ದರ್ಶನ್‌ ಗೆ ಜೈಲರ್ ಎಚ್ಚರಿಕೆ; ಶೌಚಾಲಯ ಸ್ವಚ್ಛಗೊಳಿಸಿದ 'ದಾಸ'

ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಟಿವಿಗಾಗಿ ಮಾಡುತ್ತಿರುವ ಕಿರಿಕಿರಿ ಮಾಡುತ್ತಿರುವುದಕ್ಕೆ ಜೈಲು ಅಧಿಕಾರಿಗಳು ದರ್ಶನ್‌ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.
Actor Darshan warned by Bellary jailer
ಬಳ್ಳಾರಿ ಜೈಲಿನಲ್ಲಿ ದರ್ಶನ್
Updated on

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಟಿವಿ ವಿಚಾರವಾಗಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ಜೈಲಿನ ಅಧಿಕಾರಿಗಳಿಂದ ವಾರ್ನಿಂಗ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಹೌದು.. ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಟಿವಿಗಾಗಿ ಮಾಡುತ್ತಿರುವ ಕಿರಿಕಿರಿ ಮಾಡುತ್ತಿರುವುದಕ್ಕೆ ಜೈಲು ಅಧಿಕಾರಿಗಳು ದರ್ಶನ್‌ಗೆ ಖಡಕ್ ಎಚ್ಚರಿಕೆ ನೀಡಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಅನುಭವಿಸಿದ್ದ ದರ್ಶನ್, ಬಳ್ಳಾರಿ ಜೈಲಿನಲ್ಲಿ ಸೆಲ್‌ನ ಕಸ ಗುಡಿಸಿ, ಶೌಚಾಲಯ ಸ್ವಚ್ಛಗೊಳಿಸುವ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ಪತ್ರಿಕೆಯೊಂದು ವರದಿ ಮಾಡಿದ್ದು, 'ಬಳ್ಳಾರಿ ಜೈಲಿನಲ್ಲಿ ದರ್ಶನ್‌ಗೆ ನಿಜವಾದ ಸೆರೆವಾಸ ಹೇಗಿರುತ್ತದೆ ಎಂಬ ಅನುಭವ ಆಗುತ್ತಿದ್ದು, ಸೆಲ್‌ನಲ್ಲಿ ಕಸ ಗುಡಿಸುವುದು, ಬಟ್ಟೆ ತೊಳೆಯುವುದು, ಶೌಚಾಲಯ ಸ್ವಚ್ಛತೆ ಎಲ್ಲವನ್ನೂ ಅವರೇ ಮಾಡಿಕೊಳ್ಳುತ್ತಿದ್ದಾರೆ. ಜೈಲಿನ ನಿಯಮದ ಪ್ರಕಾರ ಶೌಚಾಲಯವನ್ನು ವಾರಕ್ಕೊಮ್ಮೆ ಜೈಲಿನ ಸ್ವಚ್ಛತಾ ಕೆಲಸಗಾರರು ಬಂದು ಸ್ವಚ್ಛ ಮಾಡುತ್ತಾರೆ.

ಉಳಿದ ದಿನ ಸೆಲ್‌ನಲ್ಲಿರುವ ಆರೋಪಿಗಳೇ ಕ್ಲೀನ್ ಮಾಡಿಕೊಳ್ಳಬೇಕು. ಹಾಗಾಗಿ ದರ್ಶನ್ ತಮ್ಮ ಸೆಲ್‌ನಲ್ಲಿ ತಾವೇ ಕಸ ಗುಡಿಸಿಕೊಂಡು ಸ್ವಚ್ಛತಾ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

Actor Darshan warned by Bellary jailer
ರೇಣುಕಾಸ್ವಾಮಿ ಹತ್ಯೆ ಪ್ರಕರಣ: ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ದರ್ಶನ್; ಚಾರ್ಜ್'ಶೀಟ್ ನಲ್ಲಿ ಸ್ಫೋಟಕ ಅಂಶಗಳು ಬಹಿರಂಗ..!

ಜೈಲರ್ ಖಡಕ್ ವಾರ್ನಿಂಗ್

ಜೈಲಿನಲ್ಲಿ ಟಿವಿ ಕೊಡುವಂತೆ ಕಿರಿಕಿರಿ ಮಾಡುತ್ತ ಅಸಭ್ಯ ವರ್ತನೆ ತೋರಿರುವ ದರ್ಶನ್‌ಗೆ ಜೈಲಿನ ಅಧಿಕಾರಿಗಳಿ ಖಡಕ್ ಎಚ್ಚರಿಕೆ ನೀಡಿ ಪಾಠ ಹೇಳಿದ್ದಾರೆ. 'ಇದು ಜೈಲು ಇರುವಷ್ಟು ದಿನ ಜೈಲಿನ ನಿಯಮ ಪಾಲನೆ ಮಾಡಿ' ಎಂದು ದರ್ಶನ್‌ಗೆ ಜೈಲು ಅಧಿಕಾರಿಗಳು ತಮ್ಮದೇ ಶೈಲಿನಲ್ಲಿ ವಾರ್ನಿಂಗ್ ನೀಡಿದ್ದಾರೆ ಎನ್ನಲಾಗಿದೆ.

'ಜೈಲಿನ ಶಿಸ್ತನ್ನು ಉಲ್ಲಂಘನೆ ಮಾಟುತ್ತಿದ್ದೀರಿ. ಇದು ಸರಿಯಲ್ಲ.. ಜೈಲು ನಿಯಮಾವಳಿ ಪ್ರಕಾರ ಏನು ಸೌಲಭ್ಯ ಕೊಡಲು ಸಾಧ್ಯವೋ ಅದನ್ನು ಒದಗಿಸುತ್ತೇವೆ, ಹೆಚ್ಚಿನ ಸೌಲಭ್ಯ ಬೇಕು ಎಂದರೆ ನ್ಯಾಯಾಲಯಕ್ಕೆ ಅರ್ಜಿ ಹಾಕಿ ಸುಮ್ಮನೆ ಅದು ಕೊಡಿ ಇದು ಕೊಡಿ ಎಂದು ಕಿರಿಕಿರಿ ಮಾಡಬೇಡಿ ಎಂದು ಜೈಲರ್ ದರ್ಶನ್‌ಗೆ ಖಡಕ್ ಆಗಿಯೇ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.

ಟಿವಿಗಾಗಿ ಕೋರ್ಟ್ ಮೊರೆ ಹೋಗಿದ್ದ ದಾಸ

ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್, ಟಿವಿ ಕೊಡುವಂತೆ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಅದರಂತೆ ಜೈಲು ಅಧಿಕಾರಿಗಳು ಹೊಸ ಟಿವಿ ಇಲ್ಲದ ಕಾರಣ ಹಳೆಯ ಟಿವಿಯನ್ನೇ ದುರಸ್ಥಿ ಮಾಡಿ ಕೊಟ್ಟಿದ್ದರು. ಆ ಟಿವಿ ಸರಿಯಿಲ್ಲ ತೆಗೆದುಕೊಂಡು ಹೋಗಿ ಎಂದು ದರ್ಶನ್ ಕಿರಿಕಿರಿ ಮಾಡುತ್ತಿದ್ದರು ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com