
ಬೆಂಗಳೂರು: ಉಚಿತ ಬಸ್ ಒದಗಿಸುವ ಶಕ್ತಿ ಯೋಜನೆ ಆರಂಭದ ಬಳಿಕ ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಬಹುತೇಕ ಎಲ್ಲಾ ಸಾರಿಗೆ ಬಸ್ ಗಳು ಜನದಟ್ಟಣೆಯೊಂದಿಗೆ ಓಡಾಡುತ್ತಿವೆ. ಇದರಿಂದ ಹಳೆಯ ಬಸ್ ಗಳ ಮೇಲೆ ಹೊರೆ ಹೆಚ್ಚಾಗಿದೆ.
ಯೋಜನೆಯಿಂದಾಗಿ ಪ್ರತಿದಿನ 25 ಲಕ್ಷ ಹೆಚ್ಚುವರಿ ಪ್ರಯಾಣಿಕರು ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ವಾರ್ಷಿಕವಾಗಿ 900 ಕೋಟಿಗೂ ಹೆಚ್ಚುವರಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಸಾರಿಗೆ ಇಲಾಖೆ ಇರುವ ವ್ಯವಸ್ಥೆಯಲ್ಲೇ ಪರಿಸ್ಥಿತಿ ನಿಭಾಯಿಸುತ್ತಿದೆ.
ಪ್ರಸ್ತುತ 26,000 ಬಸ್ ಗಳಲು ಓಡಾಡುತ್ತಿವೆ. ಪ್ರತಿವರ್ಷ ಶೇ.10ರಷ್ಟು ಬಸ್ ಗಳನ್ನು ಬದಲಾಯಿಸಬೇಕು. ಇದಲ್ಲದೆ, ಹಿಂದಿನ ಬಿಜೆಪಿ ಸರ್ಕಾರದ ಮೂರು ವರ್ಷ ಮತ್ತು ಹತ್ತು ತಿಂಗಳ ಅವಧಿಯಲ್ಲಿ, ಯಾವುದೇ ಹೊಸ ಬಸ್‌ಗಳನ್ನು ಖರೀದಿಸಿಲ್ಲ. ಇದರ ಪರಿಣಾಮ ಬಸ್ ಸಂಖ್ಯೆ ಇದೀಗ 21,000ಕ್ಕೆ ಇಳಿದಿದೆ. ಬಸ್ ಸಮಸ್ಯೆ ನಿವಾರಣೆಗೆ ಬಾಡಿಗೆ ಬಸ್ ನೆರವು ಪಡೆಯಲು ಚಿಂತನೆ ನಡೆಸಿದ್ದು, ಇದಕ್ಕೆ ರಾಮಲಿಂಗಾ ರೆಡ್ಡಿಯವರು ನಿರಾಕರಿಸಿದ್ದಾರೆಂದು ತಿಳಿದುಬಂದಿದೆ.
ಬಾಡಿಗೆ ಬದಲು ಹೊಸ ಬಸ್ ಗಳ ಖರೀದಿಸುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆಂದು ವರದಿಗಳು ತಿಳಿಸಿವೆ. ಬಜೆಟ್ ನಲ್ಲಿ ಈ ಕುರಿತು ಪ್ರಸ್ತಾಪಿಸಲಾಗಿದ್ದು, 4,000 ಹೊಸ ಬಸ್ ಖರೀದಿ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಕಾಂಗ್ರೆಸ್ ನಾಯಕರು ಅಹಮದಾಬಾದ್ ನಲ್ಲಿ ನಡೆಯುತ್ತಿರುವ ಎಐಸಿಸಿ ಸಭೆಯಲ್ಲಿ ಬ್ಯುಸಿಯಾಗಿದ್ದು, ಸಭೆ ಬಳಿಕ ಹಿಂತಿರುಗಿದ ನಂತರ ಶುಕ್ರವಾರ ನಡೆಯುವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾಕ ತೆಗೆದುಕೊಳ್ಳಲಿದ್ದಾರೆಂದು ತಿಳಿದುಬಂದಿದೆ.
4,000 ಬಸ್‌ಗಳ ಖರೀದಿಸಲು ನಿರ್ಧರಿಸಲಾಗಿದ್ದು, ಪ್ರತಿ ಬಸ್‌ಗೆ 50 ಲಕ್ಷ ರೂ.ಗಳಂತೆ 2,000 ಕೋಟಿ ರೂ. ವೆಚ್ಚವಾಗುತ್ತದೆ. ರಾಜ್ಯಾದ್ಯಂತ, ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಪರಿಸ್ಥಿತಿ ಕಠಿಣವಾಗಿದ್ದು, ಅಲ್ಲಿ ಬಸ್ ಗಳನ್ನು ನಿಯೋಜಿಸುವ ಅಗತ್ಯವಿದೆ. ಬೆಳಗಾವಿ ಮತ್ತು ಕಲ್ಯಾಣ ಕರ್ನಾಟಕದಂತಹ ಪ್ರದೇಶಗಳಲ್ಲಿ ಪರಿಸ್ಥಿತಿ ಕಠಿಣವಾಗಿದೆ. ಖಾಸಗಿ ಬಸ್ ಗಳು ಕೂಡ ಅಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಈ ಪ್ರದೇಶಗಳಿಗೆ ಆದ್ಯತೆ ಮೇರೆಗೆ ಬಸ್ ಗಳನ್ನು ನಿಯೋಜನೆಗೊಳಿಸಲಾಗುತ್ತದೆ ಮೂಲಗಳು ಮಾಹಿತಿ ನೀಡಿವೆ.
4,000 ಹೊಸ ಬಸ್ ಗಳಲ್ಲಿ ಬೆಳಗಾವಿಗೆ 700, ಕಲ್ಯಾಣ ಕರ್ನಾಟಕಕ್ಕೆ 700 ಮತ್ತು ದಕ್ಷಿಣ ಜಿಲ್ಲೆಗಳಿಗೆ 600 ನಿಯೋಜನೆಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
Advertisement