Cauvery Aarti
ಕಾವೇರಿ ಆರತಿ ಕುರಿತ ಕಾರ್ಯಕ್ರಮ

Cauvery Aarti ದಸರಾದಿಂದಲೇ ಆರಂಭ; ಅಕ್ಟೋಬರ್ 3 ರಂದು ಶ್ರೀರಂಗಪಟ್ಟಣದಲ್ಲಿ ಚಾಲನೆ

7 ಮಂದಿ ಅರ್ಚಕರು ಸೇರಿ 20 ಜನರ ತಂಡ ವಾರದಲ್ಲಿ ಎರಡು ದಿನ ಕಾವೇರಿ ಆರತಿ ನಡೆಸಿಕೊಡಲಿದೆ.
Published on

ಬೆಂಗಳೂರು: ಗಂಗಾರತಿ ಮಾದರಿಯಲ್ಲೇ 'ಕಾವೇರಿ ಆರತಿ' ಕಾರ್ಯಕ್ರಮ ಮಾಡುವುದಾಗಿ ಘೋಷಿಸಿದ್ದ ಕರ್ನಾಟಕ ಸರ್ಕಾರ ಅದನ್ನು ಈ ಬಾರಿಯ ದಸರಾ ಉತ್ಸವದಿಂದಲೇ ಆರಂಭಿಸಲಾಗುವುದು ಎಂದು ಹೇಳಿದೆ.

ಕಾವೇರಿ ಆರತಿಯ ಪ್ರಾಯೋಗಿಕ ಕಾರ್ಯಕ್ರಮ ಇದೇ ಅಕ್ಟೋಬರ್ 3ರಂದು ಶ್ರೀರಂಗಪಟ್ಟಣದಲ್ಲಿ ಆರಂಭವಾಗಲಿದೆ. ಈ ದಸರಾ ಸಂದರ್ಭದಲ್ಲೇ ಕಾವೇರಿ ಆರತಿಯನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಪ್ರಾಯೋಗಿಕವಾಗಿ ಅ. 3 ರಿಂದ 5 ದಿನ ಕಾವೇರಿ ಆರತಿ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ ತಿಳಿಸಿದ್ದಾರೆ.

7 ಮಂದಿ ಅರ್ಚಕರು ಸೇರಿ 20 ಜನರ ತಂಡ ವಾರದಲ್ಲಿ ಎರಡು ದಿನ ಕಾವೇರಿ ಆರತಿ ನಡೆಸಿಕೊಡಲಿದೆ. ಕಾವೇರಿ ಆರತಿಯಲ್ಲಿ ಸಪ್ತ ಋುಷಿಗಳನ್ನು ಪೂಜಿಸಿ, ಗಣಪತಿ ಪ್ರಾರ್ಥನೆ, ಕಾವೇರಿ ಪೂಜೆ, ಕಾವೇರಿ ಮಹಾಆರತಿ ನಡೆಸಲಾಗುವುದು ಎಂದು ಖ್ಯಾತ ಅದ್ವೈತ ವಾಚಸ್ಪತಿ ಡಾ.ಭಾನುಪ್ರಕಾಶ್‌ ಶರ್ಮ ಅವರು ಹೇಳಿದ್ದಾರೆ.

Cauvery Aarti
ಮೊದಲು ಕೆರೆ-ಕಟ್ಟೆಗಳ ತುಂಬಿಸಿ ರೈತರಿಗೆ ಅನ್ನ ಹಾಕಿ, ಆಮೇಲೆ ಕಾವೇರಿ ಆರತಿ ಮಾಡಿ: ಸರ್ಕಾರಕ್ಕೆ ಮಾಜಿ ಶಾಸಕ ಅನ್ನದಾನಿ ಆಗ್ರಹ

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಬಳಿ ಇರುವ ಕಾವೇರಿ ನದಿ ಸ್ನಾನಘಟ್ಟ ಸ್ಥಳವನ್ನು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಅದ್ವೈತ ವಾಚಸ್ಪತಿ ಡಾ.ಭಾನುಪ್ರಕಾಶ್‌ ಶರ್ಮ ಜತೆಗೂಡಿ ಈಗಾಗಲೇ ಸ್ಥಳ ಪರಿಶೀಲಿಸಿದ್ದಾರೆ. ಮುಂದಿನ ಸ್ಥಳ ಗುರುತಿಸುವವರೆಗೆ ಅದೇ ಸ್ಥಳದಲ್ಲಿ ವಾರದಲ್ಲಿ ಎರಡು ದಿನ ಶ್ರೀರಂಗಪಟ್ಟಣ ದಸರಾ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ಅ.3 ರಿಂದಲೇ 5 ದಿನಗಳ ಕಾಲ ಶ್ರೀರಂಗನಾಥಸ್ವಾಮಿ ದೇವಾಲಯ ಸ್ನಾನಘಟ್ಟದಲ್ಲಿ ವೇದಿಕೆ ಸಿದ್ಧಪಡಿಸಿ ಕಾವೇರಿ ಆರತಿ ನಡೆಸುವಂತೆ ಸೂಚಿಸಿದ್ದಾರೆ.

ಗಂಗಾರತಿ ಮಾದರಿಯಲ್ಲೇ ರಾಜ್ಯದ ಜೀವನದಿ ಕಾವೇರಿ ನದಿಗೂ ಆರತಿ ಮಾಡುವ ಬಗ್ಗೆ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ನಿರ್ಧಾರ ಕೈಗೊಂಡಿದ್ದರು. ಅದರಂತೆ ಗಂಗಾರತಿ ಅಧ್ಯಾಯನಕ್ಕೂ ಸಚಿವ ಚೆಲುವರಾಯಸ್ವಾಮಿ ನೇತೃತ್ವದಲ್ಲಿ ಕಾವೇರಿ ಭಾಗದ ಶಾಸಕರು ಹಾಗೂ ಜಲಸಂಪನ್ಮೂಲ ಅಧಿಕಾರಿಗಳ ತಂಡ ಇತ್ತೀಚೆಗೆ ಹರಿದ್ವಾರಕ್ಕೆ ಭೇಟಿ ನೀಡಿತ್ತು.

ಹರಿದ್ವಾರ ಹಾಗೂ ಕಾಶಿ ಮಾದರಿಯಲ್ಲೇ ಸೂರ್ಯೋದಯ ಹಾಗೂ ಸೂರ್ಯಾಸ್ತ ಸಮಯದಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲೇ ಕಾವೇರಿ ನದಿಗೂ ಆರತಿ ನಡೆಸುವ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ಮೇರೆಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ, ಸ್ಥಳೀಯ ಶಾಸಕ ಎ ಬಿ ರಮೇಶ್ ಬಂಡಿಸಿದ್ದೇಗೌಡ, ಎಂಎಲ್ಸಿ ದಿನೇಶ್ ಗೂಳಿಗೌಡ ಸೇರಿದಂತೆ ಅನೇಕ ನಾಯಕರು ಹರಿದ್ವಾರ, ವಾರಣಾಸಿಗೆ ಭೇಟಿ ನೀಡಿ, ಪರಿಶೀಲಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com