್ ನಲ್ಲಿ ಯುವಕನ ಶವ ಸಾಗಣೆ
Updated on

ಚಿಕ್ಕಮಗಳೂರು: ಸೂಕ್ತ ರಸ್ತೆ, ಆಸ್ರತ್ರೆ ಮುಂತಾದ ಮೂಲ ಸೌಲಭ್ಯಗಳಿಲ್ಲದ ಕಾರಣ 19 ವರ್ಷದ ಯುವಕನ ಶವವನ್ನು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊನೆಗೋಡು ಗ್ರಾಮಕ್ಕೆ ತಾತ್ಕಾಲಿಕ ಬಟ್ಟೆಯ ಸ್ಟ್ರೆಚರ್‌ನಲ್ಲಿ ಗ್ರಾಮಸ್ಥರು ಹೊತ್ತುಕೊಂಡು ಹೋಗಿದ್ದಾರೆ.

ಬಟ್ಟೆ ಸ್ಟ್ರೆಚರ್‌ನಲ್ಲಿ ಶವ ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಮೃತಪಟ್ಟ ಪರಿಶಿಷ್ಟ ಜಾತಿಗೆ ಸೇರಿದ ಅವಿನಾಶ್ ತೀವ್ರ ಅಸ್ವಸ್ಥರಾಗಿದ್ದರು. ಎಂಟು ಬುಡಕಟ್ಟು ಕುಟುಂಬಗಳು ವಾಸಿಸುವ ಕುಗ್ರಾಮದ ಅವರ ಸಂಬಂಧಿಕರು ಅವರನ್ನು ತಾತ್ಕಾಲಿಕ ಸ್ಟ್ರೆಚರ್‌ನಲ್ಲಿ ರಸ್ತೆ ಮಾರ್ಗದವರೆಗೆ ಹೊತ್ತಕೊಂಡು ಹೋಗಿ, ನಂತರ ಅಲ್ಲಿಂದ ಕಳಸಾ ಪಟ್ಟಣದ ಆಸ್ಪತ್ರೆಗೆ ಸಾಗಿಸಿದರು.

ಶವವವನ್ನು ಸಾಗಿಸುವ ಸಮಯದಲ್ಲಿ, ಕಿರಿದಾದ ಕಾಲು ಸೇತುವೆಯನ್ನು ದಾಟಬೇಕಾಯಿತು, ಏಕೆಂದರೆ ಅವಿನಾಶ್ ಅನ್ನು ಹೊತ್ತೊಯ್ಯುವ ಮಾರ್ಗದಲ್ಲಿ ಸೂಕ್ತವಾದಿ ಸೇತುವೆಗಳೂ ಇಲ್ಲ. ಇಷ್ಟೆಲ್ಲಾ ಪ್ರಯತ್ನ ಪಟ್ಟು ಕರೆದಕೊಂಡು ಹೋದರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವಿನಾಶ್ ಮೃತಪಟ್ಟಿದ್ದಾನೆ.

ಬಟ್ಟೆ ಸ್ಟ್ರೆಚರ್ ನಲ್ಲಿ ಯುವಕನ ಶವ ಸಾಗಣೆ
ದಶಕಗಳೇ ಕಳೆದರೂ ಕೊಡಗಿನ ಜೇನು ಕುರುಬ ಬಡಾವಣೆಗೆ ಮೂಲ ಸೌಕರ್ಯ ಇನ್ನೂ ಮರೀಚಿಕೆ

ಇದಾದ ನಂತರ ಈ ಆದಿವಾಸಿಗಳ ಪ್ರಯಾಣ ಮತ್ತಷ್ಟು ಪ್ರಯಾಸಕರವಾಗಿತ್ತು. ಅವಿನಾಶ್ ಅವರ ದೇಹವನ್ನು ಹೊತ್ತ ಆಂಬುಲೆನ್ಸ್ ಕೆಲದೂರದವರೆಗೆ ಮಾತ್ರ ಬಂದಿತು. ಸರಿಯಾದ ರಸ್ತೆ ಇಲ್ಲದ ಕಾರಣ ಶವವನ್ನು ಆ್ಯಂಬುಲೆನ್ಸ್ ನಿಂದ ಇಳಿಸಿದ ಅವರ ಸಂಬಂಧಿಕರು ಮತ್ತೆ ಹೊತ್ತು ತಮ್ಮ ಗ್ರಾಮಕ್ಕೆ ನಡೆದರು.

ಶವವನ್ನು ಬಟ್ಟೆಯ ಸ್ಟ್ರೆಚರ್‌ನಲ್ಲಿ ಇರಿಸಿ ಊರಿಗೆ ಸಾಗಿಸಲಾಯಿತು. ಅವರು ತಮ್ಮ ಕುಗ್ರಾಮವನ್ನು ತಲುಪುವ ಮೊದಲು ಕಿರಿದಾದ ದಾರಿಯ ಮೂಲಕ 2 ಕಿಲೋಮೀಟರ್ ನಡೆದುಕೊಂಡು ಹೋಗಬೇಕಾಗಿತ್ತು, ಅಲ್ಲಿ ಅಂತಿಮ ವಿಧಿಗಳನ್ನು ನಡೆಸಲಾಯಿತು.

ಕೊನೆಗೋಡು ಗ್ರಾಮಸ್ಥರಿಗೆ, ಸಂಸೆ-ಎಸ್‌ಕೆ ಮೆಗಲ್ ರಸ್ತೆಯು ಹತ್ತಿರದ ಮೋಟಾರುರಸ್ತೆ ಮಾರ್ಗವಾಗಿದೆ, ಇದು ಅವರ ತಮ್ಮಗ್ರಾಮದಿಂದ 2 ಕಿ.ಮೀ. ನಡೆದುಕೊಂಡು ಹೋದರೆ ಈ ರಸ್ತೆ ತಲುಪಬಹುದಾಗಿದೆ. ಈ ನಡುವೆ ಮಳೆಗಾಲದಲ್ಲಿ ತುಂಬಿ ಹರಿಯುವ ಸಣ್ಣ ಹೊಳೆಗಳನ್ನು ದಾಟಬೇಕು. ತಮ್ಮ ಗ್ರಾಮವನ್ನು ಸಂಪರ್ಕಿಸಲು ಯಾವುದೇ ಗಟ್ಟಿಯಾದ ಸೇತುವೆಗಳಿಲ್ಲದ ಕಾರಣ ಈ ನದಿಗಳನ್ನು ದಾಟಲು ಅವರು ಕಾಲುದಾರಿಗಳನ್ನು ಮಾಡಿಕೊಳ್ಳಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com