ಸವಿತಾ ಸಮಾಜ ಸಮುದಾಯದ ಸಾಮಾಜಿಕ ಆರ್ಥಿಕ ಸ್ಥಿತಿ-ಗತಿ ಮರು ಮೌಲ್ಯಮಾಪನಕ್ಕೆ ಸರ್ಕಾರ ಮುಂದು: ಸಮೀಕ್ಷೆ ಆರಂಭ

2013 ರ ಅಧ್ಯಯನದ ನಂತರ 2014 ರಲ್ಲಿ ಹಿಂದುಳಿದ ವರ್ಗಗಳ ಪಟ್ಟಿಗೆ ಸವಿತಾ ಸಮುದಾಯವನ್ನು ಸೇರಿಸಲಾಗಿತ್ತು. ಸಮುದಾಯವು ಕ್ಷೌರಿಕರು, ಅಗಸರು, ದರ್ಜಿಗಳು ಮತ್ತು ಕುಂಬಾರರು ಸೇರಿದಂತೆ ವಿವಿಧ ಉಪ-ಗುಂಪುಗಳನ್ನು ಒಳಗೊಂಡಿದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಕರ್ನಾಟಕದ ಸವಿತಾ ಸಮಾಜ ಸಮುದಾಯದ ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಮರು ಮೌಲ್ಯಮಾಪನ ಮಾಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮುಂದಾಗಿದ್ದು, ಹೊಸ ಸಮೀಕ್ಷೆಯೊಂದನ್ನು ಪ್ರಾರಂಭಿಸಿದೆ.

2013 ರ ಅಧ್ಯಯನದ ನಂತರ 2014 ರಲ್ಲಿ ಹಿಂದುಳಿದ ವರ್ಗಗಳ ಪಟ್ಟಿಗೆ ಸವಿತಾ ಸಮುದಾಯವನ್ನು ಸೇರಿಸಲಾಗಿತ್ತು. ಸಮುದಾಯವು ಕ್ಷೌರಿಕರು, ಅಗಸರು, ದರ್ಜಿಗಳು ಮತ್ತು ಕುಂಬಾರರು ಸೇರಿದಂತೆ ವಿವಿಧ ಉಪ-ಗುಂಪುಗಳನ್ನು ಒಳಗೊಂಡಿದೆ, ಇದೀಗ ಸಮುದಾಯವರು ವೈಜ್ಞಾನಿಕ ಮರು ಮೌಲ್ಯಮಾಪನಕ್ಕೆ ಆಗ್ರಹ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಇಲಾಖೆಯು ಹೊಸ ಸಮೀಕ್ಷೆಯನ್ನು ಆರಂಭಿಸಿದೆ.

ಈ ಸಮೀಕ್ಷೆಯು ಸಮುದಾಯದ ಪ್ರಸ್ತುತ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ವಾಸ್ತವ ಸ್ಥಿತಿಗಳನ್ನು ಪ್ರತಿಬಿಂಬಿಸುವ ಉದ್ದೇಶವನ್ನು ಹೊಂದಿದೆ. ಇಲಾಖೆಯು ರಾಜ್ಯವ್ಯಾಪಿ ಸಮಾಲೋಚನಾ ಕಾರ್ಯಕ್ರಮಗಳನ್ನು ನಡೆಸಿದ್ದು, ಕಾರ್ಯಕ್ರಮಗಳಲ್ಲಿ ಸಮುದಾಯದ ಸದಸ್ಯರನ್ನು ಪ್ರತಿಕ್ರಿಯೆ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಈ ವೇಳೆ ಹಲವರಪು ಹೊಸ ಸಮೀಕ್ಷೆ ನಡೆಸುವಂತೆ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.

ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ, 1963 ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ, 1992 ರ ಆದೇಶದಂತೆ, ವರ್ಗೀಕರಣ ನಿರ್ಧಾರಗಳು ಪ್ರಾಯೋಗಿಕ ದತ್ತಾಂಶವನ್ನು ಅವಲಂಬಿಸಿರಬೇಕು. 2019 ರಲ್ಲಿ ಪುನರ್ರಚಿಸಲಾದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 2021 ರಲ್ಲಿ ದತ್ತಾಂಶ ಸಂಗ್ರಹವನ್ನು ಪುನರಾರಂಭಿಸಿತ್ತು. ಈ ಪ್ರಕ್ರಿಯೆಯು ಸಮುದಾಯದೊಳಗಿನ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸೂಚಕಗಳ ವಿವರವಾದ ಸಮೀಕ್ಷೆಗಳು ಮತ್ತು ದಾಖಲಾತಿಯನ್ನು ಒಳಗೊಂಡಿದ್ದವು. 1995ರ ನಂತರ ವರದಿಗಳನ್ನು ಪರಿಶೀಲಿಸಲಾಗುತ್ತಿದ್ದು, ಇದು ಸಮುದಾಯದ ಕುರಿತು ದಾಖಲೆಗಳನ್ನು ಒದಗಿಸುತ್ತಿದೆ. ಸಮೀಕ್ಷೆ ವೇಳೆ ಸಮುದಾಯದ ಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸುತ್ತಿದ್ದು, ದಾಖಲೆಗಳನ್ನು ಸಲ್ಲಿಸುತ್ತಿದ್ದಾರೆಂದೂ ಅಧಿಕಾರಿಗಳು ತಿಳಿಸಿದ್ದಾರೆ.

File photo
ಸರ್ಕಾರಿ ನೌಕರರ ಕಳ್ಳಾಟಕ್ಕೆ ಬ್ರೇಕ್: AI ಸೆಲ್ಫಿ ಆಧಾರಿತ ಹಾಜರಾತಿ ವ್ಯವಸ್ಥೆ ಪರಿಚಯಿಸಲು ರಾಜ್ಯ ಸರ್ಕಾರ ಸಿದ್ಧತೆ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com