ನಿಶ್ಚಿತ್‌ ಕೊಲೆ ಪ್ರಕರಣ; ಬಾಲಕನ ಕುಟುಂಬದ ಮಾಹಿತಿಯನ್ನು ಅಪರಾಧಿಗಳಿಗೆ ಕಳುಹಿಸುತ್ತಿದ್ದದ್ದು ಯಾರು?

ಈ ಸಂಬಂಧ ಆರೋಪಿಗಳಾದ ಶಿವಪ್ರಕಾಶ್ (25) ಮತ್ತು ಗೋಪಿ (27) ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಹಿಂದಿನವರು ಮೃತ ಬಾಲಕನ ತಂದೆಯ ಹಿಂದಿನ ಚಾಲಕನಾಗಿದ್ದು, ಆತ ಬಾಲಕನಿಗೂ ಚಿರಪರಿಚಿತನಾಗಿದ್ದ.
Nischith
ಕೊಲೆಯಾದ ಬಾಲಕ ನಿಶ್ಚಿತ್‌
Updated on

ಬೆಂಗಳೂರು: ಬೆಂಗಳೂರಿನಲ್ಲಿ ಹದಿಹರೆಯದ ಬಾಲಕನನ್ನು ಸುಲಿಗೆಗಾಗಿ ಅಪಹರಿಸಿ ಹತ್ಯೆಗೈದ ಘಟನೆ ನಗರದಲ್ಲಿ ಆಘಾತವನ್ನುಂಟು ಮಾಡಿದೆ. ಏಕೆಂದರೆ ಕರ್ನಾಟಕ "ಸುಲಿಗೆ ಮತ್ತು ಕೊಲೆಗಾಗಿ ಅಪಹರಣ ಸಂಚಿಗೆ ಹೆಸರಾಗಿಲ್ಲ ಎಂದು ಕೆಲವು ನಿವೃತ್ತ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ಆರೋಪಿಗಳಾದ ಶಿವಪ್ರಕಾಶ್ (25) ಮತ್ತು ಗೋಪಿ (27) ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಹಿಂದಿನವರು ಮೃತ ಬಾಲಕನ ತಂದೆಯ ಹಿಂದಿನ ಚಾಲಕನಾಗಿದ್ದು, ಆತ ಬಾಲಕನಿಗೂ ಚಿರಪರಿಚಿತನಾಗಿದ್ದ ಎಂದು ಹೇಳಲಾಗುತ್ತಿದೆ. ಬುಧವಾರ ಹುಳಿಮಾವುನಲ್ಲಿ ಟ್ಯೂಷನ್ ತರಗತಿಯಿಂದ ಮನೆಗೆ ಮರಳುತ್ತಿದ್ದಾಗ ಅಪಹರಣಕ್ಕೊಳಗಾದ ಕೆಲವೇ ಗಂಟೆಗಳ ನಂತರ 13 ವರ್ಷದ ಶಾಲಾ ಬಾಲಕ ನಿಶ್ಚಿತ್ ನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಬಾಲಕ ತಮ್ಮ ಗುರುತನ್ನು ಕಂಡುಹಿಡಿಯಬಹುದು ಅಥವಾ ಆತನನ್ನು ಸೆರೆಯಾಗಿ ಇಟ್ಟುಕೊಳ್ಳಲು ಯಾವುದೇ ಸ್ಥಳವಿಲ್ಲದೆ ಅಪರಾಧಿಗಳು ಕೊಂದಿರಬಹುದು. ಬೇರೆ ಆಯ್ಕೆ ಇಲ್ಲದೆ ಬಾಲಕನನ್ನು ಕೊಂದಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹೆಚ್ಚಿನ ಕೇಸ್ ಗಳಲ್ಲಿ ಮೃತನ ಗುರುತು ಮರೆಮಾಚಲು ಕೊಂದ ನಂತರ ದೇಹವನ್ನು ಸುಟ್ಟು ಹಾಕಲಾಗುತ್ತದೆ. ವೃತ್ತಿಪರ ಅಪಹರಣಕಾರರು ತಮ್ಮ ನೆಟ್‌ವರ್ಕ್‌ನ ಭಾಗವಾಗಿ ದರೋಡೆಕೋರರನ್ನು ಹೊಂದಿರುತ್ತಾರೆ. ಅವರ ನೆರವಿನಿಂದ ಅವರು ತಮ್ಮ ಒತ್ತೆಯಾಳುಗಳನ್ನು ಒಂದು ಅಜ್ಞಾತ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುತ್ತಾರೆ. ಇದು ಪೊಲೀಸರಿಗೆ ಬೇಗ ಪ್ರಕರಣ ಬೇಧಿಸುವಲ್ಲಿ ಸವಾಲು ಉಂಟು ಮಾಡಲಿದ್ದು, ಹೆಚ್ಚಿನ ದಿನವೂ ಬೇಕಾಗುತ್ತದೆ. ತಮ್ಮ ನೆಟ್ ವರ್ಕ್ ಸಮರ್ಥವಾಗಿದಷ್ಟು ಬೇಡಿಕೆಯಷ್ಟು ಹಣ ಪಡೆಯುವವರಿಗೂ ಈ ರೀತಿ ಮಾಡುತ್ತಿರುತ್ತಾರೆ ಎಂದು ಅನುಭವಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಕಿಡ್ನಾಪ್, ಸುಲಿಗೆಗಾಗಿ ಮೃತ ಬಾಲಕನ ಪೋಷಕರಿಗೆ ಕರೆ ಮತ್ತು ತ್ವರಿತ ಗತಿಯಲ್ಲಿ ಕೊಲೆ ಮಾಡಿರುವುದನ್ನು ನೋಡಿದರೆ ಕೊನೆಯಲ್ಲಿ ಆತುರ ಮತ್ತು ಗಾಬರಿಯಿಂದ ಮಾಡಿರುವ ಕೊಲೆಯಂತೆ ಕಂಡುಬರುತ್ತದೆ. ಬಾಲಕನ ಪೋಷಕರು ಹಾಗೂ ಅವರ ಚಲನವಲನಗಳ ಬಗ್ಗೆ ನೈಜ ಸಮಯದಲ್ಲಿ ದುಷ್ಕರ್ಮಿಗಳಿಗೆ ಮಾಹಿತಿ ರವಾನಿಸುತ್ತಿದ್ದ ಮಾರ್ಗ ಇರುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಏನಾಗುತ್ತಿದೆ ಎಂಬುದು ಅವರಿಗೆ ನಿಖರವಾಗಿ ತಿಳಿದಿದೆ. ಹೆಚ್ಚಿನ ಮಕ್ಕಳಿಗೆ ಸಂಬಂಧಿಸಿದ ಅಪರಾಧಗಳು ಗೊತ್ತಿರುವ ವ್ಯಕ್ತಿಗಳಿಂದ ನಡೆಯುತ್ತವೆ ಎಂದು ಅಧಿಕಾರಿಯೊಬ್ಬರು ಹೇಳಿದರು.

Nischith
ಬಾಲಕ ನಿಶ್ಚಿತ್‌ ಕೊಲೆ ಪ್ರಕರಣ: ಅಪಹರಣಕಾರರ ಕಾಲಿಗೆ ಗುಂಡೇಟು- ಇಬ್ಬರ ಬಂಧನ; ಸ್ಪೇರ್ ಡ್ರೈವರ್ ಮಾಸ್ಟರ್ ಮೈಂಡ್; Video

"ಎರಡನೆಯ ಪ್ರಮುಖ ಅಂಶವೆಂದರೆ ಸುಲಿಗೆಗಾಗಿ ಹಾಕಿದ್ದ ರೂ. 5 ಲಕ್ಷದ ಹಣದ ಬೇಡಿಕೆ. ಸುಲಭವಾಗಿ ಹಣವನ್ನು ಪಡೆಯಲು ದುಷ್ಕರ್ಮಿಗಳು ಅಪಹರಣ ಮಾಡಿರಬಹುದು. ಯಾರಾದರೂ ಕುಟುಂಬದವರಿಗೆ ತಿಳಿದಿರುವ ಅಥವಾ ಹುಡುಗನ ಚಲನವಲನಗಳ ಬಗ್ಗೆ ಗೊತ್ತಿರುವವರು ಅಪರಾಧ ಮಾಡಲು ಕ್ರಿಮಿನಲ್ ಗಳನ್ನು ಕರೆತಂದಿರಬಹುದು ಎಂದು ಮತ್ತೋರ್ವ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com