
ಬೆಂಗಳೂರು: ಹೆಬ್ಬಾಳದ ಎಸ್ಟೀಮ್ ಮಾಲ್ ನಿಂದ ಜಿಕೆವಿಕೆ ವಿಶ್ವವಿದ್ಯಾಲಯದವರೆಗೆ 1.5 ಕಿ.ಮೀ ಸುರಂಗ ರಸ್ತೆಯನ್ನು ನಿರ್ಮಿಸಲು ರಾಜ್ಯ ಸರ್ಕಾರ ಯೋಜಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಹೆಬ್ಬಾಳ ನಾಗಾವರ ಕಡೆ ಎಸ್ಟೀಮ್ ಮಾಲ್ ನಿಂದ ವಿಶ್ವವಿದ್ಯಾಲಯದ ತನಕ ಹೊಸ ಟನಲ್ ರಸ್ತೆ ಮಾಡಲಾಗುವುದು. ಇದನ್ನು ಸಧ್ಯದಲ್ಲೇ ಸಂಚಿವ ಸಂಪುಟದ ಮುಂದೆ ಮಂಡಿಸಲಾಗುತ್ತದೆ. ಮುಖ್ಯ ಟನಲ್ ರಸ್ತೆ ಬೇರೆ, ಈ 1.5 ಕಿಮೀ ಉದ್ದದ ಟನಲ್ ರಸ್ತೆ ಬೇರೆ ಇರಲಿದೆ. ಇದನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು" ಎಂದರು.
ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ ಆದರೆ ಕೇವಲ ಮೂರೇ ಮೆಟ್ರೋ ರೈಲುಗಳಿವೆ ಎಂದು ಕೇಳಿದಾಗ, "ಕೆಲವು ಕಾರಣಾಂತರಗಳಿಂದ ರೈಲುಗಳು ಬಂದಿಲ್ಲ. ಚೀನಾದಿಂದ ಒಂದಷ್ಟು ರೈಲುಗಳನ್ನು ತೆಗೆದುಕೊಂಡಿದ್ದರು. ಆದರೆ ಅದರಲ್ಲಿ ಒಂದಷ್ಟು ತೊಡಕುಗಳಿವೆ. ಈಗ ಇಟಾನಗರ ಸೇರಿದಂತೆ ಇತರೆಡೆಯಿಂದ ರೈಲುಗಳು ಬರಬೇಕು. ಅಲ್ಲಿಂದ ಬಂದ ನಂತರ ರೈಲು ಕಾರ್ಯಾಚರಣೆ ಅವಧಿ ಹೆಚ್ಚಳ ಮಾಡಲಾಗುವುದು" ಎಂದರು.
ಈ ಮಾರ್ಗ ಸಂಪೂರ್ಣಗೊಳ್ಳಲು ದುಡಿದ ಎಲ್ಲಾ ಅಧಿಕಾರಿಗಳು, ಗುತ್ತಿಗೆದಾರರು, ಕಾರ್ಮಿಕರನ್ನು ರಾಜ್ಯ ಸರ್ಕಾರದವತಿಯಿಂದ ಅಭಿನಂದಿನೆ ತಿಳಿಸುತ್ತೇನೆ. ಈ ಹಿಂದಿನ ಎಂಡಿಯವರಾದ ಮಹೇಶ್ವರ್ ರಾವ್ ಅವರು ಹಾಗೂ ಅನೇಕ ಸಿಬ್ಬಂದಿ ಇದಕ್ಕಾಗಿ ದುಡಿದಿದ್ದಾರೆ" ಎಂದರು. ಟನಲ್ ರಸ್ತೆ ಟೆಂಡರ್ ಅಲ್ಲಿ ಅದಾನಿ ಕಂಪೆನಿ ಕೂಡ ಭಾಗವಹಿಸಲಿದೆ ಎಂದು ಕೇಳಿದಾಗ, "ನೀವು ಸಹ ಭಾಗವಹಿಸಿ" ಎಂದು ಉತ್ತರಿಸಿದರು.
ಹೊಸದಾಗಿ ನಿರ್ಮಾಣವಾಗಿರುವ ಹೆಬ್ಬಾಳ ಜಂಕ್ಷನ್ ಉದ್ಘಾಟನೆ ಬಗ್ಗೆ ಮಾತನಾಡಿ ಅವರು, "ಆಗಸ್ಟ್ 15 ರ ಒಳಗೆ ಮುಖ್ಯಮಂತ್ರಿಯವರ ದಿನಾಂಕ ಪಡೆದು ಉದ್ಘಾಟನೆ ಮಾಡಲಾಗುವುದು. ಈಗ ಕೆ ಆರ್ ಪುರಂ ನಿಂದ ಮೇಖ್ರಿ ವೃತ್ತದ ಕಡೆ ಮಾತ್ರ ಲೋಕಾರ್ಪಣೆ ಮಾಡಲಾಗುವುದು. ಇನ್ನೊಂದು ಭಾಗದ ಮೇಲ್ಸೇತುವೆಯನ್ನು ಆನಂತರ ಮಾಡಲಾಗುವುದು " ಎಂದು ಹೇಳಿದರು.
ಬೆಂಗಳೂರಿನ ಅಭಿವೃದ್ಧಿಗೆ ಎಷ್ಟು ಮಾಡಿದರು ಸಾಲದು. ಅಧಿವೇಶನದ ವೇಳೆ ಇದರ ಬಗ್ಗೆ ಮಾತನಾಡುವೆ. ಅಧಿಕಾರಿಗಳಿಗೆ ಒಂದಷ್ಟು ಡೆಡ್ ಲೈನ್ ನೀಡಿದ್ದೇವೆ" ಎಂದರು. ಎರಡನೇ ಹಂತದ ನಗರಗಳಿಗೆ ಆದ್ಯತೆ ನೀಡುವ ಬಗ್ಗೆ ಕೇಳಿದಾಗ, "ಇದರ ಬಗ್ಗೆ ಹೊಸ ಆಲೋಚನೆ ಇದೆ, ಇದನ್ನು ಮುಂದೆ ತಿಳಿಸುತ್ತೇನೆ" ಎಂದರು. ಮೆಡ್ರೋ ಫೀಡರ್ ಬಸ್‌ಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡದಿರುವ ಬಗ್ಗೆ ಕೇಳಿದಾಗ, "ಇದರ ಬಗ್ಗೆ ಗಮನ ಹರಿಸುವೆ" ಎಂದು ತಿಳಿಸಿದರು.
Advertisement