ಬೆಂಗಳೂರು: ಮಹಾನಗರದ ಐದು ಪೊಲೀಸ್ ಕ್ಯಾಂಪಸ್‌ಗಳಲ್ಲಿ "ಒಂದು ಬಿಲಿಯನ್ ಡ್ರಾಪ್ಸ್" ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿದ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು 590 ಮಳೆ ನೀರು ಇಂಗು ಗುಂಡಿ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.
ಪೊಲೀಸರು ಸಾರ್ವಜನಿಕರ ಸುರಕ್ಷತೆ, ರಕ್ಷಣೆ ಮತ್ತು ಶಾಂತಿ ಕಾಪಾಡುವುದರ ಜೊತೆಗೆ ಪರಿಸರದೊಂದಿಗೆ ಬದ್ದತೆ ತೋರಿಸುತ್ತಿರುವುದು ವಿಶೇಷ. ಸಾರ್ವಜನಿಕ ವಲಯದಲ್ಲೂ ಇದಕ್ಕೆ ಪ್ರಶಂಸೆ ವ್ಯಕ್ತವಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
"ಒಂದು ಬಿಲಿಯನ್ ಡ್ರಾಪ್ಸ್" ಯೋಜನೆಯ ಭಾಗವಾಗಿ, ಈ ವರ್ಷ, ಬೆಂಗಳೂರಿನ ಸ್ಥಳಗಳಲ್ಲಿ 590 ಇಂಗು ಗುಂಡಿಗಳನ್ನು ನಿರ್ಮಿಸಲಾಗುವುದು. ಈ ಉಪಕ್ರಮವು ಐಟಿ ಸಂಸ್ಥೆ ಎಂಫಾಸಿಸ್ ಮತ್ತು ಯುನೈಟೆಡ್ ವೇ ಬೆಂಗಳೂರು ಎಂಬ ಎನ್‌ಜಿಒದ ಜಂಟಿ ಯೋಜನೆಯಾಗಿದೆ ಎಂದರು.
ಪೊಲೀಸ್ಯೋಜನೆಗೆ ಆಯ್ಕೆಯಾದ ಐದು ಪೊಲೀಸ್ ಕ್ಯಾಂಪಸ್‌ಗಳಲ್ಲಿ ಸಿಎಆರ್(ಸಿಟಿ ಆರ್ಮ್ಡ್ ರಿಸರ್ವ್) ಉತ್ತರ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ 9ನೇ ಬೆಟಾಲಿಯನ್, ಭಯೋತ್ಪಾದನೆ ನಿಗ್ರಹ ಕೇಂದ್ರ, ಸಿಎಆರ್ ಹೆಡ್‌ಕ್ವಾರ್ಟರ್ಸ್ ಮತ್ತು ಕೆಎಸ್‌ಆರ್‌ಪಿ 1 ನೇ ಬೆಟಾಲಿಯನ್ ಸೇರಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ಆಯುಕ್ತರು, ನಾವು ಒಟ್ಟಾಗಿ ನಮ್ಮ ಸಿಬ್ಬಂದಿ ಮತ್ತು ಸಮುದಾಯಕ್ಕೆ ಹಸಿರು ಭವಿಷ್ಯವನ್ನು ಖಾತ್ರಿಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ. "ಒನ್ ಬಿಲಿಯನ್ ಡ್ರಾಪ್ಸ್" ಉಪಕ್ರಮವು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಮಳೆ ನೀರನ್ನು ಸೆರೆಹಿಡಿಯಲು ವಿನ್ಯಾಸಗೊಳಿಸಲಾದ ಇಂಗು ಗುಂಡಿಗಳ ಮೂಲಕ ಪರಿಹರಿಸುತ್ತದೆ ಎಂದು ಯುನೈಟೆಡ್ ವೇ ಬೆಂಗಳೂರಿನ ಸಿಇಒ ರಾಜೇಶ್ ಕೃಷ್ಣನ್ ಅವರು ಹೇಳಿದ್ದಾರೆ.
Advertisement