ಬೆಂಗಳೂರು: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಬ್ಯಾಡ್ಮಿಂಟನ್ ಕೋಚ್ ಬಂಧನ; ಫೋನ್​ನಲ್ಲಿ 8 ಹುಡುಗಿಯರ ವಿಡಿಯೋ ಪತ್ತೆ!

16 ವರ್ಷದ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಮಿಳುನಾಡು ಮೂಲದ ಬ್ಯಾಡ್ಮಿಂಟನ್ ಕೋಚ್ ಸುರೇಶ್ ಬಾಲಾಜಿ(30)ಯನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ತನ್ನ ಬಳಿ ಬ್ಯಾಡ್ಮಿಂಟನ್ ತರಬೇತಿ ಪಡೆಯುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬ್ಯಾಡ್ಮಿಂಟನ್ ಕೋಚ್​ವೊಬ್ಬರನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.

16 ವರ್ಷದ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಮಿಳುನಾಡು ಮೂಲದ ಬ್ಯಾಡ್ಮಿಂಟನ್ ಕೋಚ್ ಸುರೇಶ್ ಬಾಲಾಜಿ(30)ಯನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿ ಸುರೇಶ್ ಬಾಲಾಜಿ ಬ್ಯಾಡ್ಮಿಂಟನ್ ಹೇಳಿಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಕಳೆದ ಎರಡು ವರ್ಷಗಳ ಹಿಂದೆ ಬ್ಯಾಡ್ಮಿಂಟನ್ ಕೋಚಿಂಗ್​ ಸೇರಿದ್ದ ಬಾಲಕಿಯನ್ನು ಆಗಾಗ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಯಾರ ಬಳಿಯೂ ಹೇಳದಂತೆ ಬಾಲಕಿಗೆ ಬೆದರಿಕೆ ಹಾಕಿದ್ದಾನೆ.

ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಬಾಲ, ರಜಾ ದಿನಗಳನ್ನು ಕಳೆಯಲು ಅಜ್ಜಿಯ ಮನೆಗೆ ತೆರಳಿದ್ದಳು. ಈ ವೇಳೆ ಬಾಲಕಿ ಅಜ್ಜಿಯ ಫೋನ್‌ನಿಂದ ಅಪರಿಚಿತ ನಂಬರ್‌ಗೆ ತನ್ನ ಬೆತ್ತಲೆ ಫೋಟೋ ಕಳುಹಿಸಿದ್ದಾಳೆ. ಇದನ್ನು ಗಮನಿಸಿದ ಅಜ್ಜಿ, ತಕ್ಷಣ ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಾಲಕಿಯ ತಾಯಿಯು ಮಗಳನ್ನು ವಿಚಾರಿಸಿದಾಗ ಸಾಕಷ್ಟು ಬಾರಿ ಬ್ಯಾಡ್ಮಿಂಟನ್ ಕೋಚ್, ಲೈಂಗಿಕ ದೌರ್ಜನ್ಯ ಎಸಗಿರುವುದು ತಿಳಿದು ಬಂದಿದೆ.

ಸಾಂದರ್ಭಿಕ ಚಿತ್ರ
ಬೆಂಗಳೂರು: ಬಿಹಾರ ಯುವತಿ ಅಪಹರಿಸಿ ಅತ್ಯಾಚಾರ; ಇಬ್ಬರ ಬಂಧನ

ಅನೇಕ ಸಂದರ್ಭಗಳಲ್ಲಿ ಡ್ಯಾನ್ಸ್ ಕ್ಲಾಸ್, ಟ್ಯೂಷನ್ ಕ್ಲಾಸ್ ತ್ಯಜಿಸಿ ಆರೋಪಿಯನ್ನು ಭೇಟಿ ಮಾಡಿರುವುದಾಗಿ ಬಾಲಕಿಯು ತನ್ನ ಬಳಿ ಹೇಳಿಕೊಂಡಿದ್ದಾಳೆ ಎಂದು ಬಾಲಕಿಯ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮಗಳಿಂದ ಎಲ್ಲ ವಿಚಾರ ತಿಳಿದ ನಂತರ ತಾಯಿ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಂಡ ಪೊಲೀಸರು ಸುರೇಶ್ ಬಾಲಾಜಿಯನ್ನು ಬಂಧಿಸಿದ್ದಾರೆ.

ಪೊಲೀಸರು ಆರೋಪಿಯ ಮೊಬೈಲ್ ಅನ್ನು ವಶಕ್ಕೆ ಪಡೆದು​ ಪರಿಶೀಲನೆ ಮಾಡಿದಾಗ ಕ್ರೀಡಾ ತರಬೇತಿ ಕೇಂದ್ರದಲ್ಲಿ ಹಲವು ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಕಿರುಕುಳ ನೀಡಿರುವುದು ಕಂಡುಬಂದಿದೆ. ಮೊಬೈಲ್​ನಲ್ಲಿ 13 ರಿಂದ 16 ವರ್ಷ ವಯಸ್ಸಿನ 8 ಹುಡುಗಿಯರ ನಗ್ನ ಫೋಟೋಗಳು ಮತ್ತು ವಿಡಿಯೋಗಳು ಸಹ ಪತ್ತೆಯಾಗಿವೆ. ಹೀಗಾಗಿ ಇನ್ನಷ್ಟು ತನಿಖೆ ನಡೆಸಲು ಪೊಲೀಸರು, ಆರೋಪಿ ಸುರೇಶ್ ಬಾಲಾಜಿಯನ್ನು ಕೋರ್ಟ್ ಗೆ​ ಹಾಜರುಪಡಿಸಿ ಎಂಟು ದಿನ ತಮ್ಮ ವಶಕ್ಕೆ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com