ಜನವರಿ 31 ರಿಂದ ಮಾರ್ಚ್ 15 ರವರೆಗೆ ರಾಜ್ಯದಿಂದ 35 ಸಾವಿರ ಭಕ್ತರು ಅಯೋಧ್ಯೆಗೆ!
ಬೆಂಗಳೂರು: ಜನವರಿ 22ರ ನಂತರ ಕರ್ನಾಟಕದ ರಾಮಭಕ್ತರು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ರಾಜ್ಯದಿಂದ 35,000 ರಾಮಭಕ್ತರು ಜನವರಿ 31 ರಿಂದ ಮಾರ್ಚ್ 25 ರವರೆಗೆ ಸುಮಾರು 25 ರೈಲುಗಳಲ್ಲಿ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶನಿವಾರ ಹೇಳಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 31 ರಿಂದ ಮಾರ್ಚ್ 25 ರವರೆಗೆ ಕರ್ನಾಟಕದಿಂದ 35,000 ಕ್ಕೂ ಹೆಚ್ಚು ಶ್ರೀರಾಮನ ಭಕ್ತರು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಈ ಭೇಟಿಗೆ ಅನುಕೂಲವಾಗುವಂತೆ 25 ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ವೆಚ್ಚವನ್ನು ರಾಮಭಕ್ತರೇ ಸ್ವಂತವಾಗಿ ಭರಿಸುತ್ತಾರೆ. ಈ ಅಭಿಯಾನದ ಸಂಚಾಲಕರಾಗಿ ಮಾಜಿ ಎಂಎಲ್ಸಿ ಸಿದ್ದರಾಜು, ಸಹ ಸಂಚಾಲಕರಾಗಿ ಜಗದೀಶ್ ಹಿರೇಮನಿ ಅವರನ್ನು ನೇಮಿಸಲಾಗಿದೆ. ಪ್ರತಿ ರಾಮಭಕ್ತರಿಗೆ ಕ್ಯೂಆರ್ ಕೋಡ್ ಹೊಂದಿರುವ ಐಡಿ ಕಾರ್ಡ್ ವಿತರಿಸಲಾಗುತ್ತದೆ. ರಾಜ್ಯದ ಪ್ರಮುಖ ನಿಲ್ದಾಣಗಳಿಂದ ರೈಲು ವ್ಯವಸ್ಥೆ ಮಾಡಲಾಗಿದೆ. ಅಯೋಧ್ಯೆಯಲ್ಲಿಕನ್ನಡ ಭಾಷೆಯ ಸಹಾಯವಾಣಿ ಕೇಂದ್ರವಿದ್ದು, ಕರ್ನಾಟಕದ ರಾಮಭಕ್ತರಿಗೆ ಕನ್ನಡ ಭಾಷೆಯಲ್ಲೇ ಪ್ರಕಟಿಸುವ ವ್ಯವಸ್ಥೆಯಾಗಿದೆ ಎಂದು ತಿಳಿಸಿದರು.
'ಅಯೋಧ್ಯೆಯಲ್ಲ ವಸತಿಗಾಗಿ ಜರ್ಮನ್ ಟೆಂಟ್ ಹೌಸ್‌ಗಳಿದ್ದು, ಸ್ನಾನಗೃಹ, ಶೌಚಾಲಯಗಳಿವೆ. ಅಯೋಧ್ಯೆಯಲ್ಲಿ 48 ಕಡೆ ಭೋಜನ ವ್ಯವಸ್ಥೆಯಾಗಿದ್ದು, ಅದರಲ್ಲಿ 2 ಕಡೆ ಕರ್ನಾಟಕದ ರಾಮಭಕ್ತರಿಗಾಗಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಒಂದು ರೈಲಿನಲ್ಲಿ 1,500 ಮಂದಿ ಪ್ರಯಾಣಿಸುತ್ತಿದ್ದು, ಪ್ರತಿ ರೈಲಿಗೆ ಒಬ್ಬ ರೈಲು ಪ್ರಮುಖ್ ಮತ್ತು ಬೋಗಿ ಪ್ರಮುಖ್ ಇದ್ದು, ಊಟೋಪಚಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ,'' ಎಂದು ಮಾಹಿತಿ ನೀಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ