
ಬೆಂಗಳೂರು: ವಿವಾದಾತ್ಮಕ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮೂಲಕ ತಮ್ಮ ಕುರ್ಚಿ ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಯತ್ನಿಸುತ್ತಿದ್ದಾರೆಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಜಾತಿ ಜನಗಣತಿಯ ಮೂಲಕ ಸಮುದಾಯಗಳ ನಡುವೆ ಗೊಂದಲ ಮತ್ತು ಬಿರುಕು ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಮುಂದಿನ ಮೂರು ವರ್ಷಗಳ ಕಾಲ ನೀವೇ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮುಂದುವರಿದರೆ, ಈ ವರದಿಯನ್ನು ತಿರಸ್ಕರಿಸಿ ಹೊಸ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೆ. ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ್ ಅರಸ್‌ಗಿಂತ ಅವರಿಗಿಂದ ದೊಡ್ಡವರಲ್ಲ. ಈಗಿನ ಜಾತಿಗಣತಿ ವರದಿ ಮಕ್ಕಿಕಾಮಕ್ಕಿ ಮಕ್ಮಲ್ ಟೋಪಿ. ಎಲ್ಲೋ ಕುಳಿತು ಅವರಿಗೆ ಬೇಕಾದಂತೆ ವರದಿ ರೂಪಿಸಲಾಗಿದೆ. ಇದು ಜಾರಿಯಾದರೆ ಲಕ್ಷಾಂತರ ಕುಟುಂಬಗಳಿಗೆ ಅನ್ಯಾಯವಾಗಲಿದೆ. ಇಂತಹ ಮಹಾಪರಾಧ ಮಾಡುವ ಚಿಂತನೆ ಬೇಡ. ಇದನ್ನು ಜಾರಿಗೊಳಿಸುವುದು ಅವರಿಗೆ ಗೌರವ ತರುವುದಿಲ್ಲ ಎಂದ ಹೇಳಿದರು.
ಈ ವರದಿಯನ್ನು ಜಾರಿಗೊಳಿಸುವ ಅವಶ್ಯಕತೆ ಇರಲಿಲ್ಲ. ಯಾವ ಉದ್ದೇಶಕ್ಕಾಗಿ ಇದನ್ನು ಜಾರಿಗೊಳಿಸಲಾಗುತ್ತಿದೆಯೋ ಗೊತ್ತಿಲ್ಲ ಎಂದು ರಾಜ್ಯ ಸಂಪುಟದ ಬಹುತೇಕ ಮಂತ್ರಿಗಳೇ ಹೇಳುತ್ತಿದ್ದಾರೆ. ‘ಭ್ರಷ್ಟ ವ್ಯವಸ್ಥೆಯನ್ನು ರೂಪಿಸಿ, ನಾನು ಬಾರಿ ಒಳ್ಳೆಯವನು ಎಂದು ನಿಮಗೆ ನೀವೇ ಹೇಳಿಕೊಳ್ಳುತ್ತಿದ್ದೀರಿ. ಇನ್ನೊಂದು ಕಡೆ ಅದಕ್ಕೆ ಅಪಚಾರವಾಗುವಂತಹ ತೀರ್ಮಾನ ಕೈಗೊಳ್ಳುತ್ತಿದ್ದೀರಿ. ಜನರನ್ನು ತುಂಬಾ ದಿನ ಯಾಮಾರಿಸಲು ಆಗದು. ಇಂತಹ ತಪ್ಪು ಮಾಡಿ ನಾಲ್ಕು ಜನರ ಮಧ್ಯೆ ಖಳನಾಯಕರಾಗದಿರಿ ಎಂದು ತಿಳಿಸಿದರು.
Advertisement