ಜೀವಾವಧಿ ಶಿಕ್ಷೆ: ಪ್ರಜ್ವಲ್‌ ಎಡವಿದ್ದೆಲ್ಲಿ..? ಡಿಜಿಟಲ್-ವೈಜ್ಞಾನಿಕ ಪುರಾವೆಗಳಿಂದ ಆರೋಪ ಸಾಬೀತು; ಮುಳುವಾಯ್ತ ಅತ್ಯಾಚಾರ ಎಸಗಿದ್ದ ವೀಡಿಯೋ..!

ಸೋರಿಕೆಯಾಗಿದ್ದ ಇತರೆ ವಿಡಿಯೋಗಳಲ್ಲಿದ್ದ ದೇಹಗಳ ಭಾಗಗಳು, ಪ್ರಸ್ತುತ ಅಪರಾಧ ಸಾಬೀತಾಗಿರುವ ಪ್ರಕರಣದ ವಿಡಿಯೋದಲ್ಲಿದ್ದ ದೇಹದ ಭಾಗಗಳೊಂದಿಗೆ ಜೋಡಿಸಿ, ಗುರ್ತಿಸಲು ವಿಧಿವಿಜ್ಞಾನ ಸಾಧನಗಳನ್ನು ಬಳಕೆ ಮಾಡಲಾಯಿತು.
Prajwal Revanna sheds tears in the courtroom
ಪ್ರಜ್ವಲ್ ರೇವಣ್ಣ
Updated on

ಬೆಂಗಳೂರು: ಅತ್ಯಾಚಾರಕ್ಕೆ ಸಂಬಂಧಿಸಿದ ಒಂದು ಪ್ರಕರಣದಲ್ಲಿ ಅಪರಾಧಿ ಪ್ರಜ್ವಲ್‌ ರೇವಣ್ಣ ಅವರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದ್ದು, ತನಿಖಾ ಹಂತದಲ್ಲಿ ಸಂತ್ರಸ್ತ ಮಹಿಳೆ ದಿಟ್ಟವಾಗಿ ನಿಂತಿದ್ದು ಶಿಕ್ಷೆ ಖಚಿತಪಡಿಸಲು ನೆರವಾಯಿತು ಎಂದು ವಿಶೇಷ ತನಿಖಾ ದಳದ ಮುಖ್ಯಸ್ಥ ಎಡಿಜಿಪಿ ಬಿ.ಕೆ.ಸಿಂಗ್ ಅವರು ಶನಿವಾರ ಹೇಳಿದರು.‌

ಆಗಸ್ಟ್ 1 ರಂದು ವಿಶೇಷ ನ್ಯಾಯಾಲಯವು ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ಅವರನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತು.

ಶಿಕ್ಷೆ ವಿಧಿಸಿದ ಕೂಡಲೇ, TNIE ಜೊತೆಗೆ ಮಾತನಾಡಿದ ಬಿ.ಕೆ.ಸಿಂಗ್ ಅವರು, ದೂರುದಾರ ಮಹಿಳೆಯ ಹೇಳಿಕೆಯನ್ನು ದೃಢೀಕರಿಸಲು ಜೈವಿಕ, ತಾಂತ್ರಿಕ, ಡಿಜಿಟಲ್, ಮೊಬೈಲ್ ಮತ್ತು ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಲಾಯಿತು. ಬಳಿಕ ನಮಗೆ ಸಿಕ್ಕ ಸಾಕ್ಷಿಗಳು, ತಜ್ಞರ ವರದಿಯನ್ನು ಆರೋಪಪಟ್ಟಿಯಲ್ಲಿ ಸೇರಿಸಲಾಗಿತ್ತು.

ಅತ್ಯಾಚಾರದ ವಿಡಿಯೋಗಳನ್ನು ಇಟ್ಟುಕೊಂಡು ಪ್ರಜ್ವಲ್ ಸಂತ್ರಸ್ತರ ಮಹಿಳೆಯರನ್ನು ಬೆದರಿಸುತ್ತಿದ್ದ. ವಿಡಿಯೋ ಮೂಲಕ ಅವರನ್ನ ಮೌನವಾಗಿರುವಂತೆ ಮಾಡುತ್ತಿದ್ದ. ಆದರೆ, ಈ ವಿಡಿಯೋಗಳಲ್ಲಿ ಪ್ರಜ್ವಲ್ ಮುಖ ಮಾತ್ರ ಸೋರಿಸಿರಲಿಲ್ಲ. ಸೋರಿಕೆಯಾಗಿದ್ದ ಇತರೆ ವಿಡಿಯೋಗಳಲ್ಲಿದ್ದ ದೇಹಗಳ ಭಾಗಗಳು, ಪ್ರಸ್ತುತ ಅಪರಾಧ ಸಾಬೀತಾಗಿರುವ ಪ್ರಕರಣದ ವಿಡಿಯೋದಲ್ಲಿದ್ದ ದೇಹದ ಭಾಗಗಳೊಂದಿಗೆ ಜೋಡಿಸಿ, ಗುರ್ತಿಸಲು ವಿಧಿವಿಜ್ಞಾನ ಸಾಧನಗಳನ್ನು ಬಳಕೆ ಮಾಡಲಾಯಿತು.

Prajwal Revanna sheds tears in the courtroom
ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ: Pen drives ಹಂಚಿದವರ ವಿರುದ್ಧ ಕಠಿಣ ಕ್ರಮ; 2 ವಾರದಲ್ಲಿ charge-sheet

ತನಿಖೆ ವೇಳೆ ನಮ್ಮ ತಂಡ ಎರಡು ಅಂತರರಾಷ್ಟ್ರೀಯ ಪ್ರಕರಣ ಅಧ್ಯಯನ ನಡೆಸಿತು. ಸ್ಪ್ರಿಂಗರ್ ಮತ್ತು ಟರ್ಕಿಯ ಜರ್ನಲ್ ಆಫ್ ಫೋರೆನ್ಸಿಕ್ ಮೆಡಿಸಿನ್ & ಫೋರೆನ್ಸಿಕ್ ಸೈನ್ಸಸ್ ವಿಧಿವಿಜ್ಞಾನ, ಔಷಧ ಮತ್ತು ರೋಗಶಾಸ್ತ್ರದ ಮೂಲಕ ಶಿಶ್ನದ ಚಿತ್ರ ಹೋಲಿಕೆ ಮಾಡಿ ಅಪರಾಧಿಯನ್ನು ಗುರುತಿಸಿತ್ತು. ಈ ನಿಟ್ಟಿನಲ್ಲಿ ನಾವು ತನಿಖೆ ಆರಂಭಿಸಲು ಮುಂದಾಗಿದ್ದೆವು. ಆದರೆ, ಸರ್ಕಾರಿ ಆಸ್ಪತ್ರೆಯ ವೈದ್ಯರು ವೈದ್ಯಕೀಯ ನೀತಿಶಾಸ್ತ್ರದ ಉಲ್ಲಂಘನೆಯನ್ನು ಉಲ್ಲೇಖಿಸಿ ಪ್ರಜ್ವಲ್ ಅವರ ಜನನಾಂಗದ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದರು. ಹೀಗಾಗಿ ತನಿಖೆ ಆರಂಭದಲ್ಲಿ ತಡೆಯನ್ನು ಎದುರಿಸುವಂತಾಗಿತ್ತು.

ಅಪರಾಧಿಯನ್ನು ವೈದ್ಯಕೀಯವಾಗಿ ಪರಿಶೀಲಿಸುವ ವೈದ್ಯರು, ಛಾಯಾಚಿತ್ರ ತೆಗೆದುಕೊಳ್ಳುವ ಅಧಿಕಾರ ನಮಗಿಲ್ಲ ಎಂದು ಹೇಳಿದರು. ಬಳಿಕ ಬಲವಾದ ಕಾರಣಗಳನ್ನು ಉಲ್ಲೇಖಿಸಿ ಎಸ್‌ಐಟಿ ನ್ಯಾಯಾಲಯದ ಅನುಮತಿಯನ್ನು ಕೋರಿತು. ನ್ಯಾಯಾಲಯದ ಅನುಮತಿಯೊಂದಿಗೆ, ಅತ್ಯಾಚಾರ ವೀಡಿಯೊದಲ್ಲಿನ ಪುರುಷ ಅಂಗವು ಪ್ರಜ್ವಲ್ ಅವರದ್ದೇ ಎಂದು ಪರಿಶೀಲಿಸಲು ಛಾಯಾಚಿತ್ರಗಳನ್ನು ತೆಗೆದುಕೊಂಡು ವಿಧಿವಿಜ್ಞಾನ ಪರೀಕ್ಷೆ ಮಾಡಲಾಯಿತು.

ಆರೋಪಿ ಮತ್ತು ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿಯ ರೂಪವಿಜ್ಞಾನದ ಲಕ್ಷಣಗಳನ್ನು, ಅವನ ಗುರುತನ್ನು ಹೊಂದಿಸಲು ಹೋಲಿಸಲಾಯಿತು. ಚರ್ಮದ ಗಾಯಗಳು (ನೆವಸ್), ಗಾಯದ ಗುರುತುಗಳು, ಪುರುಷ ಜನನಾಂಗಗಳ ಆಕಾರ, ಚರ್ಮದ ಬಣ್ಣ, ಕೂದಲಿನ ಮಾದರಿ, ವೀಡಿಯೊದಲ್ಲಿ ಬಹಿರಂಗಗೊಂಡ ದೇಹದ ಭಾಗಗಳ ಮೈಕಟ್ಟು, ಉದಾಹರಣೆಗೆ ಕೈ ಮುಂತಾದ ಹೋಲಿಕೆಗಳು/ವ್ಯತ್ಯಾಸಗಳನ್ನು ಪರಿಶೀಲಿಸಲಾಯಿತು. ಇದರಿಂದ ಅಪರಾಧಿಯನ್ನು ಗುರುತಿಸಲಾಯಿತು.

Prajwal Revanna sheds tears in the courtroom
ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಜೈಲು ಶಿಕ್ಷೆ

ಹದಿಹರೆಯದ ಹುಡುಗಿಯೊಬ್ಬಳೊಂದಿಗೆ ತನ್ನ ಜನನಾಂಗಗಳ ಛಾಯಾಚಿತ್ರವನ್ನು ಪ್ರಜ್ವಲ್ ನಲ್ಲಿ ಆನ್'ಲೈನ್ ನಲ್ಲಿ ಹಂಚಿಕೊಂಡಿದ್ದ. ಇದೂ ಕೂಡ ಪ್ರಕರಣದಲ್ಲಿ ಪ್ರಗತಿ ಸಾಧಿಸಲು ಸಹಾಯ ಮಾಡಿತು. ಚಿತ್ರದ ದಿನಾಂಕ ಮತ್ತು ಸಮಯದ ಜೊತೆಗೆ ಚಿತ್ರವನ್ನು ಹಂಚಿಕೊಂಡ ಕಂಪ್ಯೂಟರ್‌ನ IP ವಿಳಾಸವನ್ನು ಬಳಸಿಕೊಂಡು ಅಪರಾಧಿಯನ್ನು ಪತ್ತೆ ಮಾಡಲಾಯಿತು. ವಿಧಿವಿಜ್ಞಾನ ವೈದ್ಯಕೀಯ ತಜ್ಞರು, ಚರ್ಮರೋಗ ತಜ್ಞರು ಮತ್ತು ಮೂತ್ರಶಾಸ್ತ್ರಜ್ಞರ ಸಹಾಯದಿಂದ ಅಪರಾಧಿಯನ್ನು ಗುರುತಿಸಲು ಚಿತ್ರದೊಂದಿಗೆ ಹೊಂದಾಣಿಕೆ ಮಾಡಲಾಯಿತು. ಪ್ರಜ್ವಲ್ ಪ್ರಕರಣದಲ್ಲಿ, ಅತ್ಯಾಚಾರ ನಡೆದ ಅಪರಾಧದ ಸ್ಥಳವನ್ನು ಮರುಸೃಷ್ಟಿಸಲು ಫೋರೆನ್ಸಿಕ್ ಪರಿಕರಗಳನ್ನು ಸಹ ಬಳಸಲಾಯಿತು. ಅತ್ಯಾಚಾರ ನಡೆದ ಕೊಠಡಿಯಲ್ಲಿ ಗುರುತುಗಳ ಮರೆ ಮಾಚಲು ಪ್ರಯತ್ನಗಳು ನಡೆದಿತ್ತು. ಗೋಡೆಗಳಿಗೆ ಬಣ್ಣ ಬಳಿಯಲಾಗಿತ್ತು. ಆದರೆ, ಗುರುತುಗಳು ಹೋಗಿರಲಿಲ್ಲ. FSL ತಂಡವು ಬಹಳ ಎಚ್ಚರಿಕೆಯಿಂದ ಎಲ್ಲವನ್ನೂ ಪರಿಶೀಲಿಸಿತು. ಅಂತಿಮವಾಗಿ ನಮಗೆ ಸಾಕ್ಷ್ಯ ದೊರೆಯಿತು. ಈ ಪ್ರಕರಣದ ಸಂಪೂರ್ಣ ತನಿಖೆಯು ಬಹುತೇಕ ಡಿಜಿಟಲ್ ತಂತ್ರಜ್ಞಾನ ಮತ್ತು ವಿಧಿವಿಜ್ಞಾನ ಮತ್ತು ಪರೀಕ್ಷೆಯಿಂದ ಪಡೆದ ಪುರಾವೆಗಳ ಮೇಲೆ ನಿಂತಿದೆ ಎಂದು ವಿವರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com