ಬೆಂಗಳೂರು: ದೇಶದಲ್ಲೇ ಮೊದಲ ಬಾರಿ ನೈಜೀರಿಯನ್ ಡ್ರಗ್ ಪೆಡ್ಲರ್ ವಿರುದ್ಧ SAFEMA ಅಡಿ ಕೇಸ್ ದಾಖಲು

38 ವರ್ಷದ ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ವಿರುದ್ಧ ಸ್ಮಗ್ಲರ್ಸ್ ಆ್ಯಂಡ್ ಫಾರಿನ್ ಎಕ್ಸ್ ಚೇಂಜ್ ಮ್ಯಾನಿಪ್ಯುಲೇಟರ್ಸ್ (SAFEMA) ಕಾಯ್ದೆ ಅಡಿಯಲ್ಲಿ ಬೆಂಗಳೂರು ಪೊಲೀಸರು ಕೇಸ್ ದಾಖಲಿಸಿದ್ದು, SAFEMA ಅಡಿ ದಾಖಲಾದ ದೇಶದ ಮೊದಲ ಪ್ರಕರಣ ಇದಾಗಿದೆ. ಪೆಡ್ಲರ್, ನೈಜೀರಿಯಾದ ಪ್ರಜೆ ಪೀಟರ್ ಇಕೆಡಿ ಬೆಲೋನ್ವುರನ್ನು ನವೆಂಬರ್ 2023 ರಲ್ಲಿ ವಿದ್ಯಾರಣ್ಯಪುರ ಪೊಲೀಸರು ಬಂಧ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 38 ವರ್ಷದ ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ವಿರುದ್ಧ ಸ್ಮಗ್ಲರ್ಸ್ ಆ್ಯಂಡ್ ಫಾರಿನ್ ಎಕ್ಸ್ ಚೇಂಜ್ ಮ್ಯಾನಿಪ್ಯುಲೇಟರ್ಸ್ (SAFEMA) ಕಾಯ್ದೆ ಅಡಿಯಲ್ಲಿ ಬೆಂಗಳೂರು ಪೊಲೀಸರು ಕೇಸ್ ದಾಖಲಿಸಿದ್ದು, SAFEMA ಅಡಿ ದಾಖಲಾದ ದೇಶದ ಮೊದಲ ಪ್ರಕರಣ ಇದಾಗಿದೆ.

ಪೆಡ್ಲರ್, ನೈಜೀರಿಯಾದ ಪ್ರಜೆ ಪೀಟರ್ ಇಕೆಡಿ ಬೆಲೋನ್ವುರನ್ನು ನವೆಂಬರ್ 2023 ರಲ್ಲಿ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದರು ಮತ್ತು, ಪೆಡ್ಲರ್ ತನ್ನ ಗ್ರಾಹಕರಿಂದ ಹಣ ಸ್ವೀಕರಿಸುತ್ತಿದ್ದ ಏಳು ವಿವಿಧ ಬ್ಯಾಂಕ್ ಖಾತೆಗಳಿಂದ 12 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.

ಸೆಂಟ್ರಲ್ ಕ್ರೈಮ್ ಬ್ರಾಂಚ್(CCB) ಪೀಟರ್ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದು, ಆರೋಪಿ ಏಳು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಅದರಲ್ಲಿ ಎರಡು ಆತನ ಪತ್ನಿಯ ಹೆಸರಿನಲ್ಲಿ ಮತ್ತು ಇತರ ಐದು ನಕಲಿ ಖಾತೆಗಳು ಎಂದು ಪತ್ತೆ ಮಾಡಿದ್ದಾರೆ.

ಈ ಖಾತೆಗಳನ್ನು UPIಗೆ ಲಿಂಕ್ ಮಾಡಲಾಗಿದೆ. ಅವರು ತಮ್ಮ ಗ್ರಾಹಕರಿಂದ ಈ ಏಳು ಬ್ಯಾಂಕ್ ಖಾತೆಗಳಿಗೆ ಹಣವನ್ನು ಸ್ವೀಕರಿಸುತ್ತಿದ್ದರು. ಪೀಟರ್ ವೈದ್ಯಕೀಯ ವೀಸಾದಲ್ಲಿ 2018 ರಲ್ಲಿ ಭಾರತಕ್ಕೆ ಬಂದಿದ್ದು, ಅಂದಿನಿಂದ ದೇಶದಲ್ಲಿ ಉಳಿದುಕೊಂಡಿದ್ದಾರೆ ಮತ್ತು 2022 ರಲ್ಲಿ ಮಣಿಪುರದ ಮಹಿಳೆಯನ್ನು ಮದುವೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

“ವಿದೇಶಿ ಡ್ರಗ್ ಪೆಡ್ಲರ್‌ನಿಂದ ಹಣ ವಸೂಲಿ ಮಾಡಲು ಪೊಲೀಸರು ದೇಶದಲ್ಲಿ ಮೊದಲ ಬಾರಿಗೆ NDPS ಮತ್ತು SAFEMA ಕಾಯ್ದೆಯ ವಿವಿಧ ವಿಭಾಗಗಳನ್ನು ಬಳಸಿದ್ದಾರೆ. ಆತನಿಂದ ಡ್ರಗ್ಸ್, ಪಾಸ್‌ಪೋರ್ಟ್ ಮತ್ತು 12 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಹೇಳಿದ್ದಾರೆ.

SAFEMA ಕಾಯಿದೆಯ ಜೊತೆಗೆ, ಪೆಡ್ಲರ್‌ನ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ (NDPS) ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಸಹ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com