''ಇದನ್ನು ಇಲ್ಲಿಗೆ ಬಿಡಲ್ಲ'' : ವಿಂಗ್ ಕಮಾಂಡರ್ ವಿರುದ್ಧ ಕಾನೂನು ಹೋರಾಟ- ಹಲ್ಲೆಗೊಳಗಾದ ಕನ್ನಡಿಗ ವಿಕಾಸ್! Video

ವಿಂಗ್ ಕಮಾಂಡರ್ ತನ್ನ ಮೇಲೆ ಸುಳ್ಳು ದೂರು ದಾಖಲಿಸಿದ್ದು, ಅದರ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.
Vikash Kumar
ವಿಕಾಸ್ ಕುಮಾರ್
Updated on

ಬೆಂಗಳೂರು: ಟೆಕ್ಕಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕನ್ನಡಿಗನಿಂದ ಹಲ್ಲೆ ಅಂತ ಗೂಬೆ ಕೂರಿಸಿದ್ದ ವಿಂಗ್ ಕಮಾಂಡರ್ ಕೌರ್ಯ ಕುರಿತು ರಾಜ್ಯಾದ್ಯಂತ ತೀವ್ರ ಆಕ್ರೋಶ ಹಾಗೂ ಚರ್ಚೆಯಾಗುತ್ತಿರುವಂತೆಯೇ ಈ ಪ್ರಕರಣವನ್ನು ಇಲ್ಲಿಗೆ ಬಿಡಲ್ಲ. ಕಾನೂನು ಹೋರಾಟ ನಡೆಸಲಾಗುವುದು ಎಂದು ಹಲ್ಲೆಗೊಳಗಾದ ಕನ್ನಡಿಗ ವಿಕಾಸ್ ಕುಮಾರ್ ತಿಳಿಸಿದ್ದಾರೆ.

ವಿಂಗ್ ಕಮಾಂಡರ್ ತನ್ನ ಮೇಲೆ ಸುಳ್ಳು ದೂರು ದಾಖಲಿಸಿದ್ದು, ಅದರ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.

ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಹಲ್ಲೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಸಾಫ್ಟ್‌ವೇರ್ ಕಂಪನಿಯ ಕಾಲ್ ಸೆಂಟರ್‌ನಲ್ಲಿ ಟೀಮ್ ಹೆಡ್ ಆಗಿ ಕೆಲಸ ಮಾಡುತ್ತಿರುವ ವಿಕಾಸ್ ಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.

ಭಾಷಾ ವಿಚಾರವಾಗಿ ಕನ್ನಡಿಗರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಕ್ತಬರುತ್ತಿದ್ದ ಮುಖದೊಂದಿಗೆ ವಿಂಗ್ ಕಮಾಂಡರ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ವಿವಾದಕ್ಕೆ ಕಾರಣವಾಗಿತ್ತು. ತದನಂತರ ಆತನೇ ಟೆಕ್ಕಿ ವಿಕಾಸ್ ಕುಮಾರ್ ಅವರ ಮುಖ ಸೇರಿದಂತೆ ಎಲ್ಲೆಂದರಲ್ಲಿ ಮನಸೋ ಇಚ್ಚೆಯಂತೆ ಹೊಡೆಯುವ ವಿಡಿಯೋ ವೈರಲ್ ಆಗಿದ್ದು, ಇದೊಂದು ರೋಡ್ ರೇಜ್ ಪ್ರಕರಣವಾಗಿದ್ದು, ಭಾಷೆ ವಿಚಾರವಾಗಿ ಗಲಾಟೆ ನಡೆದಲ್ಲ ಎಂದು ಪೊಲೀಸರು ಸ್ಪಷ್ಪಪಡಿಸಿದ್ದಾರೆ.

ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ವಿಕಾಸ್, ನನ್ನ ಕೆಲಸ ಕಳೆದುಕೊಳ್ಳುವ ಭಯವಿರುವುದಾಗಿ ಆತಂಕ ವ್ಯಕ್ತಪಡಿಸಿದ್ದಾರೆ. ನನ್ನ ಕೆಲಸದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಪೊಲೀಸರು ನನಗೆ ಭರವಸೆ ನೀಡಿದ್ದಾರೆ, ಆದರೆ ನಾನು ಕೆಲಸ ಮಾಡುವ ಸ್ಥಳದಲ್ಲಿನ HR ಜೊತೆಗೆ ನಡೆಸಿದ ಮಾತುಕತೆ ವೇಳೆ ಕೆಲಸ ಕಳೆದುಕೊಳ್ಳಬಹುದು ಅಂತಾ ಅನಿಸಿತು. ಆದರೆ ನಾನು ಇದನ್ನು ಈಗೆ ಬಿಡುವುದಿಲ್ಲ. ವಾಯುಪಡೆಯ ವಿಂಗ್ ಕಮಾಂಡರ್ ಭಾಷೆ ವಿಚಾರ ಬಳಸಿಕೊಂಡು ಮತ್ತು ಸುಳ್ಳು ದೂರು ದಾಖಲಿಸಿದ್ದಾರೆ. ಅದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ.

Vikash Kumar
ಕನ್ನಡಿಗನಿಂದ ಹಲ್ಲೆ ಅಂತ ಗೂಬೆ ಕೂರಿಸಿದ್ದ ವಿಂಗ್ ಕಮಾಂಡರ್ ಬಣ್ಣ ಬಯಲು; ಬೈಕ್ ಸವಾರನ ಮೇಲೆ ತಾನೇ ಮಾರಣಾಂತಿಕ ಹಲ್ಲೆ ಮಾಡಿದ್ದ Video Viral!

ನನಗೆ ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಸೇರಿದಂತೆ ಆರು ಭಾಷೆ ಮಾತನಾಡಲು ಬರುತ್ತದೆ. ಬೆಂಗಳೂರಿನಲ್ಲಿ ಬದುಕಲು ಹಲವು ಭಾಷೆ ಬರಬೇಕು ಅಂತಾನೂ ಗೊತ್ತಿದೆ. ಆದರೆ ವಿಂಗ್ ಕಮಾಂಡರ್ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಆತನೇ ನನ್ನ ಮೇಲೆ ಹಲ್ಲೆ ಮಾಡಿದನು" ಎಂದು ಅವರು ಹೇಳಿದ್ದಾರೆ. ಅಲ್ಲದೇ ತನ್ನ ಬೆಂಬಲಕ್ಕೆ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡಪರ ಸಂಘಟನೆಗಳು ಹಾಗೂ ಪೊಲೀಸರಿಗೆ ವಿಕಾಸ್ ಕುಮಾರ್ ಧನ್ಯವಾದ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com