ಕೊಪ್ಪಳ: ಮಗನ ತಪ್ಪಿಗೆ ಅಪ್ಪನಿಗೆ ಶಿಕ್ಷೆ; ಅಪ್ರಾಪ್ತನಿಂದ ಅಪಘಾತ, ಆಟೋ ಚಾಲಕನಿಗೆ ಬಿತ್ತು 1.4 ಕೋಟಿ ರೂ ದಂಡ!

ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಆಟೋ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.
Representational image
ಸಾಂದರ್ಭಿಕ ಚಿತ್ರ
Updated on

ಕೊಪ್ಪಳ: ಆಟೋ ಚಾಲಕನ ಅಪ್ರಾಪ್ತ ಮಗ ಆಟೋರಿಕ್ಷಾ ಚಲಾಯಿಸುತ್ತಿದ್ದಾಗ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಪ್ರಕರಣದಲ್ಲಿ, ಆಟೋ ಮಾಲೀಕರಿಗೆ ಕೊಪ್ಪಳ ನ್ಯಾಯಾಲಯವು 1.41 ಕೋಟಿ ರೂ.ಗಳ ಭಾರಿ ದಂಡ ವಿಧಿಸಿದೆ.

ಮಾರ್ಚ್ 10, 2021 ರಂದು ಗಂಗಾವತಿಯಲ್ಲಿ ಈ ಘಟನೆ ನಡೆದಿತ್ತು. ಕೊಪ್ಪಳ ಜಿಲ್ಲೆಯ ಗಂಗಾವತಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮಂಗಳವಾರ ನ್ಯಾಯಾಧೀಶ ರಮೇಶ್ ಎಸ್ ಗಾಣಿಗೇರ್ ವಿಚಾರಣೆ ನಡೆಸಿದರು. ಪ್ರಕರಣದ ವಿಚಾರಣೆ ನಡೆಸಿದ ನಂತರ, ನ್ಯಾಯಾಧೀಶರು ಮೃತರ ಕುಟುಂಬಕ್ಕೆ ಹಣ ಪಾವತಿಸಲು ಆದೇಶಿಸಿದ್ದಾರೆ.

ಗಂಗಾವತಿಯ ಜಯನಗರ ನಿವಾಸಿ, ದ್ವಿಚಕ್ರ ವಾಹನ ಸವಾರ ಮೃತ ರಾಜಶೇಖರ್ ಅಯ್ಯನಗೌಡ ಅವರ ಕುಟುಂಬವು ತಾಲ್ಲೂಕು ಕಾನೂನು ಸೇವೆಗಳ ಸಮಿತಿಗೆ ದೂರು ಸಲ್ಲಿಸಿತು. ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಆಟೋ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಮೃತರ ಪತ್ನಿ ಚೆನ್ನಮ್ಮ ಮತ್ತು ಇತರರು ಪರಿಹಾರ ಕೋರಿ ನ್ಯಾಯಾಲಯದ ಮೊರೆ ಹೋದರು.

2021 ರಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಲ್ಲಿಸಲಾದ ದೂರನ್ನು ಆಲಿಸಿದ ನಂತರ, ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ರಮೇಶ್ ಎಸ್. ಗಾಣಿಗೇರ್ ಅವರು, ಆಟೋ ಡ್ರೈವರ್‌ಗೆ ಮೃತರ ಕುಟುಂಬಕ್ಕೆ 1,41,61,580 ರೂ. ಪರಿಹಾರವನ್ನು ನೀಡುವಂತೆ ಆದೇಶಿಸಿದರು.

Representational image
ಚೆಕ್‌ಬೌನ್ಸ್‌ ಪ್ರಕರಣ: ಮಾಜಿ ಸಚಿವ ಬಿ.ನಾಗೇಂದ್ರ ಸೇರಿ ಮೂವರಿಗೆ 1.25 ಕೋಟಿ ರೂ ದಂಡ ವಿಧಿಸಿದ ಕೋರ್ಟ್

ರಾಜಶೇಖರ್ ಅಯ್ಯನಗೌಡ ಅವರು ಯೆಲ್ಬುರ್ಗಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಕರ್ತವ್ಯ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ, ರಾಜಶೇಖರ್ ಪಟ್ಟಣದ ಅಂಗಡಿಯ ಬಳಿ ತನ್ನ ಬೈಕನ್ನು ನಿಲ್ಲಿಸಿ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ, ಅಪ್ರಾಪ್ತ ಮಹಾಂತೇಶ್ ಕುದರಿಕೋಟಗಿ, ರಾಜಶೇಖರ್‌ಗೆ ಆಟೋ ಡಿಕ್ಕಿ ಹೊಡೆಸಿದ್ದ ಈ ವೇಳೆ ಅವರು ಗಂಭೀರವಾಗಿ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದರು.

ನ್ಯಾಯಾಲಯದ ತೀರ್ಪಿನಿಂದ ಸಂತೋಷವಾಗಿದ್ದೇವೆ ಮತ್ತು ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಆದರೆ ನಮ್ಮ ಸ್ನೇಹಿತ ಹಿಂತಿರುಗುವುದಿಲ್ಲ. ಅವರು ಕುಟುಂಬದ ಏಕೈಕ ಜೀವನೋಪಾಯದಾರರಾಗಿದ್ದರು. ನ್ಯಾಯಾಲಯದ ತೀರ್ಪು ಅಪ್ರಾಪ್ತರಿಗೆ ತಮ್ಮ ವಾಹನಗಳನ್ನು ನೀಡುವ ಎಲ್ಲಾ ಪೋಷಕರಿಗೆ ಬಲವಾದ ಸಂದೇಶ ರವಾನಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ರಾಜಶೇಖರ್ ಅವರ ಸ್ನೇಹಿತ ತಿಳಿಸಿದ್ದಾರೆ,

ಇಷ್ಟು ದೊಡ್ಡ ಮೊತ್ತವನ್ನು ಹೇಗೆ ಹೊಂದಿಸುತ್ತೇವೆ ಎಂದು ನಮಗೆ ತಿಳಿದಿಲ್ಲ. ನಾನು ಕೆಲವು ವಕೀಲರೊಂದಿಗೆ ಸಮಾಲೋಚಿಸುತ್ತೇನೆ. ಆರೋಪಿ ಅಪ್ರಾಪ್ತ ವಯಸ್ಕನಾಗಿರುವುದರಿಂದ ವಿಮಾ ಕಂಪನಿಗಳು ಪ್ರಕರಣವನ್ನು ಪರಿಗಣಿಸುವುದಿಲ್ಲ ಎಂದು ವಕೀಲರು ಹೇಳುತ್ತಿದ್ದಾರೆ. ನಮಗೆ ಲಕ್ಷಗಳ ಬಗ್ಗೆ ಯೋಚಿಸಲು ಸಾಧ್ಯವಿಲ್ಲ ಮತ್ತು ಈಗ 1.41 ಕೋಟಿ ರೂ. ಪಾವತಿಸಲು ಕೇಳಲಾಗಿದೆ ಎಂದು ಅಪ್ರಾಪ್ತ ಬಾಲಕನ ತಂದೆ ಆಟೋ ಚಾಲಕ ಮಾತಂಗಪ್ಪ ಅಳಲು ತೋಡಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com