
ದಾವಣಗೆರೆ: ದಾವಣಗೆರೆಯ ಎಸ್ ಪಿ ಎಸ್ ನಗರದಲ್ಲಿ ಘೋರ ದುರಂತವೊಂದು ನಡೆದಿದೆ. ಪತ್ನಿ ಸಾವಿನಿಂದ ಬೇಸತ್ತು ಇಬ್ಬರು ಮಕ್ಕಳನ್ನು ಕೊಂದು ಪತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. 35 ವರ್ಷದ ಉದಯ್ ಎಂಬಾತ ಮಕ್ಕಳಾದ ಸಿಂಧುಶ್ರೀ (4), ಶ್ರೀಜಯ್ (3) ಎಂಬುವರನ್ನು ಕತ್ತು ಹಿಸುಕಿ ಕೊಂದು ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ 3 ತಿಂಗಳ ಹಿಂದೆ ಉದಯ್ ಪತ್ನಿ ಸಾವನ್ನಪ್ಪಿದ್ದರು. ಪತ್ನಿಯ ಸಾವಿನಿಂದ ಖಿನ್ನತೆಗೆ ಒಳಗಾಗಿ ಉದಯ್ ಈ ದುಡುಕು ನಿರ್ಧಾರಕ್ಕೆ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.
Advertisement