ಚಿಕ್ಕಮಗಳೂರು: ಅನಿವಾಸಿ ಭಾರತೀಯ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಯೋಗ ಗುರು ಬಂಧನ

ಅನಿವಾಸಿ ಭಾರತಿ ಮಹಿಳೆ ವೈದ್ಯೆ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿದೆ. ತಾನು ಹಿಂದಿನ ಜನ್ಮದಲ್ಲಿ ಆಕೆಯ ಜೊತೆ ಸಂಬಂಧ ಹೊಂದಿದ್ದಾಗಿ ಆರೋಪಿ ತಿಳಿಸಿದ್ದಾನೆ.
arrest (file pic)
ಬಂಧನ (ಸಂಗ್ರಹ ಚಿತ್ರ)online desk
Updated on

ಚಿಕ್ಕಮಗಳೂರು: ವಿದೇಶಿ ವೈದ್ಯ ಮಹಿಳೆ ಮೇಲೆ ಯೋಗಗುರು ಅತ್ಯಚಾರ ಎಸಗಿರುವ ಘಟನೆ, ಚಿಕ್ಕಮಗಳೂರು ತಾಲೂಕು ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಯೋಗಗುರು ಹಾಗೂ ಆರೋಪಿ ಪ್ರದೀಪ್ ಉಲ್ಲಾಳ ಎಂಬಾತನನ್ನು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿರುವ ‘ಕೇವಲ’ ಎಂಬ ಆಶ್ರಮದಲ್ಲಿ ಈ ಘಟನೆ ನಡೆದಿದೆ. ಅನಿವಾಸಿ ಭಾರತಿ ಮಹಿಳೆ ವೈದ್ಯೆ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿದೆ. ತಾನು ಹಿಂದಿನ ಜನ್ಮದಲ್ಲಿ ಆಕೆಯ ಜೊತೆ ಸಂಬಂಧ ಹೊಂದಿದ್ದಾಗಿ ಆರೋಪಿ ತಿಳಿಸಿದ್ದಾನೆ.

ಕೆಲವು ತಿಂಗಳ ಹಿಂದೆ ಯೋಗ, ಧ್ಯಾನ ಕಲಿಯಲು ಆಶ್ರಮಕ್ಕೆ ಬಂದಿದ್ದರು. ಯೋಗ, ಧ್ಯಾನ ಕಲಿಸುತ್ತಿದ್ದ ಆರೋಪಿ ಪ್ರದೀಪ್ ವೈದ್ಯೆ ಮೇಲೆ ಅತ್ಯಾಚಾರ ಎಸಗಿದ್ದು ಬೆಳಕಿಗೆ ಬಂದಿದೆ. ದೂರು ದಾಖಲಿಸಿರುವ ಮಹಿಳೆ ಪಂಜಾಬ್‌ ಮೂಲದವರು ಆದರೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. 2021 ಮತ್ತು 2022 ರ ನಡುವೆ ಯೋಗ ಗುರುವನ್ನು ಮೂರು ಬಾರಿ ಭೇಟಿ ಮಾಡಿದ್ದೆ ಆ ವೇಳೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

arrest (file pic)
ಥಾಣೆ: ಸೆಕ್ಸ್ ದಂಧೆಗಾಗಿ ಬಾಂಗ್ಲಾದೇಶಿ ಮಹಿಳೆಯ ಕಳ್ಳಸಾಗಣೆ; ಇಬ್ಬರ ಬಂಧನ, ಅತ್ಯಾಚಾರ ಪ್ರಕರಣ ದಾಖಲು

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com