
ಮೈಸೂರು: ಈ ಪ್ರಕರಣ ಸಿನಿಮಾ ಕಥೆಯನ್ನೇ ಹೋಲುವಂತಿದೆ. 5 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪತ್ನಿ ದಿಡೀರ್ ಪ್ರತ್ಯಕ್ಷಳಾಗಿದ್ದು, ಇದರ ಬೆನ್ನಲ್ಲೇ ಹತ್ಯೆ ಆರೋಪದ ಮೇಲೆ ಜೈಲುಪಾಲಾಗಿದ್ದ ಪತಿಯನ್ನು ಇದೀಗ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಈ ಘಟನೆ ನಡೆದಿರುವುದು ಮೈಸೂರು ಹಾಗೂ ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ. ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಬಸವನಹಳ್ಳಿಯ ಸುರೇಶ್ ಎಂಬುವವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಹುಣಸೂರಿನ ಮಲ್ಲಿಗೆ ಎಂಬಾಕೆಯನ್ನು ಸುರೇಶ್ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದರು. ಈ ನಡುವೆ ಮಲ್ಲಿಗೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು, ಈ ಬಗ್ಗೆ ಸುರೇಶ್ 2020ಲ್ಲಿ ಕುಶಾಲನಗರ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು. ತೀವ್ರ ಹುಡುಕಾಟದ ನಂತವೂ ಮಹಿಳೆ ಪತ್ತೆಯಾಗಿರಲಿಲ್ಲ. ಈ ನಡುವೆ ಮೈಸೂರು ಜಿಲ್ಲೆಯ ಬೆಟ್ಟದಪುರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಮಹಿಳೆ ಶವದ ಅಸ್ಥಿಪಂಜರ ಪತ್ತೆಯಾಗಿತ್ತು.
ಸಿಕ್ಕ ಅಸ್ಥಿಪಂಜರ ನಿನ್ನ ಹೆಂಡತಿಯದ್ದೇ ಎಂದು ಬಲವಂತವಾಗಿ ಅತ್ತೆ ಗೌರಿ ಮತ್ತು ಸುರೇಶನ ಒಪ್ಪಿಗೆಯನ್ನು ಪೊಲೀಸರು ಪಡದುಕೊಂಡಿದ್ದರು. ಹೆಂಡತಿ ಕೊಲೆಮಾಡಿದ್ದಾನೆ ಎಂದು ಕೊಲೆ ಆರೋಪದಡಿ ಬೆಟ್ಟದಪುರ ಪೋಲಿಸರು ಜೈಲಿಗೆ ಕಳುಹಿಸಿದ್ದರು.
ನಂತರ ಕೋರ್ಟ್ ಅನುಮತಿಯಂತೆ ತಾಯಿ ಗೌರಿ ಮತ್ತು ಅಸ್ಥಿಪಂಜರದ ಡಿಎನ್ಎ ಪರೀಕ್ಷೆಗೆ ಒಳಪಡಿಸಿ ಆರಣ್ಯದಲ್ಲಿ ಸಂಸ್ಕಾರ ಮಾಡಿದ್ದರು. ಶವಸಂಸ್ಕಾರ ಮಾಡಿದ ಅಸ್ಥಿಪಂಜರ ಮತ್ತು ಹೆಂಡತಿ ಮಲ್ಲಿಗೆ ತಾಯಿಯ ಗೌರಿಯ ಡಿಎನ್ಎ ಪರಿಕ್ಷೆ ವರದಿ ಸರಿಯಾಗಿ ಬಂದಿರಲಿಲ್ಲ, ಹೀಗಾಗಿ ಹೆಂಡತಿ ಸತ್ತಿಲ್ಲ ಬದುಕಿದ್ದಾಳೆ ಎಂದು ಸುರೇಶ್. ಕೋರ್ಟ್ ಮೊರೆ ಹೋಗಿದ್ದ. ಎರಡು ವರ್ಷಗಳ ನಂತರ ಸುರೇಶ್‌ಗೆ ಜಾಮೀನು ದೊರೆತಿದ್ದರಿಂದ ಜೈಲಿನಿಂದ ಬಿಡುಗಡೆ ಮಾಡಿದ್ದರು.
ಬಳಿಕ ಸುರೇಶ್ ಅವರು ಪತ್ನಿಗಾಗಿ ಹುಡುಕಾಟ ಮುಂದುವರೆಸಿದ್ದರು. ಇದರ ನಡುವೆಯೇ ಮಡಿಕೇರಿಯ ಹೋಟೆಲ್ ನಲ್ಲಿ ಮಹಿಳೆ ತನ್ನ ಪ್ರಿಯಕರನೊಂದಿಗೆ ಕಾಣಿಸಿಕೊಂಡಿದ್ದು, ಸುರೇಶ್ ಸ್ನೇಹಿತರು ಆಕೆ ಫೋಟೋ ತೆಗೆದು ಸುರೇಶ್‌ಗೆ ಕಳಿಸಿದ್ದಾರೆ. ಬಳಿಕ ಶಾಕ್ ಆದ ಸುರೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಪೊಲೀಸರು ಆಕೆಯನ್ನ ಮೈಸೂರು ಕೋರ್ಟ್ಗೆ ಹಾಜರು ಪಡಿಸಿದ್ದಾರೆ.
ಇದೀಗ ಪ್ರಕರಣ ವಿಭಿನ್ನ ರೀತಿಯಲ್ಲಿ ತಿರುವು ಪಡೆದುಕೊಂಡಿದೆ. ಮಾಡದ ತಪ್ಪಿದೆ 2 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ ಸುರೇಶ್ ಅವರು ಪೊಲೀಸರಿಗೆ ಹಾಗೂ ಪತ್ನಿಯ ಮೋಸಕ್ಕೆ, ಕೊಲೆಗಾರನ ಪಟ್ಟಕ್ಕಾಗಿ ಪೊಲೀಸರಿಗೆ ಹಿಡಿಶಾಪ ಹಾಕಿದ್ದಾರೆ. ಇತ್ತ ಆತನ ಪತ್ನಿ ಮಲ್ಲಿಗೆ ಬೆಟ್ಟದಪುರ ಪೊಲೀಸರೇ ಕಾರಣ ಎಂದು ಕಿಡಿಕಾರಿದ್ದಾರೆ.
ಈ ನಡುವೆ ಸುರೇಶ್ ಜೈಲಿನಲ್ಲಿದ್ದಾಗ, ಅವರ ಮಗ ಕೃಷ್ಣ 10 ನೇ ತರಗತಿಯಲ್ಲಿದ್ದು, ಒಂದು ವಿಷಯದಲ್ಲಿ ಅನುತ್ತೀರ್ಣನಾದ ನಂತರ ಶಾಲೆ ತೊರೆದಿದ್ದ. ತನ್ನ ಸಹೋದರಿ ಕೀರ್ತಿಯ ಶಿಕ್ಷಣವನ್ನು ಬೆಂಬಲಿಸಲು ಮತ್ತು ಅಜ್ಜಿಯನ್ನು ನೋಡಿಕೊಳ್ಳಲು ಕೆಲಸ ಮಾಡಲು ಪ್ರಾರಂಭಿಸಿದ್ದ.
ನಮ್ಮ ತಾಯಿ ಸತ್ತಿದ್ದಾರೋ ಅಥವಾ ಬದುಕಿದ್ದಾರೋ ಎಂಬುದು ನಮಗೆ ಮುಖ್ಯವಲ್ಲ. ನಮ್ಮ ತಂದೆ ನಿರಪರಾಧಿ ಎಂಬುದು ನಮಗೆ ಗೊತ್ತಿತ್ತು. ಅವರ ಬಿಡುಗಡೆಗಾಗಿ ಪ್ರಾರ್ಥಿಸುತ್ತಿದ್ದೆವು. ವಿದ್ಯಾಭ್ಯಾಸ ಮುಂದುವರೆಸುವ ಬಯಕೆ ಇದೆ ಎಂದು ಸುರೇಶ್ ಅವರ ಪುತ್ರ ಕೃಷ್ಣಾ ಹೇಳಿದ್ದಾರೆ.
ಸುರೇಶ್ ಪರ ವಕೀಲ ಪಾಂಡು ಪೂಜಾರಿ ಅವರು ಮಾತನಾಡಿ, ನನ್ನ ಕಕ್ಷಿದಾರನ ಈ ಪರಿಸ್ಥಿತಿಗೆ ಪೊಲೀಸರ ಕಳಪೆ ತನಿಖೆಯೇ ಕಾರಣ ಎಂದು ಆರೋಪಿಸಿದ್ದಾರೆ.
ಬೆಟ್ಟದಪುರದಲ್ಲಿ ಮಹಿಳೆಯ ಅಸ್ಥಿಪಂಜರದ ಅವಶೇಷಗಳು ಪತ್ತೆಯಾದ ನಂತರ, ಪೊಲೀಸರು 2021 ರಲ್ಲಿ ಮಲ್ಲಿಗೆ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಸುರೇಶ್ ಅವರನ್ನು ಬಂಧಿಸಿದ್ದರು. ಸುರೇಶ್ ಅವರು ತಾವು ಎಂದಿಗೂ ಮಾಡದ ಅಪರಾಧವನ್ನು ತಪ್ಪೊಪ್ಪಿಕೊಳ್ಳುವಂತೆ ಒತ್ತಾಯಿಸಲಾಗಿತ್ತು. ಡಿಎನ್ಎ ವರದಿ ಸ್ವೀಕರಿಸುವ ಮೊದಲೇ ಪೊಲೀಸರು ಆರೋಪಪಟ್ಟಿ ಸಲ್ಲಿಸಿದರು. ಸುರೇಶ್ ಅವರನ್ನು ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸುವಂತೆ ಮಾಡಿದ್ದಾರೆಂದು ಕಿಡಿಕಾರಿದ್ದಾರೆ.
Advertisement