ಹಲಾಲ್‌ಗಿಂತಲೂ ಚೀನಾ ಉತ್ಪನ್ನಗಳು ಹೆಚ್ಚು ಅಪಾಯಕಾರಿ: ಪ್ರಮೋದ್ ಮುತಾಲಿಕ್

ಹಲಾಲ್ ಕಟ್ ಉತ್ಪನ್ನಗಳಿಗಿಂತಲೂ ಚೀನಾ ಉತ್ಪನ್ನುಗಳು ಹೆಚ್ಚು ಅಪಾಯಕಾರಿಯಾಗಿದ್ದು, ಚೀನಾದ ಉತ್ಪನ್ನಗಳನ್ನು ಬಳಸದಂತೆ ಜನರಿಗೆ ಕರೆ ನೀಡಿದರು.
ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್
Updated on

ಬೆಳಗಾವಿ: ಹಲಾಲ್‌ಗಿಂತಲೂ ಚೀನಾ ಉತ್ಪನ್ನಗಳು ಹೆಚ್ಚು ಅಪಾಯಕಾರಿ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಸೋಮವಾರ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲಾಲ್ ಕಟ್ ಉತ್ಪನ್ನಗಳಿಗಿಂತಲೂ ಚೀನಾ ಉತ್ಪನ್ನುಗಳು ಹೆಚ್ಚು ಅಪಾಯಕಾರಿಯಾಗಿದ್ದು, ಚೀನಾದ ಉತ್ಪನ್ನಗಳನ್ನು ಬಳಸದಂತೆ ಜನರಿಗೆ ಕರೆ ನೀಡಿದರು.

ಗಣೇಶ ಚತುರ್ಥಿ ಮತ್ತು ಇತರ ಹಿಂದೂ ಹಬ್ಬಗಳ ಸಂದರ್ಭದಲ್ಲಿ ಜನರು ಚೀನಾದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸಬೇಕು. ಗೋಭಕ್ಷಕರು, ಗೋಹಂತಕರಿಂದ ಯಾವುದೇ ವಸ್ತು ಖರೀದಿ ಮಾಡಬಾರದು. ಯಾರೂ ಕೂಡ ಈ ಅಪರಾಧ, ತಪ್ಪನ್ನು, ಅಪವಿತ್ರತೆ ಮಾಡಬಾರದು. ಶಾಸ್ತ್ರಬದ್ಧವಾಗಿ ಮಣ್ಣಿನ ಗಣಪತಿಯನ್ನೇ ಪೂಜೆ ಮಾಡಬೇಕು. ಪಿಒಪಿ ಗಣಪತಿ ಉಪಯೋಗ ಬೇಡ. ಇದು ಅಪವಿತ್ರವಾದದ್ದು. ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಲ್ಲಿ ಸಿನಿಮಾ, ಅಶ್ಲೀಲ ಗೀತೆ ಹಾಕಬೇಡಿ. ಭಕ್ತಿ ಗೀತೆ ಹಾಕಿ ಗಣೇಶೋತ್ಸವ ಆಚರಿಸಿ ಪಟಾಕಿ, ಹೂವು ಹಣ್ಣು, ತರಕಾರಿ, ಎಲೆಕ್ಟ್ರಾನಿಕ, ಎಲೆಕ್ಟ್ರಿಕ್ ಸಾಮಗ್ರಿ ಪವಿತ್ರವಾದದ್ದನ್ನು ಪಡೆಯಬೇಕು. ಅಪವಿತ್ರವಾದ ವಸ್ತು ಖರೀದಿ ಮಾಡಿದರೆ ಶಾಸ್ತ್ರಕ್ಕೆ ವಿರೋಧ ಆಗುತ್ತದೆ. ಗಣೇಶೋತ್ಸವ ಮೆರವಣಿಗೆಯಲ್ಲಿ ಮದ್ಯಪಾನ, ಗುಟ್ಕಾ ತಿನ್ನದಂತೆ ಕರೆ ನೀಡಿದರು.

ಪ್ರಮೋದ್ ಮುತಾಲಿಕ್
ಪರಶುರಾಮ ಪ್ರತಿಮೆ ವಿವಾದ: ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿರುದ್ಧ ಪ್ರಮೋದ್ ಮುತಾಲಿಕ್ ವಾಗ್ದಾಳಿ

ಬಾಂಗ್ಲಾದೇಶದಲ್ಲಿ ಇಲ್ಲಿಯವರೆಗೂ ಹಿಂದುಗಳ ಮೇಲೆ ದೌರ್ಜನ್ಯ ಮಾಡುವುದನ್ನು ನಿಲ್ಲಿಸಿಲ್ಲ. 40 ಹಿಂದು ಶಿಕ್ಷಕರಿಂದ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಪಡೆದು ಶಾಲಾ, ಕಾಲೇಜಿಗೆ ನುಗ್ಗಿ ಹಲ್ಲೆ ನಡೆಸುತ್ತಿದ್ದಾರೆ. ಹಿಂದು ಸಮಾಜವನ್ನು ಕೆಣಕುತ್ತಿರುವ ಪುಟಗೋಸಿ ಬಾಂಗ್ಲಾದೇಶ ಗೆ ತಕ್ಕ ಉತ್ತರ ಕೊಡಬೇಕಿದ್ದ ಕೇಂದ್ರ ಸರಕಾರ ಯಾಕೆ ಬಾಂಗ್ಲಾದೇಶದ ಹಿಂದುಗಳಿಗೆ ರಕ್ಷಣೆ ಕೊಡುತ್ತಿಲ್ಲ. ಯಾಕೆ ಪ್ರಧಾನಿ ನರೇಂದ್ರ ‌ಮೋದಿ ಮೌನವಹಿಸಿದ್ದಾರೆ ಏಕೆ ಎಂದು ಪ್ರಶ್ನಿಸಿದರು.

ಬಾಂಗ್ಲಾದೇಶದ ಪ್ರಧಾನಿ ಫಸೀನಾಗೆ ರಕ್ಷಣೆ ಕೊಡುವ ಕೇಂದ್ರ ಸರಕಾರ ಬಾಂಗ್ಲಾದೇಶದ ಹಿಂದುಗಳ ರಕ್ಷಣೆ ‌ಮಾಡುತ್ತಿಲ್ಲ. ಇಂದಿರಾಗಾಂಧಿಯವರು 1971ರಲ್ಲಿ ನಡೆಸಿದ ಯುದ್ಧದ ಮಾದರಿಯಲ್ಲಿ ಬಾಂಗ್ಲಾದೇಶದ ಮೇಲೆ ಕೇಂದ್ರ ಸರಕಾರ ನಡೆಸಬೇಕು. ಕೇಂದ್ರ ಸರಕಾರದ ಮಾಹಿತಿ ಪ್ರಕಾರ 5 ಕೋಟಿ ಬಾಂಗ್ಲಾ ನುಸುಳುಕೋರರು ಇದ್ದಾರೆ. ಕರ್ನಾಟಕದಲ್ಲಿ 12 ಲಕ್ಷ ಜನರು ಬಾಂಗ್ಲಾದೇಶದ ನುಸುಳಿಕೋರರು ಇದ್ದಾರೆ ಅವರನ್ನು ಒದ್ದು ಹೋರಗೆ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ದೇಶದ್ರೋಹಿ ಕ್ಯಾನ್ಸರ್ ಇದ್ದ ಹಾಗೆ. ಇವರನ್ನು ಈಗಲೇ ಹೊಸುಕಿ ಹಾಕಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com