ಬೆಂಗಳೂರು: ಬಾರ್ ಸಪ್ಲೈಯರ್ ಸಾವು ಪ್ರಕರಣ ಇನ್ನೂ ನಿಗೂಢ!

ಬೆಂಗಳೂರಿನಲ್ಲಿ ಬಾರ್ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ವಿಜಯ್ ಕುಮಾರ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: 2023ರ ಜನವರಿಯಲ್ಲಿ ಉಡುಪಿಯ ಆಸ್ಪತ್ರೆಯೊಂದರಲ್ಲಿ ಸಾವನ್ನಪ್ಪಿದ್ದ ವಿಜಯ್ ಕುಮಾರ್ ಅವರ ಪ್ರಕರಣ ನಿಗೂಢವಾಗಿಯೇ ಉಳಿದಿದೆ. ಕಸ್ಟಡಿ ಸಾವೆಂದು ಇನ್ನೂ ಗುರುತಿಸಿಲ್ಲ.

ಬೆಂಗಳೂರಿನಲ್ಲಿ ಬಾರ್ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ವಿಜಯ್ ಕುಮಾರ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದರು. ಅವರ ಸಾವಿನ ಸುತ್ತಲಿನ ಸಂದರ್ಭಗಳನ್ನು ತನಿಖೆ ಮಾಡುತ್ತಿದ್ದ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಕ್ರೂರ ಪೋಲೀಸ್ ವಿಚಾರಣೆ, ಭ್ರಷ್ಟಾಚಾರ ಮತ್ತು ಮುಚ್ಚಿಹಾಕುವಿಕೆಯ ಭಯಾನಕ ಸತ್ಯವನ್ನು ಬಹಿರಂಗಪಡಿಸಿತ್ತು. ಇದರಲ್ಲಿ ಅಧಿಕಾರಿಗಳು ಕೂಡಾ ಶಾಮೀಲಾಗಿದ್ದಾರೆ.

ಉಡುಪಿಯ ಮೂವತ್ತರ ಹರೆಯದ ಶ್ರಮಜೀವಿ ವಿಜಯ್ ಕುಮಾರ್ ಜನವರಿ 3, 2023ರವರೆಗೂ ಸರಳವಾಗಿ ಬದುಕು ಸಾಗಿಸುತ್ತಿದ್ದರು. ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಶಂಕಿತ ಕಿಂಗ್ ಪಿನ್ ಎಂದು ಅವರನ್ನು ವಿಚಾರಣೆಗಾಗಿ ಸಿಸಿಬಿ ಬಂಧಿಸಿದಾಗ ಅವರ ಜೀವನವೇ ಪತನವಾಯಿತು. ದಿನನಿತ್ಯ ವಿಚಾರಣೆ ದುಃಸ್ವಪ್ನವಾಗಿ ಕಾಡಿ, ಅವರ ಜೀವನವೇ ಅಂತ್ಯವಾಯಿತು.

ಪೊಲೀಸ್ ವಿಚಾರಣೆಗೆ ಒಳಪಡಿಸಿದಾಗ ಕುಮಾರ್‌ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಅವರ ಬಾಯಲ್ಲಿ ನೊರೆ ಬರಲಾರಂಭಿಸಿತು. ಕೂಡಲೇ ಅವರನ್ನು ಬೆಂಗಳೂರಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಬಿಲ್‌ಗಳು ಹೆಚ್ಚಾದ ಕಾರಣ ಮತ್ತು ಯಾವುದೇ ಪರಿಹಾರ ಕಾಣದ ಕಾರಣ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಹತ್ತು ದಿನ ಜೀವನ್ಮರಣ ಹೋರಾಟದ ನಂತರ ಕುಮಾರ್ ಕೊನೆಯುಸಿರೆಳೆದಿದ್ದರು.

ಸಾಂದರ್ಭಿಕ ಚಿತ್ರ
ವೈಯಾಲಿಕಾವಲ್ ಹತ್ಯೆ ಪ್ರಕರಣ: ಹಂತಕ sadomasochist ಇರಬೇಕು, ಶೀಘ್ರ ಬಂಧನ ಅತ್ಯಗತ್ಯ ಎಂದ ತಜ್ಞರು

ಕುಮಾರ್ ಅವರ ತನಿಖೆಯು ಕೆಲವು ಗೊಂದಲದ ವಿವರಗಳನ್ನು ಬಹಿರಂಗಪಡಿಸಿತು. 2022 ರ ಐಸಿಸಿ ಟಿ-20 ವಿಶ್ವಕಪ್, ವಿಶೇಷವಾಗಿ ಅಕ್ಟೋಬರ್‌ನಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಸ್ಫೋಟಕ ಪಂದ್ಯದ ಸಂದರ್ಭದಲ್ಲಿ ಅಕ್ರಮ ಬೆಟ್ಟಿಂಗ್ ದಂಧೆಯ ಒತ್ತಡಕ್ಕೆ ಒಳಗಾದ ಪೊಲೀಸರು, ಗ್ಯಾಂಗ್‌ಗಾಗಿ ಹತಾಶ ಹುಡುಕಾಟದಲ್ಲಿದ್ದರು. ಕುಮಾರ್ ಬಲಿಪಶುವಾದರು. ಸಣ್ಣ ಮೊತ್ತದ ಹಣವನ್ನು ವಸೂಲಿ ಮಾಡಿದರೂ, ಅಧಿಕಾರಿಗಳು ಬೆಟ್ಟಿಂಗ್ ದಂಧೆಯಲ್ಲಿ ಪ್ರಮುಖ ಪಾತ್ರದಾರಿ ಎಂದು ಆರೋಪಿಸಿದರು.

ಕುಮಾರ್‌ನ ಸಾವಿನ ನಂತರ ಪೊಲೀಸರು ಆತನ ಗೆಳತಿ ಬಾಂಗ್ಲಾದೇಶದ ಮಹಿಳೆಯನ್ನು ಕರೆದೊಯ್ದು ತರಾತುರಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ಮಧ್ಯೆ ಲಂಚ ಮತ್ತು ಸುಳ್ಳಿನ ಮೂಲಕ ಅವರ ಕುಟುಂಬವನ್ನು ಮೌನವಾಗಿಸಲಾಯಿತು. ಇನ್ನೂ ಕುಮಾರ್ ಪ್ರಾಮಾಣಿಕ, ನಂಬಿಕಸ್ಥ ವ್ಯಕ್ತಿ ಎಂದು ತಿಳಿದಿದ್ದ ಆತನ ಸ್ನೇಹಿತರು, ಸತ್ಯ ಹೊರಬಾರದಂತೆ ಪೊಲೀಸರು ಮಾಡಿದ ಕೆಲಸದಿಂದ ಧ್ವನಿ ಎತ್ತದೆ ಸುಮ್ಮನಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com