
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಫುಟ್ ಪಾತ್ ಗಳ ಮೇಲೆ ಜನರಿಗೆ ನಡೆದುಕೊಂಡು ಹೋಗಲು ಸ್ಥಳವಿರುವುದಿಲ್ಲ, ಬೀದಿಬದಿ ವ್ಯಾಪಾರಿಗಳು ಆಕ್ರಮಣ ಮಾಡಿಕೊಂಡುಬಿಟ್ಟಿದ್ದಾರೆ ಎಂಬ ಕೂಗು ಸಾಕಷ್ಟು ಕೇಳಿಬರುತ್ತಿದೆ.
ವಸತಿ ಪ್ರದೇಶಗಳಲ್ಲಿ ಫುಟ್‌ಪಾತ್‌ಗಳನ್ನು ಕಾರುಗಳು, ಆಟೋಗಳು ಅಥವಾ ದ್ವಿಚಕ್ರ ವಾಹನಗಳಿಗೆ ಶಾಶ್ವತ ಪಾರ್ಕಿಂಗ್ ಸ್ಥಳಗಳಾಗಿ ಬಳಸಲಾಗುತ್ತದೆ. ಮರದ ಕುಂಡಗಳನ್ನು ಇಡಲು ಕಾಲುದಾರಿಗಳನ್ನು ಬಳಸುತ್ತಾರೆ. ಇಟ್ಟಿಗೆಗಳು, ಮರಳು, ತ್ಯಾಜ್ಯ ವಸ್ತುಗಳಂತಹ ನಿರ್ಮಾಣ ಸಾಮಗ್ರಿಗಳನ್ನು ಎಸೆಯಲು ಅವರು ಫುಟ್‌ಪಾತ್‌ಗಳನ್ನು ಬಳಸಿಕೊಂಡರೆ ಸಾರ್ವಜನಿಕರು ಓಡಾಡುವುದು ಹೇಗೆ ಎಂಬ ಅಳಲು ಜನರದ್ದಾಗಿದೆ.
ವಸತಿ ಪ್ರದೇಶಗಳಲ್ಲಿ ವ್ಯಾಪಕವಾದ ವಾಣಿಜ್ಯೀಕರಣ ಚಟುವಟಿಕೆಯಿಂದಾಗಿ ನೂರಾರು ಕಚೇರಿಗಳು, ಅಂಗಡಿಗಳು, ಗೋಡೌನ್‌ಗಳು ತಲೆಯೆತ್ತುತ್ತಿವೆ. ಗ್ರಾಹಕರು ತಮ್ಮ ವಾಹನಗಳನ್ನು ಫುಟ್‌ಪಾತ್‌ಗಳಲ್ಲಿ ನಿಲ್ಲಿಸುತ್ತಾರೆ, ಪಾದಚಾರಿಗಳಿಗೆ ನಿರ್ಬಂಧಿಸುತ್ತಾರೆ. ಇದರ ಹೊರತಾಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಯ ಆದೇಶದಂತೆ ವಾಣಿಜ್ಯ ಕಟ್ಟಡಗಳು ಸಾಕಷ್ಟು ನೆಲಮಾಳಿಗೆಯ ಪಾರ್ಕಿಂಗ್ ಸೌಲಭ್ಯಗಳನ್ನು ಒದಗಿಸಲು ವಿಫಲವಾದ ಕಾರಣ, ವಾಹನಗಳು ಫುಟ್‌ಪಾತ್‌ಗಳಲ್ಲಿ ನಿಲ್ಲಿಸಬೇಕಾದ ಪರಿಸ್ಥಿತಿ ಬಂದಿದೆ.
ವಸತಿ ಪ್ರದೇಶಗಳಲ್ಲಿ, ಫುಟ್‌ಪಾತ್‌ಗಳು ಜನರ ಓಡಾಡಕ್ಕೆ ಮಾತ್ರ ಬಳಕೆಯಾಗಬೇಕೆಂಬುದು ಕೇವಲ ಸರ್ಕಾರದ ನಿಯಮದಲ್ಲಿ ಮಾತ್ರವಿದೆ. ಬಹುಪಾಲು ಫುಟ್‌ಪಾತ್‌ಗಳು ಕಾರುಗಳು, ದ್ವಿಚಕ್ರ ವಾಹನಗಳು ಮತ್ತು ಆಟೋಗಳಿಗೆ ಶಾಶ್ವತ ಪಾರ್ಕಿಂಗ್ ಸ್ಥಳಗಳಾಗಿ ಮಾರ್ಪಟ್ಟಿವೆ.
ರಸ್ತೆಗಳಿಂದ ಕಾಲ್ನಡಿಗೆಯನ್ನು ಪ್ರತ್ಯೇಕಿಸಲು ಫುಟ್‌ಪಾತ್‌ಗಳ ಅಂಚಿನಲ್ಲಿ ಹಾಕಲಾದ ಕರ್ಬ್ ಕಲ್ಲುಗಳನ್ನು ವಾಹನಗಳು ಫುಟ್‌ಪಾತ್‌ಗಳಿಗೆ ಸುಲಭವಾಗಿ ಪ್ರವೇಶಿಸಲು ತೆಗೆದುಹಾಕಲಾಗುತ್ತದೆ. ಅನೇಕ ಪ್ರದೇಶಗಳಲ್ಲಿ ಮನೆ ಮಾಲೀಕರು ತಮ್ಮ ವಾಹನಗಳನ್ನು ಮಳೆ ಮತ್ತು ಬಿಸಿಲಿನಿಂದ ರಕ್ಷಿಸಲು ಫುಟ್‌ಪಾತ್‌ಗಳ ಮೇಲೆ ಶಾಶ್ವತ ಕಟ್ಟಡಗಳನ್ನು ನಿರ್ಮಿಸುವುದು ಸಾಮಾನ್ಯವಾಗಿದೆ, ಮಾರ್ಗಗಳು ಎಲ್ಲರಿಗೂ ಮೀಸಲಾದವು, ಅದು ಯಾರ ವೈಯಕ್ತಿಕ ಸ್ವತ್ತಲ್ಲ ಎಂಬುದು ಕೇವಲ ಬಾಯಿ ಮಾತಾಗಿದೆ ಎನ್ನುತ್ತಾರೆ ಚಾಮರಾಜಪೇಟೆ ನಿವಾಸಿ ಪುರುಷೋತ್ತಮ ಶಿವ.
ನಗರದಲ್ಲಿನ ಫುಟ್‌ಪಾತ್‌ಗಳು ವೃದ್ಧರು ಸೇರಿದಂತೆ ಅನಾರೋಗ್ಯ ಸಮಸ್ಯೆ ಇರುವವರಿಗೆ ನಡೆದುಕೊಂಡು ಸುಲಭವಾಗಿ ಹೋಗಲು ಯೋಗ್ಯವಾಗಿರಬೇಕು. ಇದಕ್ಕಾಗಿ, ಫುಟ್‌ಪಾತ್‌ಗಳು ಸಮತಟ್ಟಾಗಿರಬೇಕು, ಕಟ್ಟಡ ಸಾಮಗ್ರಿಗಳನ್ನು ಅವುಗಳ ಮೇಲೆ ರಾಶಿ ಮಾಡಬಾರದು ಮತ್ತು ವಾಹನಗಳನ್ನು ನಿಲ್ಲಿಸಬಾರದು ಎಂದು ಮಲ್ಲೇಶ್ವರಂ ಸ್ವಾಭಿಮಾನ ಇನಿಶಿಯೇಟಿವ್ (ಎಂಎಸ್‌ಐ) ರೇಖಾ ಚಾರಿ ಹೇಳುತ್ತಾರೆ.
ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್‌ನ ಅಧ್ಯಕ್ಷ ವಿಕ್ರಮ್ ರೈ, ಉತ್ತಮವಾದ ಫುಟ್‌ಪಾತ್‌ಗಳಿದ್ದರೆ ನಿವಾಸಿಗಳು ನೆರೆಹೊರೆಯ ಅಂಗಡಿ ಅಥವಾ ಹತ್ತಿರದ ದರ್ಶಿನಿಗಳಿಗೆ ನಡೆದುಕೊಂಡು ಹೋಗಲು ಅಥವಾ ಸುಮ್ಮನೆ ಸುತ್ತಾಡಲು ಅನುಕೂಲವಾಗುತ್ತದೆ. ಜನರ ಜೀವನಶೈಲಿ ಮತ್ತು ಆರೋಗ್ಯಕ್ಕೆ ಸಹ ಅನುಕೂಲವಾಗುತ್ತದೆ ಎನ್ನುತ್ತಾರೆ.
ಒಂದೆರಡು ವರ್ಷಗಳ ಹಿಂದೆ ಬಿಬಿಎಂಪಿಯು ಫುಟ್‌ಪಾತ್‌ಗಳ ಅಭಿವೃದ್ಧಿಗೆ ಪ್ರತಿ ವಾರ್ಡ್ ಸಮಿತಿಗೆ ನೀಡಲಾದ 60 ಲಕ್ಷ ರೂಪಾಯಿ ಬಜೆಟ್‌ನಲ್ಲಿ ಒಂದು ಭಾಗವನ್ನು ವಿನಿಯೋಗಿಸುವ ಮೂಲಕ ಪ್ರಗತಿಪರ ಹೆಜ್ಜೆಯನ್ನು ತೆಗೆದುಕೊಳ್ಳಲಾಗಿದೆ. ಈ ನೀತಿಯು ವಿನ್ಯಾಸ ಮತ್ತು ಅನುಷ್ಠಾನಕ್ಕೆ ಹೆಚ್ಚಿನ ಹೂಡಿಕೆಯ ದೃಷ್ಟಿಯಿಂದ ಮತ್ತಷ್ಟು ವಿಕಸನಗೊಳ್ಳಬೇಕು. ಬೆಂಗಳೂರಿನಾದ್ಯಂತ ಉತ್ತಮ ಗುಣಮಟ್ಟದ ಕಾಲುದಾರಿಗಳು ರೂಪುಗೊಳ್ಳಬೇಕು. ಫುಟ್ ಪಾತ್ ಬಳಸಿಕೊಳ್ಳುವ ಮತ್ತು ನಿರ್ವಹಿಸುವ ನಂತರದ ಹಂತವೂ ಅಷ್ಟೇ ಮುಖ್ಯವಾಗಿದೆ ಎನ್ನುತ್ತಾರೆ.
ಕನಕಪುರ ರಸ್ತೆಯ ಚೇಂಜ್ ಮೇಕರ್ಸ್ ನ ಕಾರ್ಯದರ್ಶಿ ವಿ.ಕೆ.ಶ್ರೀವತ್ಸ, ಕನಕಪುರ ರಸ್ತೆ ಹಾಗೂ ಅಕ್ಕಪಕ್ಕದ ರಸ್ತೆಗಳಲ್ಲಿ ಫುಟ್ ಪಾತ್ ಗಳ ಅತಿಕ್ರಮಣ ವಿಪರೀತವಾಗಿದೆ. ಹಲವಾರು ವಾಣಿಜ್ಯ ಚಟುವಟಿಕೆಗಳು ಮತ್ತು ಅವುಗಳಲ್ಲಿ ಯಾವುದೂ ಮುಖ್ಯ ರಸ್ತೆ ಮತ್ತು ವಸತಿ ಪ್ರದೇಶಗಳಲ್ಲಿ ತಮ್ಮ ಆವರಣದೊಳಗೆ ಪಾರ್ಕಿಂಗ್ ಸೌಲಭ್ಯಗಳನ್ನು ಮಾಡಿಲ್ಲ, ಸಾರ್ವಜನಿಕ ಕಾಲುದಾರಿಗಳನ್ನು ಅವರ ಖಾಸಗಿ ಪಾರ್ಕಿಂಗ್ ಸ್ಥಳವಾಗಿ ಪರಿವರ್ತಿಸಲಾಗಿದೆ. ಸಾರಕ್ಕಿಯಿಂದ ನೈಸ್ ರಸ್ತೆವರೆಗಿನ ಕನಕಪುರ ಮುಖ್ಯರಸ್ತೆ ಮತ್ತು ವಸಂತಪುರ ಮುಖ್ಯರಸ್ತೆಯ ಅಕ್ಕಪಕ್ಕದ ರಸ್ತೆಗಳು, ರಾಗುವನಹಳ್ಳಿ 80 ಅಡಿ ರಸ್ತೆ, ವಾಜರಹಳ್ಳಿ 100 ಅಡಿ ರಸ್ತೆ, ಕೋಣನಕುಂಟೆ ಮುಖ್ಯರಸ್ತೆ ಹೀಗೆ ಅನೇಕ ಕಡೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದರು.
ವಾಣಿಜ್ಯ ಸಂಸ್ಥೆಗಳು ಫುಟ್ ಪಾತ್ ಗಳನ್ನು ಅತಿಕ್ರಮಿಸಿದರೆ, ತರಕಾರಿ ಮಾರಾಟಗಾರರು, ಪಾನಿ ಪುರಿ ಅಂಗಡಿಗಳು, ಇತರ ತಿನಿಸು ಕೇಂದ್ರಗಳು, ಪಾನ್ ಬೀಡಾ ಅಂಗಡಿಗಳು ಮತ್ತು ನಂದಿನಿ ಬೂತ್‌ಗಳು ಫುಟ್ ಪಾತ್ ಗಳನ್ನು ಅತಿಕ್ರಮಿಸಿ ತಮ್ಮ ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗುತ್ತಿವೆ.
ಬಿಬಿಎಂಪಿ ಫುಟ್‌ಪಾತ್‌ಗಳಲ್ಲಿ ಟೈಲ್ಸ್‌ಗಳನ್ನು ಹಾಕಲು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದರೆ, ಅದನ್ನು ಮಾರಾಟಗಾರರ ಅವಶ್ಯಕತೆಗೆ ಅನುಗುಣವಾಗಿ ಸ್ವಲ್ಪ ಸಮಯದೊಳಗೆ ಮಾರ್ಪಡಿಸಲಾಗುತ್ತದೆ. ಶೇಕಡಾ 95ರಷ್ಟು ಫುಟ್‌ಪಾತ್‌ಗಳು ಬಳಕೆಗೆ ಯೋಗ್ಯವಾಗಿಲ್ಲ, ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಗಳಲ್ಲಿ ಓಡಾಡುವುದರಿಂದ ಅತಿವೇಗದ ವಾಹನಗಳಿಗೆ ಸಿಕ್ಕಿ ಅಪಘಾತವಾಗುವ ಸಾಧ್ಯತೆ ಹೆಚ್ಚಾಗಿದೆ.
Advertisement