ಜಾತಿ ಜನಗಣತಿ ವರದಿ ಸೋರಿಕೆಯಾಗಿಲ್ಲ: ಕಾಂತರಾಜ್

ಕಾಂತರಾಜ್ ವರದಿ ಅವೈಜ್ಞಾನಿಕವಾಗಿದೆ ಎಂಬ ಆರೋಪಗಳು ಸರಿಯಲ್ಲ. ಎಲ್ಲಾ ಆಯಾಮಗಳಿಂದಲೂ ಸಮೀಕ್ಷೆಯನ್ನು ನಡೆಸಲಾಗಿದ್ದು, ಸರ್ಕಾರ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು.
H Kantharaj
ಕಾಂತರಾಜ್
Updated on

ಶಿವಮೊಗ್ಗ: ಜಾತಿ ಜನಗಣತಿ ವರದಿ ಸೋರಿಕೆಯಾಗಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್ ಕಾಂತರಾಜ್ ಅವರು ಸ್ಪಷ್ಟಪಡಿಸಿದ್ದಾರೆ.

ಶನಿವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂತರಾಜ್ ವರದಿ ಅವೈಜ್ಞಾನಿಕವಾಗಿದೆ ಎಂಬ ಆರೋಪಗಳು ಸರಿಯಲ್ಲ. ಎಲ್ಲಾ ಆಯಾಮಗಳಿಂದಲೂ ಸಮೀಕ್ಷೆಯನ್ನು ನಡೆಸಲಾಗಿದ್ದು, ಸರ್ಕಾರ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು. ಈ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತರಲಿದ್ದಾರೆಂಬ ಭರವಸೆಯಿದೆ ಎಂದು ಹೇಳಿದರು.

1931 ರ ನಂತರ ಹಿಂದುಳಿದ ವರ್ಗಗಳ ಸಾಮಾಜಿಕ-ಆರ್ಥಿಕ ಸ್ಥಿತಿಯ ಕುರಿತು ಯಾವುದೇ ಸಮೀಕ್ಷೆಯನ್ನು ನಡೆಸಲಾಗಿಲ್ಲ, ಹೀಗಾಗಿ 2015 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಮೀಕ್ಷೆಯನ್ನು ಕೈಗೆತ್ತಿಕೊಳ್ಳಲು ಸಮಿತಿಯನ್ನು ರಚಿಸಿದರು. "ನಮ್ಮ ದೇಶದಲ್ಲಿ ಜಾತಿ ವಾಸ್ತವ. ಜಾತಿ ವ್ಯವಸ್ಥೆಯನ್ನು ರದ್ದುಗೊಳಿಸುವುದು ಮತ್ತು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುವುದು ಬಹಳ ಮುಖ್ಯ. ವರದಿಯಲ್ಲಿ ಉಲ್ಲೇಖಿಸಲಾದ 54 ಅಂಶಗಳಲ್ಲಿ ಜಾತಿ ವಿಷಯವೂ ಸೇರಿದೆ. ಸಮೀಕ್ಷೆಯ ವಿಧಾನವನ್ನು ಸುಪ್ರೀಂಕೋರ್ಟ್‌ನ ಮಾರ್ಗಸೂಚಿ ಹಾಗೂ ತಜ್ಞರ ಸಲಹೆಯಂತೆ ರೂಪಿಸಲಾಗಿತ್ತು. ಹೀಗಾಗಿ ಅದು ವೈಜ್ಞಾನಿಕ ಸಮೀಕ್ಷೆಯಾಗಿದೆ ಎಂದು ಹೇಳಿದರು.

ಜಾತಿ ಸಮೀಕ್ಷೆಯ ಕುರಿತು ಕಳಕರ್ ಮತ್ತು ಮಂಡಲ ವರದಿಗಳನ್ನು ಈ ಹಿಂದೆ ಸಲ್ಲಿಸಲಾಗಿತ್ತು. ಸಮೀಕ್ಷಾ ವರದಿಯನ್ನು ಮಂಡಿಸಿದವರು ಅದನ್ನು ಜಾರಿಗೆ ತರಬಾರದು ಎಂದು ಕೋರಿದ್ದರಿಂದ ಕಳಕರ್ ವರದಿಯನ್ನು ಜಾರಿಗೆ ತರಲಾಗಿಲ್ಲ. ಆದರೆ, ಮಂಡಲ ವರದಿಯನ್ನು ಕೇಂದ್ರ ಸರ್ಕಾರ ಮಂಡಿಸಿ ಅಂಗೀಕರಿಸಿತು. ಸಂವಿಧಾನದಲ್ಲಿ ಮೀಸಲಾತಿಯ ಶೇಕಡಾವಾರು ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ. ಆದರೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಶೇಕಡಾವಾರು ಪ್ರಮಾಣವನ್ನು ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್‌ಗೆ ನೀಡಲಾಗಿದೆ, ಶಾಸಕರು ಮತ್ತು ಸಂಸದ ಸ್ಥಾನಗಳಿಗೆ ನೀಡಲಾಗಿಲ್ಲ. ಬಳಿಕ ಜಾತಿಗಳ ಸಂಖ್ಯೆ, ಮೀಸಲಾತಿ ಶೇಕಡವಾರು ಕುರಿತು ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆಗಳ ಕುರಿತು ಚರ್ಚೆಗಳು ಆರಂಭವಾಯಿತು. ಹೀಗಾಗಿ 2015ರಲ್ಲಿ ಹಿಂದುಳಿದ ವರ್ಗಗಳ ಸಮೀಕ್ಷೆ ನಡೆಸಲಾಯಿತು. ಸಮೀಕ್ಷೆಗೆ ಹೆಚ್ಚಿನ ಹಣ ಒದಗಿಸಲಾಯಿತು. ಇದೀಗ ಜಾತಿ ಗಣತಿ ವರದಿ ಸಿದ್ಧವಾಗಿದೆ. ನಮ್ಮ ಬಳಿಕ ಬಿಹಾರ, ಅಸ್ಸಾಂ ಹಾಗೂ ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳೂ ಕೂಡ ಸಮೀಕ್ಷೆಗೆ ಮುಂದಾಗಿವೆ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ 1993 ರಲ್ಲಿ ಉದ್ಯೋಗಕ್ಕಾಗಿ ಮಂಡಲ್ ಆಯೋಗದ ವರದಿಯನ್ನು ಜಾರಿಗೆ ತರಲಾಯಿತು. 2008 ರಲ್ಲಿ ಇದನ್ನು ಶಿಕ್ಷಣದಲ್ಲಿ ಜಾರಿಗೆ ತರಲಾಯಿತು. "ಮಂಡಲ್ ವರದಿಯ ಪ್ರಕಾರ, ಹಿಂದುಳಿದ ವರ್ಗಗಳಿಗೆ ಸುಮಾರು ಶೇಕಡಾ 27 ರಷ್ಟು ಮೀಸಲಾತಿ ನೀಡಲಾಗಿದೆ. ಈ ಮೀಸಲಾತಿಯು ಹಿಂದುಳಿದ ವರ್ಗಗಳನ್ನು ಉನ್ನತೀಕರಿಸುತ್ತದೆ ಎಂದಿ ಮಾಹಿತಿ ನೀಡಿದರು.

H Kantharaj
ಜಾತಿ ಗಣತಿ ವರದಿ 'ಬಹಿರಂಗ': ಪರಿಶಿಷ್ಟ ಜಾತಿ ನಂ.1; ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವಂತೆ ಆಯೋಗ ಶಿಫಾರಸು!

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com