ಬೆಂಗಳೂರು: ಓಲಾ ಆಟೋ ಚಾಲಕನಿಂದ ಯುವತಿ ಮೇಲೆ ಹಲ್ಲೆ ಆರೋಪ, ವಿಡಿಯೋ ವೈರಲ್

ಯುವತಿ ಮತ್ತು ಅವರ ಸ್ನೇಹಿತೆ ಇಬ್ಬರೂ ಎರಡು ಓಲಾ ಆಟೋ ಬುಕ್ ಮಾಡಿದ್ದಾರೆ. ಮೊದಲಿಗೆ ಬಂದ ಆಟೋವನ್ನು ಯುವತಿ ಹತ್ತಿದ್ದಾರೆ. ಇನ್ನೊಂದು ಆಟೋವನ್ನ ಯುವತಿ ಕ್ಯಾನ್ಸಲ್‌ ಮಾಡಿದ್ದಾರೆ.
ಆಟೋ ಚಾಲಕ
ಆಟೋ ಚಾಲಕ
Updated on

ಬೆಂಗಳೂರು: ಆ್ಯಪ್ ಮೂಲಕ ಬುಕ್ ಮಾಡಿದ್ದ ರೈಡ್ ಅನ್ನು ಕ್ಯಾನ್ಸಲ್ ಮಾಡಿದ ನಂತರ ಆಟೋ ಚಾಲಕ ತನಗೆ ಕಿರುಕುಳ ನೀಡಿ, ದೈಹಿಕ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಬುಧವಾರ ಈ ಘಟನೆ ನಡೆದಿದ್ದು, ಯುವತಿ ಮತ್ತು ಅವರ ಸ್ನೇಹಿತೆ ಇಬ್ಬರೂ ಎರಡು ಓಲಾ ಆಟೋ ಬುಕ್ ಮಾಡಿದ್ದಾರೆ. ಮೊದಲಿಗೆ ಬಂದ ಆಟೋವನ್ನು ಯುವತಿ ಹತ್ತಿದ್ದಾರೆ. ಇನ್ನೊಂದು ಆಟೋವನ್ನ ಯುವತಿ ಕ್ಯಾನ್ಸಲ್‌ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಆಟೋ ಚಾಲಕ ರೈಡ್ ಕ್ಯಾನ್ಸಲ್ ಮಾಡಿದಕ್ಕೆ ರೇಗಾಡಿದ್ದಾರೆ.

ಆಟೋ ಚಾಲಕನ ವರ್ತನೆ ವಿರುದ್ಧ ಯುವತಿ ಓಲಾ ಕಂಪನಿಗೆ ದೂರು ನೀಡಿದ್ದು, ಇದಕ್ಕೆ 'ಎಕ್ಸ್' ನಲ್ಲಿ ಪ್ರತಿಕ್ರಿಯಿಸಿದ ಓಲಾ, ಇದು "ಸಾಕಷ್ಟು ಆತಂಕಕಾರಿಯಾಗಿದೆ". ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಭರವಸೆ ನೀಡಿದ್ದಾರೆ.

ಘಟನೆಯ ವಿಡಿಯೋವನ್ನು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಿನ್ನೆ ಬೆಂಗಳೂರಿನಲ್ಲಿ ನನ್ನ ಸ್ನೇಹಿತೆ ಮತ್ತು ನಾನು ಪೀಕ್ ಅವರ್‌ನಲ್ಲಿ ಓಲಾದಲ್ಲಿ ಎರಡು ಆಟೋಗಳನ್ನು ಬುಕ್ ಮಾಡಿದ್ದೇವು. ನಾನು ಮೊದಲು ಬಂದ ಆಟೋವನ್ನು ಹತ್ತಿದೆ. ಮತ್ತೊಂದು ಆಟೋವನ್ನು ನನ್ನ ಸ್ನೇಹಿತೆ ರದ್ದುಗೊಳಿಸಿದಳು. ಇನ್ನೊಬ್ಬ ಆಟೋ ಡ್ರೈವರ್ ಕೋಪದಿಂದ ನಮ್ಮನ್ನು ಹಿಂಬಾಲಿಸಿದ. ಪರಿಸ್ಥಿತಿ ವಿವರಿಸಿದರೂ ಚಾಲಕ ನಮ್ಮ ವಿರುದ್ಧ ಕೂಗಾಡಲು ಆರಂಭಿಸಿದರು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದರು" ಎಂದು ಯುವತಿ ಆರೋಪಿಸಿದ್ದಾರೆ.

ನಾನು ವಿಡಿಯೋ ರೆಕಾರ್ಡ್ ಮಾಡಲು ಪ್ರಾರಂಭಿಸಿದ ನಂತರ ಮತ್ತಷ್ಟು ಕೆರಳಿದ ಚಾಲಕ, ನಮ್ಮನ್ನು ಬಾಯಿಗೆ ಬಂದ ಹಾಗೆ ಬೈದಿದ್ದು ಮಾತ್ರವಲ್ಲದೆ, ನಿಮ್ಮ ಅಪ್ಪನ ಆಟೋ ಇದಾ ಎಂದು ಪ್ರಶ್ನೆ ಮಾಡಿದ್ದಾರೆ. ಪೊಲೀಸರಿಗೆ ದೂರು ನೀಡ್ತೇನೆ ಎಂದರೆ, ನನಗೆ ಸವಾಲ್‌ ಹಾಕಿದ್ದಾನೆ. ಪೊಲೀಸರ ಯಾವ ಭಯವೂ ಈತನಿಗೆ ಕಾಣಲಿಲ್ಲ ಎಂದು ಯುವತಿ ಬರೆದುಕೊಂಡಿದ್ದಾರೆ.

ಯುವತಿ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಎಡಿಜಿಪಿ ಅಲೋಕ್ ಕುಮಾರ್ ಅವರು, "ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ, ಅವರಂತಹ ಕೆಲವು ಜನ ಆಟೋ ಚಾಲಕರ ಸಮುದಾಯಕ್ಕೆ ಕೆಟ್ಟ ಹೆಸರು ತರುತ್ತಾರೆ. ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com