ಗದಗದಲ್ಲಿ ಹೆಚ್ಚಿದ ಗುಳೆ: ವೃದ್ಧಾಶ್ರಮ ಸ್ವರೂಪ ತಾಳಿದ ಗ್ರಾಮಗಳು..!

ಈ ಭಾಗಗಳಲ್ಲಿ ಕೈಗಾರಿಕೆಗಳು ಇಲ್ಲದ ಕಾರಣ ಇಲ್ಲಿ ಉದ್ಯೋಗ ಸಿಗುವುದು ಕಷ್ಟವಾಗಿದೆ. ಅಲ್ಲದೆ, ಈ ವರ್ಷ ಅತಿವೃಷ್ಟಿ, ಮತ್ತು ಬೆಳೆ ನಷ್ಟದಿಂದಾಗಿ ಯುವಕರು ಜೀವನೋಪಾಯಕ್ಕಾಗಿ ನಗರಗಳತ್ತ ಮುಖ ಮಾಡುವಂತಾಗಿದೆ.
ಗದಗ ಗ್ರಾಮ.
ಗದಗ ಗ್ರಾಮ.
Updated on

ಗದಗ: ಉದ್ಯೋಗ ಅರಸಿ ದೊಡ್ಡ ನಗರ, ಪಟ್ಟಣಗಳಿಗೆ ಯುವಕರು ದೊಡ್ಡ ಪ್ರಮಾಣದಲ್ಲಿ ವಲಸೆ ಹೋಗುತ್ತಿರುವ ಪರಿಣಾಮ ಗದಗ ಜಿಲ್ಲೆಯ ಕೆಲ ಗ್ರಾಮಗಳು ವೃದ್ಧಾಶ್ರಮಗಳಾಗಿ ಬದಲಾಗುತ್ತಿವೆ.

ಈ ಭಾಗಗಳಲ್ಲಿ ಕೈಗಾರಿಕೆಗಳು ಇಲ್ಲದ ಕಾರಣ ಇಲ್ಲಿ ಉದ್ಯೋಗ ಸಿಗುವುದು ಕಷ್ಟವಾಗಿದೆ. ಅಲ್ಲದೆ, ಈ ವರ್ಷ ಅತಿವೃಷ್ಟಿ, ಮತ್ತು ಬೆಳೆ ನಷ್ಟದಿಂದಾಗಿ ಯುವಕರು ಜೀವನೋಪಾಯಕ್ಕಾಗಿ ನಗರಗಳತ್ತ ಮುಖ ಮಾಡುವಂತಾಗಿದೆ. ಅಲ್ಲದೆ, ಅತ್ಯಂತ ಕಡಿಮೆ ವೇತನ ಕೂಡ ವಲಸೆಗೆ ಮತ್ತೊಂದು ಕಾರಣವಾಗಿದೆ.

ಸಾಮಾನ್ಯವಾಗಿ ಈ ಅವಧಿಯಲ್ಲಿ ಜನರು ಜಮೀನುಗಳ ಕಾರ್ಯದಲ್ಲಿ ಬಿಝಿಯಾಗುತ್ತಿದ್ದರು. ಆದರೆ, ಈ ಬಾರಿ ಭಾರೀ ಮಳೆಯಂದಾಗಿ ಬೆಳೆ ನಷ್ಟ ಎದುರಾಗಿದೆ. ಹೀಗಾಗಿ, ಯುವಕರು ನಗರದತ್ತ ಮುಖ ಮಾಡಿದ್ದು, ಹಳ್ಳಿಗಳಲ್ಲಿ ವಯೋವೃದ್ಧರು ಮಾತ್ರ ಕಾಣಿಸತೊಡಗಿದ್ದಾರೆ.

ನಿರುದ್ಯೋಗ ಸಮಸ್ಯೆ ಪರಿಹಾರಕ್ಕಾಗಿ ಈ ಹಿಂದೆ ಹಳ್ಳಿಗುಡಿ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮದ ನೂರಾರು ರೈತರು ಮಳಿಗೆ ಸ್ಥಾಪನೆಗೆ ಕೈಗಾರಿಕೆಗಳಿಗೆ 1,500 ಎಕರೆ ಭೂಮಿ ನೀಡಲು ಮುಂದಾಗಿದ್ದರು.

2011ರಲ್ಲಿ 'ಪೋಸ್ಕೊ' ಉಕ್ಕು ಕಾರ್ಖಾನೆ ಸ್ಥಾಪನೆಗೂ ಮುಂದಾಗಿತ್ತು. ಆದರೆ, ಸರ್ಕಾರದ ಮುಂದಾಳತ್ವ ಹಾಗೂ ಇತರೆ ಅಡಚಣೆಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಈ ಯೋಜನೆ ಅಂದುಕೊಂಡಂತೆ ಆಗಿದ್ದರೆ, ಹಳ್ಳಿಗುಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಮಾರು 6,000 ಎಕರೆ ಭೂಮಿಯಲ್ಲಿ ಸ್ಟೀಲ್ ಪ್ಲಾಂಟ್ ಸ್ಥಾಪನೆಯಾಗುತ್ತಿತ್ತು. ಇದರಿಂದ 10,000 ಕ್ಕೂ ಹೆಚ್ಚು ಗ್ರಾಮಸ್ಥರಿಗೆ ನೇರ ಅಥವಾ ಪರೋಕ್ಷ ಉದ್ಯೋಗ ಮತ್ತು ವ್ಯಾಪಾರ ಅವಕಾಶಗಳು ಸಿಗುತ್ತಿತ್ತು.

ಗದಗ ಗ್ರಾಮ.
ಗದಗ: ಗಜೇಂದ್ರಗಡ ಬೆಟ್ಟಗಳ ಮೇಲಿದೆ ಮಿನಿ ಮರುಭೂಮಿ?

ಈ ಭಾಗಗಳಲ್ಲಿ ಕೈಗಾರೀಕರಣ ತೀರಾ ಅಗತ್ಯವಾಗಿದ್ದರೂ. ಉದ್ಯಮಿಗಳು ಮಾತ್ರ ಖನಿಜ ಸಂಪನ್ಮೂಲಗಳಿಂದಾಗಿ ಕಪ್ಪತಗುಡ್ಡದತ್ತ ಮಾತ್ರ ದೃಷ್ಟಿ ನೆಡುತ್ತಿದ್ದಾರೆ. ಆದರೆ, ಬೆಟ್ಟ ಪ್ರದೇಶ ಜೀವವೈವಿಧ್ಯತೆಯನ್ನೊಳಗೊಂಡ ತಾಣವಾಗಿದ್ದು, ಅದರ ರಕ್ಷಣೆಗೆ ಅಭಿಯಾಗಳು ನಡೆಯುತ್ತಿವೆ.

ಏತನ್ಮಧ್ಯೆ ಸಂಕಷ್ಟಕ್ಕೆ ಸಿಲುಕಿರುವ ಹಳ್ಳಿಗುಡಿ ಮತ್ತು ಇತರ ಗ್ರಾಮಗಳ ಗ್ರಾಮಸ್ಥರು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮತ್ತು ಸಂಬಂಧಿಸಿದ ಇತರ ಇಲಾಖೆಗಳನ್ನು ಸಂಪರ್ಕಿಸಿ, ಈ ಭಾಗಗಳಲ್ಲಿ ಕೈಗಾರಿಕೆಗಳ ಸ್ಥಾಪಿಸುವಂತೆ ಮನವಿ ಮಾಡಿಕೊಳ್ಳುತ್ತಲೇ ಇದ್ದಾರೆ.

ಹಳ್ಳಿಗುಡಿ ಗ್ರಾಮಸ್ಥ ರಾಜೇಶ ದಿಗ್ಗಾವಿ ಮಾತನಾಡಿ, ‘ನಿರುದ್ಯೋಗ ಸಮಸ್ಯೆಯಿಂದ ಹಳ್ಳಿಗುಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯುವಕರೇ ಇಲ್ಲದಂತಾಗಿದೆ. ಇಲ್ಲಿಗೆ ಬರುವ ಕೈಗಾರಿಕೆಗಳು ಪ್ರತಿ ಕುಟುಂಬದಲ್ಲಿ ಒಬ್ಬರಿಗಾದರೂ ಉದ್ಯೋಗ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com