ಶಿಕ್ಷಣ, ಉದ್ಯೋಗಗಳಲ್ಲಿ ಮೀಸಲಾತಿಗಾಗಿ ಒಂದು ಜಾತಿಯನ್ನು ವಿವಿಧ ಗುಂಪುಗಳಾಗಿ ವರ್ಗೀಕರಿಸೋದು ಸರಿಯಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಬಲಜಿಗ/ಬಣಜಿಗ ಸಮುದಾಯದ ರಾಜ್ಯದ ವರ್ಗೀಕರಣವನ್ನು ಪ್ರಶ್ನಿಸಿ ಮೈಸೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ನಿವಾಸಿ ವಿ ಸುಮಿತ್ರಾ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಹೈಕೋರ್ಟ್ ಈ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Updated on

ಬೆಂಗಳೂರು: ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಒಂದೇ ಸಮುದಾಯವನ್ನು ಎರಡು ವಿಭಿನ್ನ ಮೀಸಲಾತಿ ವರ್ಗಗಳ ಅಡಿಯಲ್ಲಿ ವರ್ಗೀಕರಿಸುವುದು ಸರಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಬಲಜಿಗ/ಬಣಜಿಗ ಸಮುದಾಯದ ರಾಜ್ಯದ ವರ್ಗೀಕರಣವನ್ನು ಪ್ರಶ್ನಿಸಿ ಮೈಸೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ನಿವಾಸಿ ವಿ ಸುಮಿತ್ರಾ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಹೈಕೋರ್ಟ್ ಈ ತೀರ್ಪು ನೀಡಿದೆ. ಇತ್ತೀಚೆಗೆ ತೀರ್ಪು ನೀಡಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್, ಶಿಕ್ಷಣ ಮತ್ತು ಉದ್ಯೋಗ ಉದ್ದೇಶಗಳಿಗಾಗಿ ಬಲಜಿಗ/ಬಣಜಿಗ ಸಮುದಾಯವನ್ನು ಗುಂಪು 'ಬಿ' ಅಡಿಯಲ್ಲಿ ಏಕರೂಪವಾಗಿ ವರ್ಗೀಕರಿಸಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದರು.

ಶಿಕ್ಷಣಕ್ಕಾಗಿ ವರ್ಗ 'ಬಿ' ಅಡಿಯಲ್ಲಿ (ಆರ್ಟಿಕಲ್ 15(4) ಅಡಿಯಲ್ಲಿ) ಮತ್ತು ಉದ್ಯೋಗಕ್ಕಾಗಿ ವರ್ಗ 'ಡಿ' ಅಡಿಯಲ್ಲಿ (ಆರ್ಟಿಕಲ್ 16(4) ಅಡಿಯಲ್ಲಿ) ಸಮುದಾಯವನ್ನು ಇರಿಸುವ ರಾಜ್ಯದ ಅಸ್ತಿತ್ವದಲ್ಲಿರುವ ವರ್ಗೀಕರಣವು ತಾರತಮ್ಯ ಮತ್ತು ಸಂವಿಧಾನಬಾಹಿರವಾಗಿದೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಸುಮಿತ್ರಾ ಅವರು ತಮ್ಮ ಜಾತಿ 'ಬಿ' ವರ್ಗಕ್ಕೆ ಸೇರಿದೆ ಎಂದು ಹೇಳಿಕೊಂಡ ಕಾರಣ 1993ರಲ್ಲಿ ಒಬಿಸಿ ಕೋಟಾದಡಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನೇಮಕಗೊಂಡರು. ಆದಾಗ್ಯೂ, 1996ರಲ್ಲಿ ಉದ್ಯೋಗಕ್ಕಾಗಿ ತಮ್ಮ ಸಮುದಾಯವನ್ನು 'ಡಿ' ವರ್ಗದ ಅಡಿಯಲ್ಲಿ ವರ್ಗೀಕರಿಸಲಾಗಿದೆ ಎಂದು ತಿಳಿಸುವ ನೋಟಿಸ್ ಅವರಿಗೆ ಬಂದಿತು. ಇದರಿಂದಾಗಿ ಅವರ ಜಾತಿ ಪ್ರಮಾಣಪತ್ರವು ಉದ್ಯೋಗ-ಸಂಬಂಧಿತ ಮೀಸಲಾತಿಗೆ ಅಮಾನ್ಯವಾಗಿತ್ತು.

ಇಲಾಖಾ ಮೇಲ್ಮನವಿಗಳು ಮತ್ತು ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಮೂಲಕ ಪರಿಹಾರಕ್ಕಾಗಿ ಹಲವು ಬಾರಿ ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ನಂತರ ಸುಮಿತ್ರಾ ಈ ದ್ವಂದ್ವ ವರ್ಗೀಕರಣವನ್ನು ತೋರಿಸುವ 1986ರ ಸರ್ಕಾರಿ ಅಧಿಸೂಚನೆಯನ್ನು ಪತ್ತೆಹಚ್ಚಿದರು. ಆರ್ಟಿಕಲ್ 15(4) ಮತ್ತು 16(4) ವಿಧಿಗಳ ಹಿಂದಿನ ಸಾಂವಿಧಾನಿಕ ಉದ್ದೇಶವು ಸ್ಥಿರವಾಗಿದೆ. ಅದೇ ಅನಾನುಕೂಲಕರ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ ಎಂದು ವಾದಿಸಿದ ಅವರು, ರಾಜ್ಯದ ವರ್ಗೀಕರಣವನ್ನು ಪ್ರಶ್ನಿಸಿದರು.

ಕರ್ನಾಟಕ ಹೈಕೋರ್ಟ್
INTERVIEW | ಕರ್ನಾಟಕದ ಜಾತಿ ಸಮೀಕ್ಷೆಯನ್ನು ಮರುಪರಿಶೀಲಿಸುವ ಅಗತ್ಯವಿದೆ: Veerappa Moily

ನ್ಯಾಯಮೂರ್ತಿ ಗೋವಿಂದರಾಜ್ ಅವರು ಈ ವಾದವನ್ನು ಎತ್ತಿಹಿಡಿದು, 14ನೇ ವಿಧಿಯ ಅಡಿಯಲ್ಲಿ ಕಾನೂನಿನ ಮುಂದೆ ಸಮಾನತೆಯ ತತ್ವವು ಮೀಸಲಾತಿಯ ವಿಷಯದಲ್ಲೂ ಸಮಾನ ವ್ಯವಸ್ಥೆಯನ್ನು ಒಳಗೊಂಡಿದೆ. ಸಂದರ್ಭವನ್ನು ಅವಲಂಬಿಸಿ ಒಂದೇ ಸಮುದಾಯವನ್ನು ವಿಭಿನ್ನ ವರ್ಗಗಳಲ್ಲಿ ಇರಿಸಲಾಗುವುದಿಲ್ಲ —ಅಂತಹ ವಿಭಾಗವು ಅಂತರ್ಗತವಾಗಿ ತಾರತಮ್ಯದಿಂದ ಕೂಡಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಅಂತಹ ಯಾವುದೇ ವಿಭಿನ್ನ ನಡವಳಿಕೆ ಸಾಂವಿಧಾನಿಕ ರಕ್ಷಣೆಗಳನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

"ಶಿಕ್ಷಣಕ್ಕಾಗಿ ಹಿಂದುಳಿದ ಸಮುದಾಯವನ್ನು ಗುರುತಿಸಿದರೆ, ಉದ್ಯೋಗಕ್ಕೆ ಬಂದಾಗ ಅದನ್ನು ವಿಭಿನ್ನವಾಗಿ ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು. ಅಲ್ಲದೆ ಉದ್ಯೋಗದಲ್ಲಿ ಸುಮಿತ್ರಾ ಅವರ ಗ್ರೂಪ್ 'ಬಿ' ಮೀಸಲಾತಿ ಹಕ್ಕನ್ನು ತಿರಸ್ಕರಿಸಿದ ಆದೇಶಗಳನ್ನು ರದ್ದುಗೊಳಿಸಿ,

ಮೀಸಲಾತಿ ವರ್ಗ 'ಬಿ' ಅಡಿಯಲ್ಲಿ ಅವರ ಅರ್ಹತೆಯನ್ನು ಒಪ್ಪಿಕೊಂಡು, ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಅವರ ಉದ್ಯೋಗವನ್ನು ಪುನರ್ ಕಲ್ಪಿಸಿ ಎಂದು ರಾಜ್ಯಕ್ಕೆ ನಿರ್ದೇಶನ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com