ಕಲಬುರಗಿ ಹನಿಟ್ರ್ಯಾಪ್ ಪ್ರಕರಣ: ದಲಿತ ಸೇನೆ ಅಧ್ಯಕ್ಷ ಸೇರಿ 8 ಮಂದಿ ವಿರುದ್ಧ FIR

ಕೆಲ ತಿಂಗಳ ಹಿಂದೆ ಸೊಲ್ಲಾಪುರದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಕಲಬುರಗಿ ಮೂಲದವರಾದ ಪ್ರಭುಲಿಂಗ ಹಿರೇಮಠ ಅವರು ತಮ್ಮ ಕೆಲಸ ಕಾರ್ಯಗಳಿಗಾಗಿ ಆಗಾಗ ಹೋಟೆಲ್‌ಗೆ ಬರುತ್ತಿದ್ದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕಲಬುರಗಿ: ಕಲಬುರಗಿಯ ‘ದಲಿತ ಸೇನೆ’ ಅಧ್ಯಕ್ಷ, ವಕೀಲರೂ ಆಗಿರುವ ಹನುಮಂತ ಯಳಸಂಗಿ ಸೇರಿದಂತೆ ಎಂಟು ಜನರ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

ಮಹಾರಾಷ್ಟ್ರದ ಅಹ್ಮದ್ ನಗರದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಎಂಟು ಆರೋಪಿಗಳು ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಮತ್ತು ಕಲಬುರಗಿ ಜಿಲ್ಲೆ ಮತ್ತು ಅದರ ಗಡಿ ಜಿಲ್ಲೆಗಳ ಕೆಲವು ಜನರನ್ನು ಹನಿ-ಟ್ರ್ಯಾಪ್ ಮಾಡಲು ಬಳಸಿಕೊಂಡರು ಎಂದು ಅವರು ಆರೋಪಿಸಿದ್ದಾರೆ. ಕೆಲ ತಿಂಗಳ ಹಿಂದೆ ಸೊಲ್ಲಾಪುರದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಕಲಬುರಗಿ ಮೂಲದವರಾದ ಪ್ರಭುಲಿಂಗ ಹಿರೇಮಠ ಅವರು ತಮ್ಮ ಕೆಲಸ ಕಾರ್ಯಗಳಿಗಾಗಿ ಆಗಾಗ ಹೋಟೆಲ್‌ಗೆ ಬರುತ್ತಿದ್ದರು. ಪ್ರಭಲಿಂಗ್ ಹಿರೇಮಠ ತನ್ನ ಜಾತಿಗೆ ಸೇರಿದವನಾಗಿದ್ದರಿಂದ ಆತನೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಾಗಿ ಮಹಿಳೆ ಹೇಳಿದ್ದಾರೆ.

ಆತನನ್ನು ಮಾತನಾಡಿಸುತ್ತಾ ಕೊನೆಗೆ ತನ್ನ ಬಡತನ ಹಾಗೂ ಕಷ್ಟಗಳ ಬಗ್ಗೆ ಪ್ರಭುಲಿಂಗ ಬಳಿ ಹೇಳಿಕೊಂಡಿದ್ದಾಳೆ. ಇದಾದ ನಂತರ ಪ್ರಬುಲಿಂಗ ತನಗೆ ಕಲಬುರಗಿಯಲ್ಲಿ ಒಬ್ಬ ಒಳ್ಳೆ ಸ್ನೇಹಿತನಿದ್ದಾನೆ, ಆತನನ್ನು ಸೊಲ್ಲಾಪುರಕ್ಕೆ ಕರೆತಂದು ಪರಿಚಯಿಸುವುದಾಗಿ ತಿಳಿಸಿದ್ದಾನೆ. ಇದಕ್ಕೆ ಮಹಿಳೆ ಸಮ್ಮತಿಸಿದ್ದಾಳೆ. ಪ್ರಭುಲಿಂಗನು ತನ್ನ ಸ್ನೇಹಿತ ರಾಜು ಲೆಂಗ್ಟಿಯನ್ನು ಸೊಲ್ಲಾಪುರಕ್ಕೆ ಕರೆತಂದು ಆಕೆಗೆ ಪರಿಚಯಿಸಿದನು. ರಾಜು ಲೆಂಗ್ಟಿ ಮಹಿಳೆಯನ್ನು ಕಲಬುರಗಿಗೆ ಬರುವಂತೆ ಹೇಳಿದ್ದು, ಸಂಪಾದನೆಯ ದಾರಿ ತೋರಿಸುವುದಾಗಿ ಹೇಳಿದ್ಧ. ಆತನ ಮಾತನ್ನು ನಂಬಿ ಕಲಬುರಗಿಗೆ ಮಹಿಳೆ ಬಂದಿದ್ದಳು.

ಸಾಂದರ್ಭಿಕ ಚಿತ್ರ
ಬೆಂಗಳೂರು: ಹನಿಟ್ರ್ಯಾಪ್ ಮಾಡುತ್ತಿದ್ದ ಮಹಿಳೆ, ಮಲತಾಯಿ ಸೇರಿ ಮೂವರ ಬಂಧನ

ಪ್ರಭುಲಿಂಗ್ ಮತ್ತು ರಾಜು ಲೆಂಗ್ಟಿ ಆಕೆಯನ್ನು ಅಪಹರಿಸಿ ಲಾಡ್ಜ್‌ಗೆ ಕರೆದೊಯ್ದಿದ್ದಾರೆ. ನಂತರ, ಅವರು ಅವಳಿಗೆ ಫೋನ್ ಸಂಖ್ಯೆಯನ್ನು ನೀಡಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಅವರನ್ನು ಲಾಡ್ಜ್‌ಗೆ ಬರುವಂತೆ ಹೇಳಲು ಆಕೆಗೆ ತಿಳಿಸಿದ್ದಾರೆ. ಮಹಿಳೆ ಕರೆ ಮಾಡಿದ ವ್ಯಕ್ತಿ ಲಾಡ್ಜ್ ಗೆಬಂದಾಗ, ಆತನನ್ನು ದೈಹಿಕವಾಗಿ ಸಂತೋಷಪಡಿಸಲು ಒತ್ತಾಯಿಸಲಾಯಿತು. ಅದನ್ನು ಪ್ರಭುಲಿಂಗ್ ಅವರು ವೀಡಿಯೊ ರೆಕಾರ್ಡ್ ಮಾಡಿದ್ದಾನೆ. ಪ್ರಭುಲಿಂಗ ಮತ್ತು ರಾಜು ಯಳಸಂಗಿ ಎಂಬುವರು ವ್ಯಕ್ತಿಯಿಂದ ಹಣ ಪಡೆದಿದ್ದು, ಮತ್ತೊಬ್ಬ ವ್ಯಕ್ತಿಯನ್ನು ಸಂಪರ್ಕಿಸುವಂತೆ ಮಹಿಳೆಗೆ ಹೇಳಿ ಬಲವಂತವಾಗಿ ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸಲಾಗಿದೆ.

ರಾಜು ಲೆಂಗ್ಟಿ ಮತ್ತು ಪ್ರಭುಲಿಂಗ್ ನಂತರ ತಮ್ಮ ಬಾಸ್ ಹನುಮಂತ್ ಯಳಸಂಗಿ ಮತ್ತು ಅವರು ಎಲ್ಲಾ ಕೆಲಸಗಳನ್ನು ನಿಭಾಯಿಸುತ್ತಾರೆ ಎಂದು ಹೇಳಿ ಆಕೆಗೆ ಸ್ವಲ್ಪ ಹಣ ನೀಡಿ ತನ್ನ ಊರಿಗೆ ಮರಳುವಂತೆ ತಿಳಿಸಿದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com