ಸಚಿವ ಜಮೀರ್ ಅಹ್ಮದ್ ಖಾನ್.
ಸಚಿವ ಜಮೀರ್ ಅಹ್ಮದ್ ಖಾನ್.

ಒಂದು ತಿಂಗಳಲ್ಲಿ ವಕ್ಫ್ ಆಸ್ತಿ ಖಾತಾ ಅಪ್ಡೇಟ್ ಕೆಲಸ ಪೂರ್ಣಗೊಳಿಸಿ: ಅಧಿಕಾರಿಗಳಿಗೆ ಸಚಿವ ಜಮೀರ್‌ ಸೂಚನೆ

ಕಂದಾಯ ಇಲಾಖೆಯಲ್ಲಿ 2,566 ಪ್ರಕರಣಗಳು, ನಗರ ಸ್ಥಳೀಯ ಸಂಸ್ಥೆಗಳಲ್ಲಿ 572 ಪ್ರಕರಣಗಳು, ಕಲಬುರಗಿಯ ಆರ್‌ಡಿಪಿಆರ್ ಮತ್ತು ಇತರ ಇಲಾಖೆಗಳಲ್ಲಿ ನೂರಾರು ಪ್ರಕರಣಗಳು ಹಲವು ವರ್ಷಗಳಿಂದಲೂ ಬಾಕಿ ಇವೆ.
Published on

ಕಲಬುರಗಿ: ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿನ ವಕ್ಫ್ ಆಸ್ತಿಗೆ ಸಂಬಂಧಿಸಿದ ಖಾತಾ ಅಪ್ಡೇಟ್‌ ಮಾಡುವ ಕಾರ್ಯವನ್ನು 1 ತಿಂಗಳೊಳಗೆ ಪೂರ್ಣಗೊಳಿಸುವಂತೆ ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಅಧಿಕಾರಿಗಳಿಗೆ ಗುರುವಾರ ಸೂಚನೆ ನೀಡಿದರು.

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ವಕ್ಫ್ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಮೀರ್ ಅಹಮದ್ ಖಾನ್ ಅವರು, ಕಂದಾಯ ಇಲಾಖೆಯಲ್ಲಿ 2,566 ಪ್ರಕರಣಗಳು, ನಗರ ಸ್ಥಳೀಯ ಸಂಸ್ಥೆಗಳಲ್ಲಿ 572 ಪ್ರಕರಣಗಳು, ಕಲಬುರಗಿಯ ಆರ್‌ಡಿಪಿಆರ್ ಮತ್ತು ಇತರ ಇಲಾಖೆಗಳಲ್ಲಿ ನೂರಾರು ಪ್ರಕರಣಗಳು ಹಲವು ವರ್ಷಗಳಿಂದಲೂ ಬಾಕಿ ಇವೆ. ಈ ಪ್ರಕರಣಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡಬೇಕು ಎಂದು ಹೇಳಿದರು.

ರಾಜ್ಯದಲ್ಲಿ 1.08 ಲಕ್ಷ ಎಕರೆ ವಕ್ಫ್ ಆಸ್ತಿ ಇದ್ದು, ಇದರಲ್ಲಿ 85 ಸಾವಿರ ಎಕರೆ ಒತ್ತುವರಿಯಾಗಿದೆ. ಕಲಬುರಗಿ ಜಿಲ್ಲೆಯ 21,440 ಎಕರೆ ವಕ್ಫ್ ಆಸ್ತಿಯಲ್ಲಿ 3,610 ಎಕರೆ ಒತ್ತುವರಿಯಾಗಿದ್ದು, ಯಾದಗಿರಿ ಜಿಲ್ಲೆಯಲ್ಲಿ 6.194 ಎಕರೆ ವಕ್ಫ್ ಆಸ್ತಿಯಲ್ಲಿ 123 ಎಕರೆ ಒತ್ತುವರಿಯಾಗಿದೆ. ಈ ಒತ್ತುವರಿ ತೆರವಿಗೆ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಎಸ್ಪಿಗಳ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು. ಇದೇ ವೇಳೆ ವಕ್ಫ್ ಆಸ್ತಿಯು ಸಾರ್ವಜನಿಕರು ಮುಸ್ಲಿಂ ಸಮುದಾಯಕ್ಕೆ ನೀಡಿದ ಆಸ್ತಿಯಾಗಿದೆ ಎಂದು ಪ್ರತಿಪಾದಿಸಿದರು.

ವಕ್ಫ್ ಆಸ್ತಿ ಸಾರ್ವಜನಿಕರು ಮುಸ್ಲಿಂ ಸಮಾಜಕ್ಕೆ ನೀಡಿದ ದೇಣಿಗೆ ಆಸ್ತಿಯಾಗಿದ್ದು, ಈ ಆಸ್ತಿ ಸಂರಕ್ಷಿಸುವುದು ಪುಣ್ಯದ ಕೆಲಸವಾಗಿದೆ. ಈ ಕುರಿತು ಸಮನ್ವಯತೆ ಸಾಧಿಸಬೇಕು ಎಂದು ವಕ್ಫ್ ಅಧಿಕಾರಿಗಳಾದ ಕಲಬುರಗಿಯ ಹಜರತ್ ಅಲಿ ಮತ್ತು ಯಾದಗಿರಿಯ ಜರೀನಾ ಬೇಗಂ ಅವರಿಗೆ ಖಡಕ್ ಸೂಚನೆ ನೀಡಿದರು.

ಸಚಿವ ಜಮೀರ್ ಅಹ್ಮದ್ ಖಾನ್.
ನೂರು ಸಿದ್ದರಾಮಯ್ಯ ಬೇಕಿಲ್ಲ, ಓರ್ವ ಜಮೀರ್ ಫೇಸ್ ಮಾಡಿ; ನಿಮ್ಮ ಅಕ್ರಮದ ಬಗ್ಗೆ ಬಾಯಿ ಬಿಡಲಾ: HDK ಗೆ ಸವಾಲು

ಬುಧವಾರ ಕಲಬುರಗಿಯಲ್ಲಿ ವಕ್ಫ್ ಅದಾಲತ್ ನಡೆಸಿದ್ದು, ಕಲಬುರಗಿ ಜಿಲ್ಲೆಯಿಂದ 368 ಅರ್ಜಿ ಸ್ವೀಕರಿಸಲಾಗಿದೆ. ಇದರಲ್ಲಿ 100 ಒತ್ತುವರಿ, 55 ಖಬರಸ್ತಾನ್ ಬೇಡಿಕೆ ಹಾಗೂ ಇತರೆ ವಿಷಯಕ್ಕೆ 213 ಸೇರಿವೆ. ಅದೇ ರೀತಿ ಯಾದಗಿರಿ ಜಿಲ್ಲೆಯಿಂದ ಸಲ್ಲಿಕೆಯಾದ 82 ಅರ್ಜಿಯಲ್ಲಿ 38 ಅರ್ಜಿ ಒತ್ತುವರಿ, 33 ಖಬರಸ್ತಾನ್ ಬೇಡಿಕೆ ಹಾಗೂ ಉಳಿದ 11 ಅರ್ಜಿಗಳು ಭೂಮಿ ಮಂಜೂರಾತಿ, ಖಾತಾ ಅಪ್ಡೇಡ್‌, ಸರ್ವೇ ಸಮಸ್ಯೆಗಳಿಗೆ ಸಂಬಂಧಿಸಿವೆ. ಇವುಗಳನ್ನು ಸಹ ಆದ್ಯತೆ ಮೇಲೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕು ಎಂದರು.

ಬಳಿಕ ಮುಸ್ಲಿಂ ಸಮುದಾಯದ ಜನರ ಅಂತ್ಯ ಸಂಸ್ಕಾರಕ್ಕೆ ಸರ್ಕಾರಿ ಜಮೀನು ಇಲ್ಲದಿದ್ದಲ್ಲಿ ಖಾಸಗಿ ಜಮೀನು ಖರೀದಿಸಿ ಖಬರಸ್ತಾನಕ್ಕೆ ಜಮೀನು ಮಂಜೂರು ಮಾಡಬೇಕು ಎಂದು ಸಚಿವರು ಡಿಸಿಗಳಿಗೆ ಸೂಚಿಸಿದರು.

ನಂತರ ಮಾತನಾಡಿದ ಕಲಬುರಗಿ ಡಿಸಿ ಬಿ.ಫೌಜಿಯಾ ತರನ್ನುಮ್ ಅವರು, ಜಿಲ್ಲೆಯಲ್ಲಿ ಖಬರಸ್ತಾನ್ ಮಂಜೂರಾತಿಗೆ ಸಲ್ಲಿಕೆಯಾದ 23ರಲ್ಲಿ ಈಗಾಗಲೇ ಎರಡು ಮಂಜೂರು ಮಾಡಿದ್ದು, ಉಳಿದವು ಇಲಾಖಾ ಹಂತದಲ್ಲಿ ಪರಿಶೀಲನೆಯಲ್ಲಿವೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com