
ಬೆಂಗಳೂರು: ಡೀಸೆಲ್ ದರ ಪ್ರತಿ ಲೀಟರ್‌ಗೆ ಎರಡು ರೂ. ಹೆಚ್ಚಳವಾದ ಪರಿಣಾಮ ಇದು ನೇರವಾಗಿ ಸರಕು ಸಾಗಣೆ ವೆಚ್ಚದ ಮೇಲೆ ಪರಿಣಾಮ ಬೀರಲಿದ್ದು, ಹಣ್ಣು ಹಾಗೂ ತರಕಾರಿಗಳು ಸೇರಿ ಅಗತ್ಯ ವಸ್ತುಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ.
ಡೀಸೆಲ್ ದರ ಏರಿಕೆಗೆ ವ್ಯಾಪಾರಸ್ಥರು ಬೇಸರ ವ್ಯಕ್ತಪಡಿಸಿದ್ದು, ನಮಗೆ ಬೇರೆ ದಾರಿಯಿಲ್ಲ, ಗ್ರಾಹಕರ ಮೇಲೆಯೇ ಹೊರೆ ಹಾಕಬೇಕಿದೆ ಎಂದು ಹೇಳಿದ್ದಾರೆ.
ಬೆಲೆ ಏರಿಕೆಯಿಂದ ಸರ್ಕಾರ ನಮಗೆ ಅನ್ಯಾಯ ಮಾಡುತ್ತಿದೆ. ಈಗಾಗಲೇ ಹಣದುಬ್ಬರ ಹೆಚ್ಚಾಗಿದ್ದು, ಆರ್ಥಿಕ ಒತ್ತಡ ಹೆಚ್ಚಾಗಿದೆ. ಇದೀಗ ಡೀಸೆಲ್ ದರ ಹೆಚ್ಚಳ ದೊಡ್ಡ ಹೊಡೆತ ನೀಡಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಚ್ಚಾ ವಸ್ತು, ಹಣ್ಣು, ತರಕಾರಿ, ಹಾಲು ಸೇರಿದಂತೆ ಪ್ರತಿಯೊಂದು ಅಗತ್ಯ ವಸ್ತು ಪೂರೈಕೆ ಮಾಡಲು ಡೀಸೆಲ್ ಮುಖ್ಯವಾಗುತ್ತದೆ. ಇದರ ಬೆಲೆ ಏರಿಕೆ ಎಲ್ಲಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರುತ್ತದೆ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ (ಬಿಬಿಎಚ್‌ಎ) ಅಧ್ಯಕ್ಷ ಪಿಸಿ ರಾವ್ ಅವರು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಅವರು ಮಾತನಾಡಿ, ಡೀಸೆಲ್ ಬೆಲೆ ಏರಿಕೆ ಮಾಡಿರುವ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದು ಕೈಗಾರಿಕೆಗಳನ್ನು ಹಳ್ಳಕ್ಕೆ ತಳ್ಳುವ ಮತ್ತು ಜನರ ಜೀವನವನ್ನು ಕಷ್ಟಕರವಾಗಿಸುವ ಉದ್ದೇಶಪೂರ್ವಕ ಕ್ರಮವಾಗಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರದ ಕ್ರಮವು ಎಲ್ಲಾ ವರ್ಗದ ಜನರ ಮೇಲೂ ಪರಿಣಾಮ ಬೀರಲಿದೆ. ಡೀಸೆಲ್ ದರ ಏರಿಕೆಯಾದರೆ ಸಾರಿಗೆ ವೆಚ್ಚಗಳು ಹೆಚ್ಚಾಗುತ್ತವೆ. ಎಲ್ಲಾ ವಸ್ತುಗಳ ದರ ಹೆಚ್ಚಾಗುತ್ತದೆ. ಕೈಗಾರಿಕಾ ಕ್ಷೇತ್ರ ಸಂಕಷ್ಟಕ್ಕೆ ಸಿಲುಕುತ್ತದೆ. ಸರಕು ದರ ಹೆಚ್ಚಾಗುತ್ತಿದ್ದಂತೆ ಜಿಎಸ್'ಟಿ ಸಂಗ್ರಹ ಕೂಡ ಹೆಚ್ಚಾಗುತ್ತದೆ. ಸರ್ಕಾರ ಕೂಡ ಅದನ್ನೇ ಬಯಸುತ್ತಿದೆ ಎಂದು ಕಿಡಿಕಾರಿದರು.
ವ್ಯಾಪಾರಿಯಾಗಿರುವ ಸಜ್ಜನ್ ರಾಜ್ ಮೆಹ್ತಾ ಎಂಬುವವರು ಮಾತನಾಡಿ, ಇದು ಕಳಪೆ ಆಡಳಿತದ ಸಂಕೇತ. ಡೀಸೆಲ್ ಬೆಲೆ ಏರಿಕೆಗೂ ಮುನ್ನ ಸರ್ಕಾರ ವ್ಯಾಪಾರಿಗಳು ಮತ್ತು ಉದ್ಯಮಿಗಳನ್ನು ಸಂಪರ್ಕಿಸಬೇಕಿತ್ತು ಎಂದು ಕಿಡಿಕಾರಿದ್ದಾರೆ,
ಹಾಲಿನ ಬೆಲೆಯಲ್ಲಿ 4 ರೂ. ಹೆಚ್ಚಳ ಮಾಡಿದರು. ಇದರಿಂದ ಹೋಟೆಲ್ ಗಳು ಕಾಫಿ, ಚಹಾ ಬೆಲೆಯನ್ನು ಹೆಚ್ಚಿಸುತ್ತಿವೆ. ಇದೀಗ ಡೀಸೆಲ್ ದರ ಇತರೆ ವಸ್ತುಗಳ ಬೆಲೆ ಹೆಚ್ಚಾಗಲು ಕಾರಣವಾಗಿದೆ. ಈ ಕ್ರಮವು ಹಣದುಬ್ಬರ ಸಮಸ್ಯೆಯನ್ನು ಮತ್ತಷ್ಟು ಹದಗೆಡಿಸುತ್ತದೆ. ಆರ್ಥಿಕತೆಯ ಮೇಲೆ ಹೊಡೆತ ನೀಡಲಿದೆ ಎಂದು ಹೇಳಿದರು,
ಬೆಲೆ ಏರಿಕೆಯಿಂದಷ್ಟೇ ಪರಿಣಾಮ ಕೊನೆಗೊಳ್ಳುವುದಿಲ್ಲ. ನಮ್ಮ ವ್ಯವಹಾರಗಳ ಮೇಲೂ ಪರಿಣಾಮ ಬೀರಲಿದೆ. ಅನೇಕ ಸಾಗಣೆದಾರರು ಕರ್ನಾಟಕಕ್ಕಿಂದ ಹೆಚ್ಚು ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಇಂಧನ ಖರೀದಿಗೆ ಮುಂದಾಗುತ್ತದೆ. ಇತರಿಂದ ರಾಜ್ಯಕ್ಕೆ ಆದಾಯ ನಷ್ಟವಾಗಲಿದೆ. ಸ್ಥಳೀಯ ವ್ಯವಹಾರಗಳ ಮೇಲೂ ಆರ್ಥಿಕ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.
Advertisement