Koppal: ಅನೈತಿಕ ಸಂಬಂಧ; ಲವರ್ ಜೊತೆ ಸೇರಿ ಪತಿಯನ್ನು ಹತ್ಯೆಗೈದ ಪತ್ನಿ ಅಂದರ್; ಮಕ್ಕಳು ಅನಾಥ
ಕೊಪ್ಪಳ: ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಪ್ರಿಯಕರನ ಜೊತೆಗೆ ಸೇರಿಕೊಂಡು ಪತ್ನಿಯೇ ತನ್ನ ಪತಿಯನ್ನು ಹತ್ಯೆ ಮಾಡಿರುವ ಘಟನೆ ಕೊಪ್ಪಳ ತಾಲೂಕಿನ ಬೂದಗುಂಪ ಗ್ರಾಮದಲ್ಲಿ ನಡೆದಿದೆ.
ದ್ಯಾಮಣ್ಣ ವಜ್ರಬಂಡಿ (40) ಹತ್ಯೆಗೊಳಗಾದ ವ್ಯಕ್ತಿ. ಆರೋಪಿಗಳಾದ ದ್ಯಾಮಣ್ಣನ ಪತ್ನಿ ನೇತ್ರಾವತಿ ಹಾಗೂ ಆಕೆಯ ಪ್ರಿಯಕರ ಸೋಮಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ದ್ಯಾಮಣ್ಣ ಹಾಗೂ ನೇತ್ರಾವತಿ ದಂಪತಿಗೆ ಮೂವರು ಮಕ್ಕಳಿದ್ದಾರೆ. ಇದೀಗ ತಂದೆ ಕಳೆದುಕೊಂಡು, ತಾಯಿ ಜೈಲು ಸೇರಿದ್ದರಿಂದ ಮಕ್ಕಳು ಅನಾಥರಾಗಿದ್ದಾರೆ.
ದ್ಯಾಮಣ್ಣ ವಜ್ರಬಂಡಿ (40) ಹತ್ಯೆಗೊಳಗಾದ ವ್ಯಕ್ತಿ. ಆರೋಪಿಗಳಾದ ದ್ಯಾಮಣ್ಣನ ಪತ್ನಿ ನೇತ್ರಾವತಿ ಹಾಗೂ ಆಕೆಯ ಪ್ರಿಯಕರ ಸೋಮಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ದ್ಯಾಮಣ್ಣ ಹಾಗೂ ನೇತ್ರಾವತಿ ದಂಪತಿಗೆ ಮೂವರು ಮಕ್ಕಳಿದ್ದಾರೆ. ಇದೀಗ ತಂದೆ ಕಳೆದುಕೊಂಡು, ತಾಯಿ ಜೈಲು ಸೇರಿದ್ದರಿಂದ ಮಕ್ಕಳು ಅನಾಥರಾಗಿದ್ದಾರೆ.
ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?
ಅಂದಹಾಗೆ, ಕೊಪ್ಪಳ ತಾಲ್ಲೂಕಿನ ಕೆಂಚನ ದೋಣಿ ತಾಂಡಾದ ಜಮೀನಿನಲ್ಲಿ ಜುಲೈ 26 ರಂದು ಸುಟ್ಟು ಅರೆಬೆಂದ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿತ್ತು. ಬಳಿಕ ಜಮೀನಿನ ಮಾಲೀಕ ಮುನಿರಾಬಾದ್ ಪೊಲೀಸ್ ಠಾಣೆ ನೀಡಿದ್ದರು. ಬಳಿಕ ಪೊಲೀಸ್ ತನಿಖೆ ವೇಳೆ ದ್ಯಾಮಣ್ಣನ ಮೃತದೇಹ ಎಂಬುದು ಗೊತ್ತಾಗಿದೆ.
ತಾಲೂಕಿನ ಕಾಮನೂರು ಗ್ರಾಮದ ಸೋಮಪ್ಪ ಕುರುಬಡಗಿ ಹಾಗೂ ದ್ಯಾಮಣ್ಣನ ಪತ್ನಿ ನೇತ್ರಾವತಿ ಸೇರಿಕೊಂಡು ಕೊಲೆ ಮಾಡಿದ್ದಾರೆ ಎನ್ನುವುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ಧಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪತಿಯನ್ನು ಪರಲೋಕಕ್ಕೆ ಕಳುಹಿಸಿ ನಾಗರ ಪಂಚಮಿ ಆಚರಿಸಿದ್ದ ಹಂತಕಿ: ಜುಲೈ 25 ರಂದು ಗ್ಯಾರೇಜ್ ವೊಂದರಿಂದ ರಾಡ್ ತಂದಿದ್ದ ಸೋಮಪ್ಪ, ದ್ಯಾಮಣನನ್ನು ಹೊಡೆದು ಕೊಲೆ ಮಾಡಿದ್ದಾನೆ. ಬೈಕ್ ಮೇಲೆ ಮೃತದೇಹ ತೆಗೆದುಕೊಂಡು ಹೋಗಿದ್ದು, ಗುರುತು ಸಿಗದ ಹಾಗೆ ಮೃತದೇಹ ಸುಟ್ಟು ಹಾಕಲಾಗಿದೆ. ಅತ್ತ ಗಂಡ ಹೆಣವಾಗಿದ್ದರೆ ಇತ್ತ ಮನೆಯಲ್ಲಿ ನಾಗರ ಪಂಚಮಿ ಹಬ್ಬ ಆಚರಿಸಿದ್ದ ನೇತ್ರಾವತಿ, ಪತಿ ಧರ್ಮಸ್ಥಳಕ್ಕೆ ಹೋಗಿದ್ದಾರೆ ಎಂದು ಮನೆಯವರಿಗೆ ನಂಬಿಸಿದ್ದಾಳೆ. ಕೊನೆಗೆ ಅನುಮಾನಗೊಂಡ ದ್ಯಾಮಣ್ಣ ಸಹೋದರರರು ಪೊಲೀಸರಿಗೆ ದೂರು ನೀಡಿದ್ದರು.
ದ್ಯಾಮಪ್ಪ ಅತಿಯಾದ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ