Nanjangud: ವಿಚಾರಣೆಗೆ ಬಂದ ಪೊಲೀಸ್ ಎದುರು ಸೀರೆ ಬಿಚ್ಚಿ ಮಹಿಳೆ ಹೈಡ್ರಾಮಾ! Video

ನಂಜನಗೂಡಿನ ಶಿರಮಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದೂರೊಂದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಪೊಲೀಸ್ ಸಿಬ್ಬಂದಿ ಬಂದಿದ್ದರು.
Woman creates drama by removing saree in front of police
ಪೊಲೀಸರ ಎದುರೇ ಮಹಿಳೆ ಹೈಡ್ರಾಮಾ
Updated on

ನಂಜನಗೂಡು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಮನೆ ಬಳಿ ಬಂದ ಪೊಲೀಸ್ ಸಿಬ್ಬಂದಿ ಎದುರು ಮಹಿಳೆಯೊಬ್ಬರು ಸೀರೆ ಬಿಚ್ಚಿ ಹೈಡ್ರಾಮಾ ಮಾಡಿರುವ ಘಟನೆ ನಂಜನಗೂಡಿನಲ್ಲಿ ವರದಿಯಾಗಿದೆ.

ನಂಜನಗೂಡಿನ ಶಿರಮಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದೂರೊಂದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಪೊಲೀಸ್ ಸಿಬ್ಬಂದಿ ಬಂದಿದ್ದರು. ಈ ವೇಳೆ ಸಿಬ್ಬಂದಿ ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸದ ಮಹಿಳೆ ಬದಲಿಗೆ ತಾನೇ ಸೀರೆ ಬಿಚ್ಚಿಕೊಂಡು ಹೈಡ್ರಾಮಾ ಮಾಡಿದ್ದಾರೆ. ಅಲ್ಲದೆ ತನ್ನ ಸಂಬಂಧಿಕರಿಗೆ ಈ ವಿಡಿಯೋ ಸೆರೆ ಹಿಡಿಯುವಂತೆ ಹೇಳಿದ್ದಾರೆ.

ಪೊಲೀಸ್ ಸಿಬ್ಬಂದಿ ಎದುರು ಸೀರೆ ಬಿಚ್ಚಿ ಅನುಚಿತವಾಗಿ ವರ್ತಿಸಿರುವ ಮಹಿಳೆಯನ್ನು ರತ್ನಮ್ಮ ಎಂದು ಹೇಳಲಾಗಿದೆ. ಮಹಿಳೆಯ ಈ ಆಘಾತಕಾರಿ ವರ್ತನೆ ವಿಡಿಯೋ ಇದೀಗ ವೈರಲ್ ಆಗಿದೆ.

Woman creates drama by removing saree in front of police
ನಿಶ್ಚಿತ್‌ ಕೊಲೆ ಪ್ರಕರಣ; ಬಾಲಕನ ಕುಟುಂಬದ ಮಾಹಿತಿಯನ್ನು ಅಪರಾಧಿಗಳಿಗೆ ಕಳುಹಿಸುತ್ತಿದ್ದದ್ದು ಯಾರು?

ಏನಿದು ಪ್ರಕರಣ?

ಶಿರಮಳ್ಳಿ ಗ್ರಾಮದಲ್ಲಿ ರತ್ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹೇರಿದ್ದಾರೆಂದು ಆರೋಪಿಸಲಾಗಿತ್ತು. ಈ ಸಂಬಂಧ ರತ್ನಮ್ಮ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ನೋವು ಹೇಳಿಕೊಂಡಿದ್ದರು. ಅಲ್ಲದೆ ಎಸ್ಪಿ ಕಚೇರಿಯಲ್ಲೂ ಸಹ ದೂರು ನೀಡಿದ್ದರು. ಈ ವಿಚಾರವಾಗಿ ಹುಲ್ಲಹಳ್ಳಿ ಠಾಣೆ ಪೊಲೀಸ್ ಸಿಬ್ಬಂದಿ ಮಾಹಿತಿ ಪಡೆಯಲು ರತ್ನಮ್ಮ ಮನೆಗೆ ಭೇಟಿ ಕೊಟ್ಟಿ ಸಮಯದಲ್ಲಿ ಮಹಿಳೆ ರತ್ನಮ್ಮ ಈ ರೀತಿಯ ಹುಚ್ಚಾಟ ಪ್ರದರ್ಶಿಸಿದ್ದಾರೆ.

ಮೂಲಗಳ ಪ್ರಕಾರ ರತ್ನಮ್ಮ ವಿರುದ್ದವೂ ಹುಲ್ಲಹಳ್ಳಿ ಹಾಗೂ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಕೆಲ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. ಈ ಕುರಿತು ವಿಜಯ್ ಕುಮಾರ್ ಹಿರೇಮಠ್ ಎನ್ನುವವರು ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com