ಇದು ಕನ್ನಡಿಗರ ತಾಕತ್ತು: ಬೆಂಗಳೂರಿಗರ ಅವಹೇಳನ ಮಾಡಿದ್ದ ಉತ್ತರ ಭಾರತದ ಸುಗಂಧಾ ಶರ್ಮಾ ಕೆಲಸದಿಂದ ವಜಾ!

ರೀಲ್ಸ್ ಮಾಡಿದ್ದ ಸುಗಂಧ ಶರ್ಮಾ ಉತ್ತರ ಭಾರತೀಯರು ಬೆಂಗಳೂರನ್ನು ಬಿಟ್ಟು ಹೊರಟರೆ ಬೆಂಗಳೂರು ಖಾಲಿಖಾಲಿಯಾಗುತ್ತೆ ಎಂದು ಕನ್ನಡಿಗರನ್ನು ಕೆಣಕಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಸುಗಂಧಾ ಶರ್ಮಾ
ಸುಗಂಧಾ ಶರ್ಮಾ
Updated on

ಬೆಂಗಳೂರು: ಉತ್ತರ ಭಾರತೀಯರು ಬೆಂಗಳೂರು ತೊರೆದರೆ ಬೆಂಗಳೂರು ಖಾಲಿಯಾಗುತ್ತದೆ ಎಂದು ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಮೂಲಕ ದುರಹಂಕಾರ ಪ್ರದರ್ಶಿಸಿದ ಉತ್ತರ ಭಾರತ ಮೂಲದ ರೀಲ್ಸ್ ರಾಣಿ ಸುಗಂಧಾ ಶರ್ಮಾಗೆ ಇದೀಗ ಕನ್ನಡಿಗರ ತಾಕತ್ತು ಅರ್ಥವಾಗಿದ್ದು ಕಂಪನಿಯೇ ಆಕೆಯನ್ನು ಕೆಲಸದಿಂದ ಕಿತ್ತು ಹಾಕಿದೆ.

ರೀಲ್ಸ್ ಮಾಡಿದ್ದ ಸುಗಂಧ ಶರ್ಮಾ ಉತ್ತರ ಭಾರತೀಯರು ಬೆಂಗಳೂರನ್ನು ಬಿಟ್ಟು ಹೊರಟರೆ ಬೆಂಗಳೂರು ಖಾಲಿಖಾಲಿಯಾಗುತ್ತೆ ಎಂದು ಕನ್ನಡಿಗರನ್ನು ಕೆಣಕಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ ಕನ್ನಡಿಗರು ಸುಗಂಧಾ ಶರ್ಮಾಗೆ ಬೆಂಗಳೂರನ್ನು ತೊರೆಯುವಂತೆ ಓಪನ್ ಆಗಿಯೇ ಚಾಲೆಂಜ್ ಹಾಕಿದ್ದರು. ಆದರೆ ಅವರ ಚಾಲೆಂಜ್ ಪರಿಣಾಮದಿಂದ ಸ್ವತಃ ಅವರೇ ಕೆಲಸ ಕಳೆದುಕೊಳ್ಳುವಂತಾಗಿದೆ.

ಸುಗಂಧಾ ಶರ್ಮಾ
ಸಹೋದರರಂತೆ ಬಾಳಿ; ಕನ್ನಡಿಗರು ಎಷ್ಟು ದಿನ ನಿಮ್ಮ ಅಧಿಪತ್ಯ ಅನುಭವಿಸಬೇಕು: ಸಿಎಂ ಸ್ಟಾಲಿನ್‌ಗೆ ಕುಮಾರಸ್ವಾಮಿ

ಸುಗಂಧಾ ಶರ್ಮಾ ರೀಲ್ಸ್ ನಲ್ಲಿ, ನೀವು ಹೊರಟು ಹೋಗಿ ಎನ್ನುತ್ತಿದ್ದೀರಾ. ನಿಜವಾಗಿಯು ನಾವೆಲ್ಲರೂ ಬೆಂಗಳೂರು ತೊರೆದರೆ ನಿಮ್ಮ ನಗರ ಖಾಲಿಯಾಗುತ್ತದೆ. ನಿಮ್ಮ ಪಿ.ಜಿ.ಗಳು ಖಾಲಿ ಆಗುತ್ತವೆ. ನಿಮಗೆ ಹಣ ಸಂಪಾದನೆಯಾಗುವುದಿಲ್ಲ. ಕೋರಮಂಗಲದ ಎಲ್ಲ ಕ್ಲಬ್‌ಗಳು ಖಾಲಿಯಾಗುತ್ತವೆ. ಪಂಜಾಬಿ ಸಂಗೀತಕ್ಕೆ ಕುಣಿಯುವ ಚೆಂದದ ಹುಡುಗಿಯರು ಕಾಣಿಸುವುದಿಲ್ಲ. ಯೋಚಿಸಿ ಮಾತನಾಡಿ. ಉತ್ತರ ಭಾರತೀಯರು ತೊರೆಯಬೇಕು ಎನ್ನುವ ನಿಮ್ಮ ಆಸೆ ನಿಜವಾದರೆ ಬೆಂಗಳೂರಿನ ಕಳೆಯೇ ಹೋಗಿಬಿಡುತ್ತದೆ’ ಎಂದು ಸುಗಂಧಾ ಶರ್ಮಾ ರೀಲ್ಸ್‌ನಲ್ಲಿ ಹೇಳಿದ್ದರು. ಕೆಲವೇ ಗಂಟೆಗಳಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ಸುಗಂಧಾ ವಿರುದ್ಧ ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ಕಿಡಿ ಕಾರಿದ್ದಾರೆ. ಭಾಷೆ ನೆಪದಲ್ಲಿ ಜನರ ನಡುವೆ ಕಂದಕ ಸೃಷ್ಟಿಸಲು ಯತ್ನಿಸುತ್ತಿರುವ ಈಕೆಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೂ ಟ್ಯಾಗ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com