
ಬೆಂಗಳೂರು: ಮನೆ ಮೇಲೆ ಹೂಡಿಕೆ ಮಾಡಲು ಬಯಸುವ ಜನರಿಗೆ ಅಪಾರ ನೆರವು ನೀಡುವ ನಿಟ್ಟಿನಲ್ಲಿ ಭಾರತೀಯ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (RERA-K) ಅವಧಿ ಮೀರಿದ್ದರೂ ಇನ್ನೂ ಕಾಮಗಾರಿ ಪೂರ್ಣಗೊಳ್ಳದ ಸರ್ಕಾರಿ ಮತ್ತು ಖಾಸಗಿಯ 2,403 ಕಟ್ಟಡ ನಿರ್ಮಾಣ ಯೋಜನೆಗಳ ಪಟ್ಟಿಯನ್ನು ಸಾರ್ವಜನಿಕರ ಗಮನಕ್ಕೆ ತರಲಾಗಿದೆ. ಅವುಗಳನ್ನು ಲ್ಯಾಪ್ಸ್ ಪಟ್ಟಿಗೆ ಸೇರಿಸಲಾಗಿದೆ.
ಇವುಗಳ ಪೂರ್ಣಗೊಳಿಸುವಿಕೆಗೆ ನೀಡಲಾದ ಗಡುವು ಮೀರಿದೆ. ಹೆಚ್ಚುವರಿಯಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಾಡಪ್ರಭು ಕೆಂಪೇಗೌಡ ಬಡಾವಣೆ ಸೇರಿದಂತೆ ಐದು ಯೋಜನೆಗಳನ್ನು ಡಿಫಾಲ್ಟ್ ಮಾಡಿದ ವರ್ಗದಲ್ಲಿ ಪಟ್ಟಿ ಮಾಡಲಾಗಿದೆ.
ಪ್ರಸ್ತುತ ನಡೆಯುತ್ತಿರುವ ಯೋಜನೆಗಳ ವಿರುದ್ಧ RERA-K ಗೆ 10,215 ದೂರುಗಳು ಬಂದಿದ್ದು, ಅವುಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ಪ್ರಸ್ತಾವಿತ ಯೋಜನೆಯನ್ನು ಪೂರ್ಣಗೊಳಿಸುವ ಅವಧಿ ಮೀರಿದೆ, ಖರೀದಿದಾರರು ಅದಕ್ಕೆ ಅನುಗುಣವಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅದರ ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ.
ಮುಕ್ತಾಯದ ಅವಧಿ ಮೀರಿದ್ದರೂ ಲ್ಯಾಪ್ಸ್ ಆದ ಯೋಜನೆಗಳ ವಿಸ್ತರಣೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಲಾಪ್ಸ್ ಆದ ಯೋಜನೆಗಳ ಪಟ್ಟಿಯಿಂದ ಕೆಲವರನ್ನು ವಿಚಾರಣೆಗಾಗಿ ಕರೆದಿದ್ದೇವೆ. ವಿಚಾರಣೆಗೆ ಹಾಜರಾಗದವರನ್ನು ಸಹ ಡೀಫಾಲ್ಟ್ ಪಟ್ಟಿಗೆ ಸೇರಿಸಲಾಗಿದೆ ಎಂದು ರೇರಾ ಅಧಿಕಾರಿಯೊಬ್ಬರು ಹೇಳಿದರು.
ಲ್ಯಾಪ್ಸ್ ಆಗಿರುವ ಯೋಜನೆಗಳಲ್ಲಿ ತುಂಬಾ ಹೆಚ್ಚಾಗಿವೆ. ಇಂತಹ ಪ್ರಾಜೆಕ್ಟ್ ಗಳ ಹರಾಜಿಗಾಗಿ 2020 ಆಗಸ್ಟ್ 13 ರಂದು ಕರೆದಿದ್ದ ಸಭೆಯಲ್ಲಿ 842 ಲ್ಯಾಪ್ಸ್ ಪ್ರಾಜೆಕ್ಟ್ ಗಳಿದ್ದವು. ಅವುಗಳು ಇದೀಗ 2,403 ಯೋಜನೆಗಳಿಗೆ ಏರಿಕೆಯಾಗಿದೆ ಎಂದು
ಫೋರಂ ಫಾರ್ ಪೀಪಲ್ಸ್ ಕಲೆಕ್ಟಿವ್ ಎಫರ್ಟ್ಸ್ (FPCE) ನ ಪ್ರಧಾನ ಕಾರ್ಯದರ್ಶಿ M S ಶಂಕರ್ TNIE ಗೆ ಹೇಳಿದರು.
ನೂರಾರು ಪ್ರಾಜೆಕ್ಟ್‌ಗಳ ನೋಂದಣಿಯಲ್ಲಿ ವಿಳಂಬವಾಗಿದ್ದರೂ, ಕೆ-ರೇರಾ ಯಾವುದೇ ಕ್ರಮವನ್ನು ಪ್ರಾರಂಭಿಸಿಲ್ಲ ಎಂದು ಅವರು ಹೇಳಿದರು. ಯಾವುದೇ ಕ್ರಮವನ್ನು ಪ್ರಾರಂಭಿಸಿದ್ದರೆ, ರೇರಾ ಕಾಯ್ದೆ ಕಡ್ಡಾಯಗೊಳಿಸುವ ಯಾವುದೇ ಡೇಟಾ ಅಥವಾ ಪಾರದರ್ಶಕತೆ ಇಲ್ಲ. ನನೆಗುದಿಗೆ ಬಿದ್ದಿರುವ ಎಲ್ಲ ಯೋಜನೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಡೀಫಾಲ್ಟ್ ಪಟ್ಟಿ: ಕೆಂಪೇಗೌಡ ಲೇಔಟ್ ಪೂರ್ಣಗೊಳಿಸುವ ಗಡುವು ಡಿಸೆಂಬರ್ 31, 2021 ಆಗಿತ್ತು ಮತ್ತು ಬಿಡಿಎ ಇನ್ನೂ ವಿಸ್ತರಣೆಯನ್ನು ಪಡೆದಿಲ್ಲ. ಡೀಫಾಲ್ಟ್ ಪಟ್ಟಿಯಲ್ಲಿ ಬೆಂಗಳೂರು ನಗರದಲ್ಲಿರುವ ಏಕೈಕ ಯೋಜನೆ ‘ಕೊಂಡೂರು ಶ್ರೀನಿವಾಸುಲು’. ಇತರ ಯೋಜನೆಗಳು: ಮೈಸೂರಿನಲ್ಲಿ ‘ರಾಗ-1’, ಕಲಬುರಗಿಯಲ್ಲಿ ‘ಸುಮೀತ್ ನಗರ’ ಮತ್ತು ದಕ್ಷಿಣ ಕನ್ನಡದಲ್ಲಿ ‘ಸೋಮ್ಯಾಜಿ ಕಲ್ಪವೃಕ್ಷ’.
Advertisement