Al Qaeda Arrest: ಮಾಹಿತಿ ನೀಡದೆ SOP ಉಲ್ಲಂಘಿಸಿದೆ ಗುಜರಾತ್ ATS- ಗೃಹ ಸಚಿವ ಪರಮೇಶ್ವರ್

ಬೆಂಗಳೂರಿನಲ್ಲಿ ಸ್ಲೀಪರ್ ಸೆಲ್‌ಗಳು ಸಕ್ರಿಯವಾಗಿವೆ ಎಂದು ಈ ಹಿಂದೆ ವರದಿಗಳಿದ್ದವು. ತನಿಖಾ ಸಂಸ್ಥೆಗಳು ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದವು. ಈ ರೀತಿ ಸ್ಲೀಪರ್ ಸೆಲ್‌ ಎಲ್ಲ ರಾಜ್ಯಗಳಲ್ಲಿದ್ದಾರೆ, ಯಾವ್ಯಾವುದೋ ಕಾರಣಕ್ಕೆ ಅವರ ಗುರುತು ಸಿಗಲ್ಲ.
Arrested women
ಬಂಧಿತ ಮಹಿಳೆ.
Updated on

ಬೆಂಗಳೂರು: ಅಲ್-ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ಆರೋಪದ ಮೇಲೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಹೆಬ್ಬಾಳದಲ್ಲಿ ಮಹಿಳೆಯೋರ್ವಳನ್ನು ಬಂಧನಕ್ಕೊಳಪಡಿಸಿದೆ. ಆದರೆ, ತನಿಖಾ ಸಂಸ್ಥೆ ಈ ಬಗ್ಗೆ ನಮ್ಮೊಂದಿಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಗುರುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಶಮಾ ಪರ್ವೀನ್ ಅನ್ಸಾರಿ ಅವರನ್ನು ಗುಜರಾತ್ ಎಟಿಎಸ್ ಮಂಗಳವಾರ ಬಂಧಿಸಿದೆ. ಶಮಾ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, ಭಯೋತ್ಪಾದಕ ಕಾಯ್ದೆ ಮತ್ತು ಬಿಎನ್‌ಎಸ್‌ನ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. "ಅಲ್-ಖೈದಾ ಜೊತೆಗೆ ನಂಟು ಹೊಂದಿದ್ದಾರೆಂದು ಹೇಳಲಾಗಿರುವ ಈ ಮಹಿಳೆ ಕರ್ನಾಟಕದವರಲ್ಲ. ಆಕೆಯನ್ನು ಬಂಧಿಸಿದ ಗುಜರಾತ್ ಎಟಿಎಸ್ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲೇ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸ್ಲೀಪರ್ ಸೆಲ್‌ಗಳು ಸಕ್ರಿಯವಾಗಿವೆ ಎಂದು ಈ ಹಿಂದೆ ವರದಿಗಳಿದ್ದವು. ತನಿಖಾ ಸಂಸ್ಥೆಗಳು ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದವು. ಈ ರೀತಿ ಸ್ಲೀಪರ್ ಸೆಲ್‌ ಎಲ್ಲ ರಾಜ್ಯಗಳಲ್ಲಿದ್ದಾರೆ, ಯಾವ್ಯಾವುದೋ ಕಾರಣಕ್ಕೆ ಅವರ ಗುರುತು ಸಿಗಲ್ಲ ಎಂದು ತಿಳಿಸಿದರು.

ಮೈಸೂರಿನಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ಸ್‌ ತಯಾರಿಕಾ ಘಟಕ ಪತ್ತೆ ಪ್ರಕರಣ ಕುರಿತು ಮಾತನಾಡಿ, ಆರೋಪಿಗಳು 20 ದಿನಗಳ ಹಿಂದೆ ಮೈಸೂರಿಗೆ ಆಗಮಿಸಿದ್ದಾರೆ. ಓರ್ವ ಆರೋಪಿ ಮುಂಬೈನಲ್ಲಿ ಸಿಕ್ಕಿಬಿದ್ದ ಬಳಿಕ ಈತ ನೀಡಿದ ಸುಳಿವಿನ ಆಧಾರದ ಮೇಲೆ ಇತರರ ಬಂಧನವಾಗಿದೆ. ನಮ್ಮ ರಾಜ್ಯದಲ್ಲಿಯೂ ಸಹ, ಇಂತಹ ಪ್ರಕರಣಗಳು ಬೆಳಕಿಗೆ ಬಂದಾಗ, ನಮ್ಮ ಪೊಲೀಸರೂ ಕೂಡ ಆರೋಪಿಗಳನ್ನು ಬಂಧಿಸಲು ಇತರ ರಾಜ್ಯಗಳಿಗೆ ಹೋಗುತ್ತಾರೆ. ಇದು ದೇಶಾದ್ಯಂತ ಅನುಸರಿಸಲಾಗುವ ಪ್ರಮಾಣಿತ ಕಾರ್ಯವಿಧಾನವಾಗಿದೆ ಎಂದರು.

Arrested women
Al Qaeda ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು: ಗುಜರಾತ್ ATS ಕಾರ್ಯಾಚರಣೆ; ಬೆಂಗಳೂರಿನಲ್ಲಿ ಮಹಿಳೆ ಬಂಧನ

ಅಲ್-ಖೈದಾ ಕಾರ್ಯಕರ್ತನ ಬಂಧನದ ಬಗ್ಗೆ ಗುಜರಾತ್ ಎಟಿಎಸ್ ಮಾಹಿತಿ ಹಂಚಿಕೊಂಡಿಲ್ಲ: ಇದು ಎಸ್‌ಒಪಿ ಉಲ್ಲಂಘನೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.

ಬೆಂಗಳೂರು: ಅಲ್-ಖೈದಾ ಜೊತೆ ಸಂಪರ್ಕ ಹೊಂದಿರುವ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಹೆಬ್ಬಾಳದ 30 ವರ್ಷದ ಮಹಿಳೆಯನ್ನು ಬಂಧಿಸಿದ ನಂತರ, ಗೃಹ ಸಚಿವ ಡಾ. ಜಿ. ಪರಮೇಶ್ವರ ಗುರುವಾರ ತನಿಖಾ ಸಂಸ್ಥೆ ಈ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ಹೇಳಿದ್ದಾರೆ.

ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಶಮಾ ಪರ್ವೀನ್ ಅನ್ಸಾರಿ ಅವರನ್ನು ಗುಜರಾತ್ ಎಟಿಎಸ್ ಮಂಗಳವಾರ ಬಂಧಿಸಿದೆ. ಶಮಾ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, ಭಯೋತ್ಪಾದಕ ಕಾಯ್ದೆ ಮತ್ತು ಬಿಎನ್‌ಎಸ್‌ನ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಲ್-ಖೈದಾ ಜಾಲದೊಂದಿಗೆ ಸಂಪರ್ಕ ಹೊಂದಿದೆಯೆಂದು ಹೇಳಲಾದ ಮಹಿಳೆ ಕರ್ನಾಟಕದವರಲ್ಲ. ಆಕೆಯನ್ನು ಬಂಧಿಸಿದ ಗುಜರಾತ್ ಎಟಿಎಸ್ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಬೆಂಗಳೂರಿನಲ್ಲಿ ಸ್ಲೀಪರ್ ಸೆಲ್‌ಗಳು ಸಕ್ರಿಯವಾಗಿವೆ ಎಂದು ಈ ಹಿಂದೆ ವರದಿಗಳಿದ್ದವು ಮತ್ತು ತನಿಖಾ ಸಂಸ್ಥೆಗಳು ಅವುಗಳನ್ನು ಕಂಡುಕೊಂಡಿವೆ" ಎಂದು ಸಚಿವರು ಹೇಳಿದರು.

Arrested women
ಗುಜರಾತ್: ವಡೋದರಾ ಬಳಿ ಗಂಭೀರಾ ಸೇತುವೆ ಕುಸಿತ; ಮೃತರ ಸಂಖ್ಯೆ 9ಕ್ಕೆ ಏರಿಕೆ; Video

MDMA ತಯಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರೋಪಿಗಳು ಸುಮಾರು 20 ದಿನಗಳ ಹಿಂದೆ ಮೈಸೂರಿಗೆ ಆಗಮಿಸಿದ್ದರು. ಆರೋಪಿಗಳಲ್ಲಿ ಒಬ್ಬ ಮುಂಬೈನಲ್ಲಿ ಸಿಕ್ಕಿಬಿದ್ದಾಗ, ಆ ಬಂಧನದ ಸುಳಿವುಗಳು ಇಲ್ಲಿನ ಪೊಲೀಸರನ್ನು ಮುನ್ನಡೆಸಿದವು. ನಮ್ಮ ರಾಜ್ಯದಲ್ಲಿಯೂ ಸಹ, ಇಂತಹ ಪ್ರಕರಣಗಳು ಬೆಳಕಿಗೆ ಬಂದಾಗ, ನಮ್ಮ ಪೊಲೀಸರು ಆರೋಪಿಗಳನ್ನು ಬಂಧಿಸಲು ಇತರ ರಾಜ್ಯಗಳಿಗೆ ಹೋಗುತ್ತಾರೆ. ಇದು ದೇಶಾದ್ಯಂತ ಅನುಸರಿಸಲಾಗುವ ಪ್ರಮಾಣಿತ ಕಾರ್ಯವಿಧಾನವಾಗಿದೆ" ಎಂದು ಸಚಿವರು ಹೇಳಿದರು.

ಸ್ಥಳೀಯ ಪೊಲೀಸರ ಬೆಂಬಲದೊಂದಿಗೆ ಗುಜರಾತ್ ಎಟಿಎಸ್ ಶಮಾ ಅವರ ಮನೆ ಮೇಲೆ ದಾಳಿ ನಡೆಸಿ ಹಲವಾರು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದೆ.

ಪದವೀಧರೆಯೂ ನಿರುದ್ಯೋಗಿಯೂ ಆಗಿದ್ದ ಶಮಾ, ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ತನ್ನ ಕಿರಿಯ ಸಹೋದರನೊಂದಿಗೆ ವಾಸಿಸುತ್ತಿದ್ದಳು. ಈಕೆ ಅಲ್-ಖೈದಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದು, ಮೂಲಭೂತವಾದಿ ಸಿದ್ಧಾಂತಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ್ಲಿ ಪೋಸ್ಟ್ ಮಾಡುತ್ತಿದ್ದಳು ಎಂದು ಆರೋಪಿಸಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಅಲ್-ಖೈದಾ ಉಗ್ರಗಾಮಿ ವೀಡಿಯೊಗಳನ್ನು ಹಂಚಿಕೊಂಡಿದ್ದಳು ಎಂದು ವರದಿಯಾಗಿದೆ.

ಇದಲ್ಲದೆ, ಜಿಹಾದಿ ವೀಡಿಯೊಗಳು ಮತ್ತು ಸಂದೇಶಗಳು ಸೇರಿದಂತೆ ಪ್ರಚೋದನಕಾರಿ ಮತ್ತು ಹಿಂಸಾತ್ಮಕ ವಿಷಯವನ್ನು ಹಂಚಿಕೊಳ್ಳುತ್ತಿದ್ದಳು ಎಂದು ತಿಳಿದುಬಂದಿದೆ.

ಈಕೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳನ್ನು ಹೊಂದಿದ್ದು, ಸುಮಾರು 10,000 ಫಾಲೋವರ್ಸ್ ಗಳನ್ನು ಹೊಂದಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com