ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರಿಗೆ ನೀರು, ಕರೆಂಟ್ ಕಟ್: ಪಾಲಿಕೆ ಶಿಸ್ತು ಕ್ರಮಕ್ಕೆ BWSSB- BESCOM ಸಾಥ್!

ಉತ್ತರ ಬೆಂಗಳೂರಿನಲ್ಲಿ ಒಂಬತ್ತು ಮಂದಿಯನ್ನು ಬಲಿ ತೆಗೆದುಕೊಂಡ ದುರಂತದ ನಂತರ, ಏಳು ದಿನಗಳ ಒಳಗೆ ನಿಯಮ ಉಲ್ಲಂಘಿಸಿದ ಕಟ್ಟಡಕ್ಕೆ ಶಾಶ್ವತವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಬೆಸ್ಕಾಂ ಗೆ ಪಾಲಿಕೆ ನವೆಂಬರ್ 28, 2024 ರಂದು ಸುತ್ತೋಲೆ ಹೊರಡಿಸಿತು.
ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರಿಗೆ ನೀರು, ಕರೆಂಟ್ ಕಟ್: ಪಾಲಿಕೆ ಶಿಸ್ತು ಕ್ರಮಕ್ಕೆ BWSSB- BESCOM ಸಾಥ್!
Updated on

ಬೆಂಗಳೂರು: ಕಟ್ಟಡ ನಿರ್ಮಾಣ ಮಾಡುವಾಗ ನಿಯಮ ಉಲ್ಲಂಘಿಸಿದವರ ವಿರುದ್ಧ ಬಿಬಿಎಂಪಿ ಕೈಗೊಳ್ಳುವ ಶಿಸ್ತು ಕ್ರಮಕ್ಕೆ ಬೆಂಗಳೂರು ಜಲಮಂಡಳಿ ಮತ್ತು ಬೆಸ್ಕಾಂ ಸಾಥ್ ಕೊಡಲು ಮುಂದಾಗಿವೆ.

ಅಕ್ಟೋಬರ್ 22, 2024 ರಂದು ಒಂಬತ್ತು ಜನರ ಸಾವಿಗೆ ಕಾರಣವಾದ ಬಾಬುಸಾಬ್ ಪಾಳ್ಯದಲ್ಲಿ ಕಟ್ಟಡದ ಕುಸಿತ ಪ್ರಕರಣ ನಂತರ, ನಿಯಮ ಉಲ್ಲಂಘಿಸಿರುವ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ ವಿದ್ಯುತ್ ಮತ್ತು ಒಳಚರಂಡಿ ಸಂಪರ್ಕಗಳನ್ನು ಕಡಿತಗೊಳಿಸುವಂತೆ ಲೋಕಾಯುಕ್ತರು ಸೂಚಿಸಿದ್ದರು.

ಉತ್ತರ ಬೆಂಗಳೂರಿನಲ್ಲಿ ಒಂಬತ್ತು ಮಂದಿಯನ್ನು ಬಲಿ ತೆಗೆದುಕೊಂಡ ದುರಂತದ ನಂತರ, ಏಳು ದಿನಗಳ ಒಳಗೆ ನಿಯಮ ಉಲ್ಲಂಘಿಸಿದ ಕಟ್ಟಡಕ್ಕೆ ಶಾಶ್ವತವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಬೆಸ್ಕಾಂ ಗೆ ಪಾಲಿಕೆ ನವೆಂಬರ್ 28, 2024 ರಂದು ಸುತ್ತೋಲೆ ಹೊರಡಿಸಿತು.

ಸರ್ವೋಚ್ಚ ನ್ಯಾಯಾಲಯವು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಎಲ್ಲಾ ಹೈಕೋರ್ಟ್‌ಗಳ ರಿಜಿಸ್ಟ್ರಾರ್‌ಗಳಿಗೆ 12 ನಿರ್ದಿಷ್ಟ ನಿರ್ದೇಶನಗಳೊಂದಿಗೆ ಆದೇಶವನ್ನು ನೀಡಿದೆ, ನಿರ್ಮಾಣ ಹಂತದ ಕಟ್ಟಡಗಳಿಗೆ ಆಕ್ಯುಪೆನ್ಸಿ ಪ್ರಮಾಣಪತ್ರಗಳಿಲ್ಲದೆ ಯಾವುದೇ ಸೇವೆಗಳನ್ನು ಒದಗಿಸಬಾರದು ಎಂದು ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ತ್ವರಿತವಾಗಿ ಅನುಸರಿಸದ ಯಾವುದೇ ಅಧಿಕಾರಿಯನ್ನು ಸ್ಥಳೀಯ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದೆ.

ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರಿಗೆ ನೀರು, ಕರೆಂಟ್ ಕಟ್: ಪಾಲಿಕೆ ಶಿಸ್ತು ಕ್ರಮಕ್ಕೆ BWSSB- BESCOM ಸಾಥ್!
ರಸ್ತೆ ಬದಿಗಳಲ್ಲಿ ಅಕ್ರಮವಾಗಿ ಕಸ ಸುರಿಯುತ್ತಿದ್ದ 930 ಕಡೆಗಳಲ್ಲಿ ತೆರವು, ಸ್ವಚ್ಛಗೊಳಿಸಿದ ಬಿಬಿಎಂಪಿ

ಹಲವಾರು ಬಾರಿ ಮನವಿ ಮಾಡಿಗದ ನಂತರ ಬೆಸ್ಕಾಂ ಅಂತಿಮವಾಗಿ 2025ರ ಏಪ್ರಿಲ್ 4 ರಂದು ಸುತ್ತೋಲೆ ಹೊರಡಿಸಿತು, ಸೇವಾ ಸಂಪರ್ಕಕ್ಕಾಗಿ ಪ್ರಾರಂಭ ಪ್ರಮಾಣಪತ್ರ ಮತ್ತು ಆಕ್ಯುಪೆನ್ಸಿ ಪ್ರಮಾಣಪತ್ರ (CC/OC) ಅವಶ್ಯಕತೆಗಳನ್ನು ಕಡ್ಡಾಯಗೊಳಿಸಿತು ಬಿಬಿಎಂಪಿ ವಿನಂತಿಗಳನ್ನು ತ್ವರಿತವಾಗಿ ಅನುಸರಿಸಲು ಸ್ಥಳೀಯ ಕಚೇರಿಗಳಿಗೆ ನಿರ್ದೇಶನ ನೀಡಿದೆ ಎಂದು ಬೆಂಗಳೂರು ಒಕ್ಕೂಟದ ಸಂಚಾಲಕ ರಾಜಗೋಪಾಲನ್ ಹೇಳಿದರು.

ನೀರು ಮತ್ತು ಒಳಚರಂಡಿ ಸಂಪರ್ಕ ಪಡೆಯಲು ಬಿಬಿಎಂಪಿಯಿಂದ ಕಡ್ಡಯಾವಾಗಿ CC/OC ತರಬೇಕು ಎಂದು ಸುತ್ತೋಲೆಯನ್ನು ಹೊರಡಿಸಲಿದೆ ಎಂದು BWSSB ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿಯಮ ಉಲ್ಲಂಘನೆ ಮತ್ತು ಬಿಬಿಎಂಪಿ ಕಾಯ್ದೆ 2020ಕ್ಕೆ ವಿರುದ್ಧವಾಗಿರುವ ಅನಧಿಕೃತ ಮಹಡಿಗಳನ್ನು ಹೊಂದಿರುವ ಕಟ್ಟಡಗಳ ಮೇಲೆ ಬಿಬಿಎಂಪಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು.. ಅನೇಕ ಸಂದರ್ಭಗಳಲ್ಲಿ, ಕಟ್ಟಡಕ್ಕೆ ಯಾವುದೇ ಪ್ಲಾನ್ ಮಂಜೂರಾತಿ ಇಲ್ಲ. ಬಿಬಿಎಂಪಿ ನೋಟಿಸ್ ನೀಡಿ ಸಂಪರ್ಕ ಕಡಿತಗೊಳಿಸುವಂತೆ ಹೇಳಿದರೆ ನಾವು ಮಾಡುತ್ತೇವೆ ಎಂದಿದ್ದಾರೆ.

ಒಂದು ವೇಳೆ ಬಿಬಿಎಂಪಿ ಕೂಡ ಹಾಗೆ ಮಾಡಲು ವಿಫಲವಾದರೆ, ಸಂಪರ್ಕಗಳನ್ನು ನೀಡುವ ಮೊದಲು, ನಾವು ಮಾಲೀಕರಿಗೆ ಸಿಸಿ / ಒಸಿ ಉತ್ಪಾದಿಸಲು ಕೇಳುತ್ತೇವೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com