ಮಡಿಕೇರಿ: ದೈಹಿಕ ತರಬೇತುದಾರರು ಇಲ್ಲದಿದ್ದರೂ ನೆಲ್ಲಿಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು 14 ವರ್ಷದೊಳಗಿನವರ ಫುಟ್ಬಾಲ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಕೆಪಿಎಸ್ ನ ಒಟ್ಟು ಏಳು ವಿದ್ಯಾರ್ಥಿಗಳು ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಮತ್ತು ಶೀಘ್ರದಲ್ಲೇ ಮಹಾರಾಷ್ಟ್ರದಲ್ಲಿ ರಾಷ್ಟ್ರೀಯ ಪಂದ್ಯಗಳನ್ನು ಆಡಲಿದ್ದಾರೆ.
ಹಿಂದೆ ಇದ್ದ ದೈಹಿಕ ತರಬೇತುದಾರರು ಎರಡು ವರ್ಷಗಳ ಹಿಂದೆ ವರ್ಗಾವಣೆಯಾದರು, ಅವರ ವರ್ಗಾವಣೆ ನಂತ ಹುದ್ದೆ ಭರ್ತಿಯಾಗದೆ ಉಳಿದಿದೆ. ಹೀಗಿದ್ದರೂ ಕೆಪಿಎಸ್ ನೆಲ್ಲಿಹುದಿಕೇರಿ ಶಾಲೆಯಲ್ಲಿ 14 ವರ್ಷದೊಳಗಿನವರ ಫುಟ್ ಬಾಲ್ ತಂಡ ಪ್ರತಿನಿತ್ಯ ಅಭ್ಯಾಸ ಮಾಡುತ್ತಿತ್ತ ಎಂದು ಮೂಲಗಳು ತಿಳಿಸಿವೆ. ಕ್ಯಾಪ್ಟನ್ ಮೊಹಮ್ಮದ್ ಶಿಹಾಲ್ ನೇತೃತ್ವದ 11 ವಿದ್ಯಾರ್ಥಿಗಳ ತಂಡವು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬದಿಂದ ಬಂದಿದೆ. ಆದಾಗ್ಯೂ, ಪಟ್ಟುಬಿಡದ ಅಭ್ಯಾಸದಿಂದ ಅವರಿಗೆ ಉತ್ತಮ ಅವಕಾಶ ತಂದಕೊಟ್ಟಿದೆ. ಈ ತಂಡದಿಂದ ಏಳು ಮಂದಿ ಈಗ ರಾಷ್ಟ್ರೀಯ ಪಂದ್ಯಗಳನ್ನು ಆಡಲಿದ್ದಾರೆ.
ನಮ್ಮ ಶಾಲೆಯ ತಂಡವು ವಲಯ, ತಾಲೂಕು, ಜಿಲ್ಲೆ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಅರ್ಹತೆ ಪಡೆದಿದೆ. ಕಲ್ಬುರ್ಗಿ, ಬೆಳಗಾವಿ, ದಕ್ಷಿಣ ಕನ್ನಡ ಮತ್ತು ಇತರ ತಂಡಗಳ ವಿರುದ್ಧ ಜಯಗಳಿಸಿದ ಅವರ ಆಟವು ಗಮನಾರ್ಹವಾಗಿತ್ತು ಎಂದು ಸಂಸ್ಥೆ ಶಿಕ್ಷಕರಾಗಿರುವ ಆದರೆ ಚಾಂಪಿಯನ್‌ಶಿಪ್‌ನಲ್ಲಿ ತಂಡದ ವ್ಯವಸ್ಥಾಪಕರಾಗಿರುವ ಶಶಿಕುಮಾರ್ ವಿವರಿಸಿದರು. ರಾಜ್ಯಮಟ್ಟದಲ್ಲಿ ಕೆಪಿಎಸ್ ನೆಲ್ಲಿಹುದಿಕೇರಿ ತಂಡ ಬೆಂಗಳೂರು ವಿರುದ್ಧ ಸೋಲನುಭವಿಸಿತು. ಆದರೆ, ಕೆಪಿಎಸ್ ನೆಲ್ಲಿಹುದಿಕೇರಿ ಪ್ರಥಮ ರನ್ನರ್ ಅಪ್ ಆಗಿದ್ದು, ತಂಡದಿಂದ ಒಟ್ಟು ಏಳು ವಿದ್ಯಾರ್ಥಿಗಳು ರಾಜ್ಯ ತಂಡವನ್ನು ಸೇರಿ ಮಹಾರಾಷ್ಟ್ರದಲ್ಲಿ ನಡೆಯಲಿರುವ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ರಾಷ್ಟ್ರೀಯ ಫುಟ್ ಬಾಲ್ ಚಾಂಪಿಯನ್ ಷಿಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
Advertisement