ಬೆಳಗಾವಿ: ಅಪ್ರಾಪ್ತ ಬಾಲಕಿ ಚುಡಾಯಿಸಿದ್ದಕ್ಕೆ ST ಯುವಕರಿಬ್ಬರ ಮೇಲೆ ಮೇಲ್ಜಾತಿ ಗುಂಪಿನಿಂದ ಹಲ್ಲೆ!

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಗೊಡಚಿ ಗ್ರಾಮದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
youth assaulted
ಯುವಕರ ಮೇಲೆ ಹಲ್ಲೆ
Updated on

ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಗೊಡಚಿ ಗ್ರಾಮದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಅಪ್ರಾಪ್ತ ಬಾಲಕಿಯನ್ನು ಚುಡಾಯಿಸಿದ ಆರೋಪದ ಮೇಲೆ ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯದ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ. ಯುವಕನೋರ್ವನನ್ನು ಮರಕ್ಕೆ ಕಟ್ಟಿ ಥಳಿಸಲಾಗಿದ್ದು, ಮತ್ತೊಬ್ಬನನ್ನು ಅವರ ಮನೆಯಲ್ಲೇ ಹಲ್ಲೆ ಮಾಡಲಾಗಿದೆ. ಈ ಘಟನೆ ಆಗಸ್ಟ್ 5ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಸಂತ್ರಸ್ತ ಯುವಕರನ್ನು ಗೊಡಚಿ ನಿವಾಸಿಗಳಾದ ಈರಣ್ಣ ವಿಠ್ಠಲ್ ನಾಯ್ಕರ್ (18) ಮತ್ತು ಲಕ್ಷ್ಮಣ ಮಲ್ಲಪ್ಪ ಚಿಪ್ಪಳ್ಳಟ್ಟಿ (18) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ದಾಳಿಕೋರರ ಕುಟುಂಬದ ಅಪ್ರಾಪ್ತ ಬಾಲಕಿಯನ್ನು ಚುಡಾಯಿಸಿದ ಆರೋಪದ ಮೇಲೆ ಮೇಲ್ಜಾತಿಯ ಗ್ರಾಮಸ್ಥರ ಗುಂಪೊಂದು ಯುವಕರ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.

ಆಗಸ್ಟ್ 5 ರಂದೇ ಘಟನೆ ನಡೆದಿದ್ದರೂ ಸಂತ್ರಸ್ತ ಯುವಕರು ಮತ್ತು ಅವರ ಕುಟುಂಬಗಳು ತಕ್ಷಣ ಪೊಲೀಸ್ ದೂರು ದಾಖಲಿಸಲಿಲ್ಲ. ಬದಲಿಗೆ ಗ್ರಾಮದ ಹಿರಿಯರ ಮೂಲಕ ವಿಷಯವನ್ನು ಇತ್ಯರ್ಥಪಡಿಸಲು ನಿರ್ಧರಿಸಿದರು. ಆದರೆ, ಹಲ್ಲೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಪೊಲೀಸರು ಸಂತ್ರಸ್ತರಿಗೆ ದೂರು ನೀಡುವಂತೆ ಒತ್ತಾಯಿಸಿದರು. ಈ ಸಂಬಂಧ ಆಗಸ್ಟ್ 8 ರಂದು ಕಟ್ಕೋಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಈರಣ್ಣ ಪಕನಟ್ಟಿ, ಬಸನಗೌಡ ಪಾಟೀಲ್, ಪ್ರದೀಪ್ ಪಕನಟ್ಟಿ, ಮಹಾಂತೇಶ್ ಪಕನಟ್ಟಿ, ಸಚಿನ್ ಪಕನಟ್ಟಿ, ನಿಂಗರಾಜ್ ಪಕನಟ್ಟಿ ಮತ್ತು ಸಂಗಪ್ಪ ಪಕನಟ್ಟಿ ಎಂಬುವರ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದ್ದು, ಪೊಲೀಸರು ಈರಣ್ಣ ಪಕನಟ್ಟಿ, ಸಚಿನ್ ಪಕನಟ್ಟಿ ಮತ್ತು ಮಹಾಂತೇಶ್ ಪಕನಟ್ಟಿ ಎಂಬುವರನ್ನು ಬಂಧಿಸಿದ್ದಾರೆ.

youth assaulted
ತುಮಕೂರು: ಅತ್ತೆಯನ್ನು ತುಂಡು ತುಂಡಾಗಿ ಕತ್ತರಿಸಿದ್ದ ದಂತವೈದ್ಯನ ಬಂಧನ

ಏತನ್ಮಧ್ಯೆ, ಅಪ್ರಾಪ್ತ ಬಾಲಕಿಯ ಕುಟುಂಬವು ಅದೇ ದಿನ ಇಬ್ಬರು ಯುವಕರ ವಿರುದ್ಧ ಪ್ರತಿ-ದೂರು ದಾಖಲಿಸಿದೆ. ಎರಡೂ ಪ್ರಕರಣಗಳು ಈಗ ಕಟ್ಕೋಲ್ ಪೊಲೀಸರಿಂದ ತನಿಖೆಯಲ್ಲಿವೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಈರಣ್ಣ ಮತ್ತು ಲಕ್ಷ್ಮಣ್ ನನ್ನು ಡಿಸ್ಜಾರ್ಜ್ ಮಾಡಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com