ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಜಟಾಪಟಿ: ಎಂ.ಬಿ ಪಾಟೀಲ್- ಪಿಯೂಷ್ ಗೋಯಲ್ ಟ್ವೀಟ್ ವಾರ್

ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎಂದು ನನಗೆ ಗೊತ್ತಿದೆ. ಆದರೆ ಭಾರತಕ್ಕೆ ನಮ್ಮದೇ ಆದ ಸಿಲಿಕಾನ್ ವ್ಯಾಲಿಯನ್ನು ರಚಿಸುವ ಸಮಯ ಬಂದಿದೆ. ಉದ್ಯಮಿಗಳು, ನವೋದ್ಯಮಗಳು, ಆವಿಷ್ಕಾರಗಳಿಗಾಗಿ ನಾವು ಹೊಸ ಟೌನ್‌ಶಿಪ್‌ಗಳನ್ನು ರಚಿಸಬೇಕು.
ಎಂ.ಬಿ ಪಾಟೀಲ್- ಪಿಯೂಷ್ ಗೋಯಲ್
ಎಂ.ಬಿ ಪಾಟೀಲ್- ಪಿಯೂಷ್ ಗೋಯಲ್
Updated on

ಬೆಂಗಳೂರು: ಗುಣಮಟ್ಟದ ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರದ ನಿರಾಸಕ್ತಿಯಿಂದ ಬೆಂಗಳೂರು ನರಳುತ್ತಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌, ಹಿಂದಿನ ಬಿಜೆಪಿ ಸರಕಾರದ ದುರಾಡಳಿತದ ಪರಂಪರೆಯಿಂದ ನಗರ ಈ ದುಸ್ಥಿತಿ ತಲುಪಿದೆ ಎಂದು ತಿರುಗೇಟು ನೀಡಿದ್ದಾರೆ.

ಬೆಂಗಳೂರು ಹೊರತಾಗಿ ಭಾರತಕ್ಕೆ ಹೊಸ ಸಿಲಿಕಾನ್ ವ್ಯಾಲಿ ಬೇಕು ಎಂದು ಪಿಯೂಷ್ ಗೋಯಲ್ ಪ್ರತಿಪಾದಿಸಿದ್ದಾರೆ. "ರೋಮ್ ಅನ್ನು ಒಂದು ದಿನದಲ್ಲಿ ನಿರ್ಮಿಸಲಾಗಿಲ್ಲ, ಅದರ ನಂತರ ಜಗತ್ತು ನಿರ್ಮಿಸುವುದನ್ನು ನಿಲ್ಲಿಸಲಿಲ್ಲ! ಸಿಲಿಕಾನ್ ವ್ಯಾಲಿ, ನ್ಯೂಯಾರ್ಕ್, ಬೆಂಗಳೂರು ಅಥವಾ ಮುಂಬೈ ಅಂತ ದೊಡ್ಡ ನಗರಗಳು ಹುಟ್ಟಿಕೊಂಡಿವೆ ಎಂದು ಹೇಳಿದ್ದಾರೆ. ಕರ್ನಾಟಕ ಸರ್ಕಾರದ ಈ ಬೇಜವಾಬ್ದಾರಿತನದಿಂದಾಗಿ ಸಾವಿರಾರು ಉದ್ಯೋಗಗಳು ಮತ್ತು ಕೋಟಿಗಟ್ಟಲೆ ರೂಪಾಯಿ ಹೂಡಿಕೆಗಳು ರಾಜ್ಯದಿಂದ ದೂರವಾಗುತ್ತಿವೆ ಎಂದು ಗೋಯೆಲ್ ಹೇಳಿದ್ದಾರೆ. ಗುಜರಾತ್ ನ ಸೂರತ್ ನ ವಜ್ರೋದ್ಯಮ ವಜ್ರ ವ್ಯಾಪಾರಿಗಳನ್ನು ಸೆಳೆಯಲು ವಿಫಲವಾಗುತ್ತಿದೆ ಎಂಬ ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ ಬೆಂಗಳೂರನ್ನು ಜಾಗತಿಕ ನಗರಿಯನ್ನಾಗಿ ಮಾಡಲು ಕೇಂದ್ರ ಇನ್ನಾದರೂ ಸಹಾಯಕ್ಕೆ ಬರಬೇಕು ಎಂದು ಕೇಂದ್ರ ವಾಣಿಜ್ಯ ಸಚಿವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.

ಆದರೆ, ಇದಕ್ಕೆ ಕರ್ನಾಟಕ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಖಡಕ್‌ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸಚಿವರ ಹೇಳಿಕೆಯನ್ನು ಖಂಡಿಸಿರುವ ಪಾಟೀಲ್, ಉದ್ಯಾನ ನಗರಿ ಬೆಂಗಳೂರಿನಂತಹ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ನಿಮಗೆ ಶತಮಾನಗಳೇ ಬೇಕು ಎಂದು ಟಾಂಗ್‌ ಕೊಟ್ಟಿದ್ದಾರೆ. ಭಾರತಕ್ಕೆ ನಮ್ಮದೇ ಆದ ಸಿಲಿಕಾನ್‌ ವ್ಯಾಲಿ ಬೇಕು ಎಂದಿರುವ ಕೇಂದ್ರ ಸಚಿವರು ಬೆಂಗಳೂರನ್ನು “ನಮ್ಮ ಸ್ವಂತ” ನಗರವೆಂದು ಏಕೆ ಪರಿಗಣಿಸುವುದಿಲ್ಲ ಎಂದು ಪಾಟೀಲ್ ಪ್ರಶ್ನಿಸಿದ್ದಾರೆ. ‌

ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರವು ತನ್ನ ಪರಿಸರ ವ್ಯವಸ್ಥೆ ಹಾಗೂ ತಂಪಾದ ವಾತಾವರಣದಿಂದ ಹೆಸರುವಾಸಿ. ಬೆಂಗಳೂರಿನಂಥ ಸಮತೋಲಿತ ವಾತಾವರಣ ಹೊಂದಿದ ನಗರ ಭಾರತದಲ್ಲಿ ಬೇರೆ ಇಲ್ಲ. ಹೀಗಾಗಿ ಬೆಂಗಳೂರು ನಗರವು ದಶಕಗಳ ಹಿಂದೆಯೇ ಸಿಲಿಕಾನ್‌ ಸಿಟಿಯಾಗಿ ಗುರುತಿಸಿಕೊಂಡಿದೆ. ಹೀಗಾಗಿ ಹೊಸದಾಗಿ ಸಿಲಿಕಾನ್‌ ವ್ಯಾಲಿ ನಿರ್ಮಿಸುವ ಬದಲಿಗೆ ಬೆಂಗಳೂರಿನ ಅಭಿವೃದ್ಧಿಗೆ ಕೈಜೋಡಿಸುವಂತೆ ಪಿಯೂಷ್ ಗೋಯಲ್ ಅವರಲ್ಲಿ ಪಾಟೀಲ್ ಒತ್ತಾಯಿಸಿದ್ದಾರೆ.

ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎಂದು ನನಗೆ ಗೊತ್ತಿದೆ. ಆದರೆ ಭಾರತಕ್ಕೆ ನಮ್ಮದೇ ಆದ ಸಿಲಿಕಾನ್ ವ್ಯಾಲಿಯನ್ನು ರಚಿಸುವ ಸಮಯ ಬಂದಿದೆ. ಉದ್ಯಮಿಗಳು, ನವೋದ್ಯಮಗಳು, ಆವಿಷ್ಕಾರಗಳಿಗಾಗಿ ನಾವು ಹೊಸ ಟೌನ್‌ಶಿಪ್‌ಗಳನ್ನು ರಚಿಸಬೇಕು. ನವೀನ ಆಲೋಚನೆಗಳನ್ನು ಹೊಂದಿರುವ ಜನರು ಈ ಪಟ್ಟಣಕ್ಕೆ ಬಂದು ಬೆಳೆಯಲು ಸಾಧ್ಯವಾಗುತ್ತದೆ. ಅವರ ಆಲೋಚನೆಗಳ ಅನುಷ್ಠಾನಕ್ಕಾಗಿ ಹೊಸ ಸಂಪರ್ಕಗಳನ್ನು ನಿರ್ಮಿಸುವ ಮಾರ್ಗಗಳನ್ನು ಹುಡುಕಬೇಕು” ಎಂದು ಹೇಳಿದ್ದಾರೆ.

ಬೆಂಗಳೂರು ಭಾರತದ ಜ್ಞಾನ ಮತ್ತು ಪರಿಸರ ವ್ಯವಸ್ಥೆಯ ಕೇಂದ್ರವಾಗಿದೆ. ನಮ್ಮ ಭಾರತದ ಸ್ವಂತ ನಗರ 'ನಮ್ಮ ಬೆಂಗಳೂರು' ಅನ್ನು ಜಾಗತಿಕ ನಗರವಾಗಿ ಬೆಳೆಸಲು ಸಹಾಯ ಮಾಡಿ. ಕೆಐಆರ್ ಅನ್ನು ಬೃಹತ್ ಜಾಗತಿಕ ತಾಣವನ್ನಾಗಿ ಮಾಡಲು ಸಾಧ್ಯವಾದಷ್ಟು ಸಹಾಯ ಮಾಡಲು ನಿಮ್ಮಲ್ಲಿ ವಿನಂತಿಸುತ್ತೇನೆ" ಎಂದು ಸಚಿವರು ಟ್ವೀಟ್‌ ಮಾಡಿದ್ದಾರೆ.

ಎಂ.ಬಿ ಪಾಟೀಲ್- ಪಿಯೂಷ್ ಗೋಯಲ್
ಮೂವರು ಕೇಂದ್ರ ಸಚಿವರ ಭೇಟಿಯಾದ ಸಚಿವ ಎಂ.ಬಿ ಪಾಟೀಲ್: ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮನವಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com